ಮುಂಬೈ: ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ಸೆಪ್ಟೆಂಬರ್ 13 ರಂದು ಸೆನ್ಸೆಕ್ಸ್ 71 ಅಂಕಗಳ ಕುಸಿತದೊಂದಿಗೆ 82,890 ಕ್ಕೆ ಕೊನೆಗೊಂಡಿತು. ನಿಫ್ಟಿ ಕೂಡ 32 ಅಂಕ ಕುಸಿದು 25,356 ಮಟ್ಟದಲ್ಲಿ ಮುಕ್ತಾಯವಾಯಿತು.
ಇದನ್ನೂ ಓದಿ: ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್ ಇರಬಹುದು!!
30 ಸೆನ್ಸೆಕ್ಸ್ ಷೇರುಗಳ ಪೈಕಿ 19 ಕುಸಿತ ಕಂಡಿದ್ದು, 11 ಏರಿಕೆ ಕಂಡಿವೆ. 50 ನಿಫ್ಟಿ ಷೇರುಗಳ ಪೈಕಿ 32 ಕುಸಿತ ಕಂಡಿದ್ದು, 18 ಏರಿಕೆ ಕಂಡಿವೆ. ಎಫ್‌ಎಂಸಿಜಿ, ತೈಲ ಮತ್ತು ಅನಿಲ ಹಾಗೂ ಹೆಲ್ತ್‌ಕೇರ್ ಷೇರುಗಳಲ್ಲಿ ಮಾರಾಟ ಕಂಡುಬಂದರೆ, ಇತರ ಎಲ್ಲ ವಲಯಗಳ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ.
ಐಟಿಸಿ, ರಿಲಯನ್ಸ್, ಭಾರ್ತಿ ಏರ್‌ಟೆಲ್ ಮತ್ತು ಇನ್ಫೋಸಿಸ್ ಮಾರುಕಟ್ಟೆಯಲ್ಲಿ ಹೆಚ್ಚು ನಷ್ಟ ಅನುಭವಿಸಿದವು.
ಗುರುವಾರ (ಸೆ.12) ರಂದು ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ 83,116 ಮತ್ತು ನಿಫ್ಟಿ 25,433 ರ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ನಂತರ ಈ ಎರಡೂ ಸೂಚ್ಯಂಕಗಳು ಸ್ವಲ್ಪಮಟ್ಟಿಗೆ ಇಳಿದವು. ಸೆನ್ಸೆಕ್ಸ್ 1,439 ಅಂಕಗಳು (ಶೇ.1.77) 82,962 ಕ್ಕೆ ಏರಿತು ಮತ್ತು ನಿಫ್ಟಿ 470 (ಶೇ.1.89) ಅಂಕಗಳನ್ನು ಏರಿ 25,388 ಕ್ಕೆ ತಲುಪಿತ್ತು.
ಹೈದರಾಬಾದ್ನಲ್ಲಿ ಸೆ.28ಕ್ಕೆ ಸಾರ್ವಜನಿಕ ಗಣೇಶೋತ್ಸವ: 25ಸಾವಿರ ಪೊಲೀಸ್ ಯೋಜನೆ!