ಫ್ರಾನ್ಸ್​ನ ಥ್ರೀ ಕಾಂಟಿನೆಂನ್ಟ್ಸ್​ ಫೆಸ್ಟಿವಲ್​ನಲ್ಲಿ ರಿಷಬ್ ಶೆಟ್ಟಿ ನಿರ್ಮಾಣದ 'ಶಿವಮ್ಮ'ಗೆ ಪ್ರಶಸ್ತಿ

Shivamma 2
Published on

ಬೆಂಗಳೂರು: ರಿಷಬ್ ಶೆಟ್ಟಿ ಫಿಲಂಸ್​ನಡಿ ರಿಷಬ್​ ಶೆಟ್ಟಿ ನಿರ್ಮಿಸಿರುವ 'ಶಿವಮ್ಮ' ಚಿತ್ರವು ಈಗಾಗಲೇ NFDC ಆಯೋಜಿತ ಫಿಲಂ ಬಜಾರ್​​ನ ವರ್ಕ್ ಇನ್ ಪ್ರೋಗ್ರೆಸ್​​ನಲ್ಲಿ ಜಯಿಸಿ, ಬೂಸಾನ್ ಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈಗ ಆ ಚಿತ್ರಕ್ಕೆ ಫ್ರಾನ್ಸ್​ನ ನಾಂಟೆಸ್​ನಲ್ಲಿ ನೆಡೆದ 3 ಕಾಂಟಿನೆಂಟ್ಸ್ ಫೆಸ್ಟಿವಲ್​​ನಲ್ಲಿ 'ಯುವ ತೀರ್ಪುಗಾರರ ಪ್ರಶಸ್ತಿ' ಪಡೆದುಕೊಂಡಿದೆ.

ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ೪೬ ವರ್ಷದ ಶಿವಮ್ಮ ಎನ್ನುವ ಮಹಿಳೆ ತನ್ನ ಪಾರ್ಶ್ವವಾಯು ಪೀಡಿತ ಪತಿಯನ್ನು ಸಾಕಿಕೊಂಡು, ತನ್ನ ಮಕ್ಕಳ ಭವಿಷ್ಯಕ್ಕಾಗಿ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪರವನ್ನು ಭರವಸೆಯಿಂದ ಪಾಲಿಸುವ ಹೋರಾಟದ ಕಥೆ ಈ 'ಶಿವಮ್ಮ' ಚಿತ್ರದ್ದು.

ಈ ಚಿತ್ರವು ಕೊಪ್ಪಳ ಜಿಲ್ಲೆಯ ಕುಕ್ನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಣ ವಾಗಿದ್ದು, ನಟರೆಲ್ಲ ಅದೇ ಊರಿನವರಾಗಿದ್ದು ಎಲ್ಲರೂ ಮೊದಲ ಬಾರಿ ಚಿತ್ರದಲ್ಲಿ ನಟಿಸಿರುವುದು ವಿಶೇಷ.

'ಶಿವಮ್ಮ' ಚಿತ್ರವನ್ನು ಜೈಶಂಕರ್ ಅರ್ಯ ನಿರ್ದೇಶನ ಮಾಡಿದ್ದು, ಶರಣಮ್ಮ ಚಟ್ಟಿ, ಚನ್ನೆಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶ್ರುತಿ ಕೊಂಡೇನಹಳ್ಳಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net