ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದ ಸಂಜೌಲಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮಸೀದಿ ವಿರುದ್ಧ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಶುಕ್ರವಾರ ಮುನ್ಸಿಪಲ್ ಕಮಿಷನರ್ ನ್ಯಾಯಾಲಯವು ಪ್ರಮುಖ ಆದೇಶ ನೀಡಿದೆ. ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಮಸೀದಿಯ ಎರಡು ಮಹಡಿಗಳನ್ನು ಕೆಡವಲು ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಪೋರ್ಟ್ ಬ್ಲೇರ್ಗೆ ಮರುನಾಮಕರಣ: ಇನ್ನು ಮುಂದೆ ಶ್ರೀವಿಜಯಪುರ!
ಸೆ.30ರೊಳಗೆ ಅಕ್ರಮ ಕಟ್ಟಡ ಕೆಡವಲು ಮಸೀದಿ ಆಡಳಿತ ಮಂಡಳಿಗೆ ಗಡುವು ನೀಡಿದೆ. ತೀರ್ಪು ಹೊರಬೀಳುವವರೆಗೂ ಮಸೀದಿಯನ್ನು ಸೀಲ್ ಮಾಡುವಂತೆ ಆಯುಕ್ತರು ಈ ಹಿಂದೆ ಆದೇಶಿಸಿದ್ದರು.
ಮಸೀದಿಯ ಅಕ್ರಮ ನಿರ್ಮಾಣದ ವಿರುದ್ಧ ಹಿಂದೂ ಸಂಘಟನೆಗಳು ಶಿಮ್ಲಾದ ಮಂಡಿಯಲ್ಲಿ ಬುಧವಾರ ಪ್ರತಿಭಟನೆಗೆ ಕರೆ ನೀಡಿದ್ದವು. ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ದಾಟಿ ಹೋಗುತ್ತಿದ್ದಂತೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿ ಸಂಘಟಕರನ್ನು ಚದುರಿಸಿದ್ದರು.
ಶಿಮ್ಲಾದ ಉದ್ವಿಗ್ನ ಘಟನೆಗಳ ಬಗ್ಗೆ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖ್ ಪ್ರತಿಕ್ರಿಯಿಸಿದ್ದು, ಅಕ್ರಮ ಕಟ್ಟಡಗಳ ವಿರುದ್ಧ ಧರ್ಮ ಭೇದವಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಸೆನ್ಸೆಕ್ಸ್ 71, ನಿಫ್ಟಿ 32 ಅಂಕಕ್ಕೆ ಕುಸಿತ: ತೈಲ, ಹೆಲ್ತ್‌ಕೇರ್ ಷೇರುಗಳಿಗೆ ಹೆಚ್ಚಿದ ಬೇಡಿಕೆ