ಹೈದರಾಬಾದ್: ಮುಂಬೈ ನಂತೆಯೇ ಹೈದರಾಬಾದ್‌ನಲ್ಲಿಯೂ ಸಾರ್ವಜನಿಕ ಗಣೇಶೋತ್ಸವಕ್ಕೆ ವಿಶೇಷತೆ ಇರುತ್ತದೆ. ಈ ಬಾರಿಯೂ ಅದ್ಧೂರಿ ಮೆರವಣಿಗೆ ಮತ್ತು ಸಹಸ್ರಾರು ಸಂಖ್ಯೆಯ ಗಣೇಶ ಮೂರ್ತಿಗಳ ವಿಸರ್ಜನೆ ಸೆ.28ಕ್ಕೆ ನಡೆಯಲಿದೆ. ಮೇಲ್ವಿಚಾರಣೆಗೆ 25ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಇದನ್ನೂ ಓದಿ: ತನಿಖಾಧಿಕಾರಿಗಳಿಗೆ ಪಾಸ್‌ಪೋರ್ಟ್ ಹಸ್ತಾಂತರಿಸಿ: ವೈಎಸ್ಆರ್ ಕಾಂಗ್ರೆಸ್ ನಾಯಕರಿಗೆ ಸುಪ್ರೀಂಕೋರ್ಟ್ ಸೂಚನೆ
ಈ ವರ್ಷದ ಗಣೇಶ ಮೂರ್ತಿಗಳ ಮೆರವಣಿಗೆ ಮತ್ತು ನಿಮಜ್ಜನವನ್ನು ಸ್ಮರಣೀಯ ಘಟನೆಯನ್ನಾಗಿಸಲು ಸಾರ್ವಜನಿಕರು ಸಹಕರಿಸಬೇಕು. ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಹೈದರಾಬಾದ್ ನಗರದಲ್ಲಿ ಸಾರ್ವಜನಿಕವಾಗಿ ಅಂದಾಜು 1ಲಕ್ಷ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇವುಗಳಪೈಕಿ ಸುಮಾರು ಸೆಪ್ಟೆಂಬರ್ 28 ರಂದು ಸುಮಾರು 17 ಸಾವಿರ ಗಣೇಶ ಮೂರ್ತಿಗಳು ಮೆರವಣಿಗೆಯಲ್ಲಿ ಬರಬಹುದು. ಹೀಗಾಗಿ ಟ್ರಾಫಿಕ್, ಕಾನೂನು ಮತ್ತು ಸುವ್ಯವಸ್ಥೆ ಮತ್ತು ವಿಶೇಷ ಶಾಖೆಯ ಮುಖ್ಯಸ್ಥರೊಂದಿಗೆ ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
ಇನ್ನು ಹೈದರಾಬಾದ್ನ ಬಾಳಾಪುರ ಗಣೇಶ ದೇವಸ್ಥಾನದಿಂದ ಮೆರವಣಿಗೆ ಸಾಗಿಬರಲಿದ್ದು, ಮಾರ್ಗಮಧ್ಯದ ಪ್ರದೇಶಗಳಿಗೆ ಅವರು ತೆರಳಿ ತಪಾಸಣೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಆನಂದ್, 25,694 ಸಿಬ್ಬಂದಿ ಮತ್ತು 125 ಪ್ಲಟೂನ್‌ಗಳಿಗೆ ಪಡೆಗಳ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.