ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿಯಾದ ಪೋರ್ಟ್ ಬ್ಲೇರ್ ಅನ್ನು ಸರ್ಕಾರ ಶುಕ್ರವಾರ ಶ್ರೀವಿಜಯಪುರ ಎಂದು ಮರುನಾಮಕರಣ ಮಾಡಿದೆ. ಗೃಹ ಸಚಿವ ಅಮಿತ್ ಶಾ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸೆನ್ಸೆಕ್ಸ್ 71, ನಿಫ್ಟಿ 32 ಅಂಕಕ್ಕೆ ಕುಸಿತ: ತೈಲ, ಹೆಲ್ತ್‌ಕೇರ್ ಷೇರುಗಳಿಗೆ ಹೆಚ್ಚಿದ ಬೇಡಿಕೆ
ದೇಶವನ್ನು ಗುಲಾಮಗಿರಿಯ ಎಲ್ಲಾ ಚಿಹ್ನೆಗಳಿಂದ ಮುಕ್ತಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದಿಂದ ಪ್ರೇರಿತರಾಗಿ ಶುಕ್ರವಾರ(ಸೆ.13) ಗೃಹ ಸಚಿವಾಲಯವು ಪೋರ್ಟ್ ಬ್ಲೇರ್ ಅನ್ನು ‘ಶ್ರೀ ವಿಜಯಪುರಂ’ ಎಂದು ಹೆಸರಿಸಲು ನಿರ್ಧರಿಸಿದೆ ಎಂದು ಶಾ ತಿಳಿಸಿದ್ದಾರೆ.
Congratulations to the people of Andaman & Nicobar Islands as the new integrated terminal building at Veer Savarkar International Airport in Port Blair has been inaugurated by PM @narendramodi Ji today.
The new architectural marvel will fulfill their aspirations of occupying the… pic.twitter.com/o2NXqa41DY
— Amit Shah (@AmitShah) July 18, 2023
ಇದಕ್ಕೂ ಮೊದಲು, 23 ಜನವರಿ 2023 ರಂದು ನೇತಾಜಿಯವರ 126 ನೇ ಜನ್ಮದಿನದಂದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ದ್ವೀಪಗಳಿಗೆ ಪರಮವೀರ ಚಕ್ರ ವಿಜೇತರ ಹೆಸರನ್ನು ಇಡಲು ಪ್ರಧಾನಿ ಮೋದಿ ನಿರ್ಧರಿಸಿದ್ದರು.
28 ಡಿಸೆಂಬರ್ 2018 ರಂದು, ಹ್ಯಾವ್‌ಲಾಕ್ ದ್ವೀಪ, ನೀಲ್ ದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್‌ನ ರಾಸ್ ದ್ವೀಪಗಳ ಹೆಸರನ್ನು ಬದಲಾಯಿಸಲಾಯಿತು. ಹ್ಯಾವ್ಲಾಕ್ ದ್ವೀಪಕ್ಕೆ ಸ್ವರಾಜ್ ದ್ವೀಪ, ನೀಲ್ ದ್ವೀಪಕ್ಕೆ ಶಹೀದ್ ದ್ವೀಪ ಮತ್ತು ರಾಸ್ ದ್ವೀಪಕ್ಕೆ ನೇತಾಜಿ ಸುಭಾಷ್ ಚಂದ್ರ ದ್ವೀಪ ಎಂದು ಹೆಸರಿಸಲಾಗಿತ್ತು ಎಂದು ಅಮಿತ್ ಶಾ ಬರೆದುಕೊಂಡಿದ್ದಾರೆ.
‘ಶ್ರೀ ವಿಜಯಪುರಂ’ ಹೆಸರು ಸ್ವಾತಂತ್ರ್ಯ ಹೋರಾಟ ಮತ್ತು ಅದರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ. ಈ ದ್ವೀಪವು ಸ್ವಾತಂತ್ರ್ಯ ಮತ್ತು ಇತಿಹಾಸದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಚೋಳ ಸಾಮ್ರಾಜ್ಯದಲ್ಲಿ ನೌಕಾನೆಲೆಯ ಪಾತ್ರವನ್ನು ನಿರ್ವಹಿಸಿದ ಈ ದ್ವೀಪವು ಇಂದು ದೇಶದ ಭದ್ರತೆ ಮತ್ತು ಅಭಿವೃದ್ಧಿಯನ್ನು ವೇಗಗೊಳಿಸಲು ಸಿದ್ಧವಾಗಿದೆ. ಈ ದ್ವೀಪವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ ಸ್ಥಳವಾಗಿದೆ. ವೀರ್ ಸಾವರ್ಕರ್ ಸೇರಿದಂತೆ ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಇಲ್ಲಿನ ಸೆಲ್ಯುಲಾರ್ ಜೈಲಿಗೆ ಬ್ರಿಟಿಷರು ಹಾಕಿದ್ದರು.
ವಿಶ್ವದ ಮೊದಲ ಖಾಸಗಿ ಬಾಹ್ಯಾಕಾಶ ನಡಿಗೆ.. 700 ಕಿಮೀ ಎತ್ತರದಲ್ಲಿ ನೌಕೆಯಿಂದ ಹೊರಬಂದ ಇಬ್ಬರು ಗಗನಯಾತ್ರಿಗಳು!