ಕರೊನಾದಿಂದ ಬಾಲಿವುಡ್ ಹಿರಿಯ ನಟ ದಿಲೀಪ್​ ಕುಮಾರ್ ಸಹೋದರ ನಿಧನ

2020_8$largeimg_1771725411
Published on

ಕರೊನಾದಿಂದ ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್​ನ ಹಿರಿಯ ನಟ ದಿಲೀಪ್​ ಕುಮಾರ್ ಸಹೋದರ ಅಸ್ಲಮ್​ ಖಾನ್​ ಶುಕ್ರವಾರ ನಿಧನರಾದರು.

ಮುಂಬೈನ ಬಾಂದ್ರಾದಲ್ಲಿರುವ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ. ಆಗಸ್ಟ್ 16ರಂದು ದಿಲೀಪ್​ ಕುಮಾರ್ ಸಹೋದರರಾದ ಎಹ್ಸಾನ್​ ಖಾನ್​ ಮತ್ತು ಅಸ್ಲಮ್​ ಖಾನ್​ ಕರೊನಾ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

ಸಕ್ಕರೆ ಕಾಯಿಲೆ, ಬಿಪಿ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಅಸ್ಲಮ್​ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಾದಾಗಲೇ ಇಬ್ಬರ ಪರಿಸ್ಥಿತಿ ಗಂಭೀರ ಇದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದರು. ಬಹು ಅಂಗಾಗಗಳಿಗೆ ಹಾನಿ ಉಂಟಾಗಿರುವುದರಿಂದ ಚೇತರಿಕೆ ಕಷ್ಟಕರ ಎಂದಿದ್ದರು.

ಸಹೋದದರ ಚೇತರಿಕೆ ಸಲುವಾಗಿ ಸೋಷಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳಿಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ದಿಲೀಪ್​ ಕುಮಾರ್​ ಮನವಿ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net