More

    ಬಿಜೆಪಿ ಕಾರ್ಯಕರ್ತರ ಕೊಲೆ ಪ್ರಕರಣ | ಎಂಟಿಬಿ ನಾಗರಾಜ್ ಮೇಲೆ ವಾಗ್ದಾಳಿ ನಡೆಸಿದ ಶರತ್ ಬಚ್ಚೇಗೌಡ

    ದೇವನಹಳ್ಳಿ: ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ಶರತ್​ ಬಚ್ಚೇಗೌಡ, ಕೊಲೆ ಪ್ರಕರಣಕ್ಕೆ ಸಾಕ್ಷಿ ಬಿಡುಗಡೆ ಮಾಡಿ ಬಚ್ಚೇಗೌಡ ತಿರುಗೇಟು ನೀಡಿದ್ದಾರೆ.

    ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶರತ್​ ಬಚ್ಚೇಗೌಡ “ಕಾಂಗ್ರೆಸ್ ಅವರು ಬಿಜೆಪಿಯವರನ್ನ ಕೊಲೆ ಮಾಡಿದ್ದಾರೆ ಅಂತ ಹೇಳ್ತಿದ್ದಾರೆ. ಆದ್ರೆ 2 ತಿಂಗಳಿಂದಷ್ಟೆ ಮೃತ ಕೃಷ್ಣಪ್ಪ ಮತ್ತು ಗಣೇಶಪ್ಪ ಬಿಜೆಪಿ ಸೇರ್ಪಡೆಯಾಗಿದ್ರು‌. ಸೇರ್ಪಡೆಯಾಗಿ ಸಚಿವರ ಜೊತೆ ಒಟ್ಟಾಗಿ ಪೋಟೋ ತೆಗೆಸಿಕೊಂಡಿದ್ದಾರೆ. ಜೊತೆಗೆ ಅಣ್ಣ ತಮ್ಮಂದಿರ ನಡುವೆ ಜಮೀನು ವ್ಯಾಜ್ಯ ನಡೆಯುತ್ತಿತ್ತು. ಇದೇ ಜಮೀನು ವ್ಯಾಜ್ಯ ಗಲಾಟೆಯಿಂದ ಅವರ ಕೊಲೆ ನಡೆದಿದೆ. ಆದ್ರೆ ಅವರ ಪಕ್ಷದವರೆ ಕಿತ್ತಾಡಿಕೊಂಡು ಕೊಲೆ ಮಾಡಿ ಕಾಂಗ್ರೆಸ್ ಮೇಲೆ ದೂರು ಹಾಕುತ್ತಿದ್ದಾರೆ.

    ಇದನ್ನೂ ಓದಿ: ಪ್ರಚಾರಕ್ಕೆ ಬಂದಿದ್ದ ವೇಳೆ ಶರತ್ ಬಚ್ಚೇಗೌಡ ಪತ್ನಿಯ ಕಾರಿನ ಗ್ಲಾಸ್ ಪುಡಿಮಾಡಿದ ಕಿಡಿಗೇಡಿಗಳು

    ಆ ಮೂಲಕ ತಾಲೂಕಿನಲ್ಲಿ ಶಾಂತಿ ಕದಡಿಸುವ ಕೆಲಸ ಮಾಜಿ ಸಚಿವರು ಮಾಡ್ತಿದ್ದಾರೆ. ಇಂತಹ ಕುತಂತ್ರ ರಾಜಕಾರಣವನ್ನ ಸಚಿವರು ಬಿಡಬೇಕು. ಕ್ಷೇತ್ರ ಅಭಿವೃದ್ದಿ ಮಾಡುವತ್ತಾ ಯೋಚನೆ ಮಾಡಿ ಅದು ಬಿಟ್ಟು ಕುತಂತ್ರ ರಾಜಕಾರಣ ಮಾಡಬೇಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇನ್ನು ನೇರವಾಗಿ ಎಂಟಬಿ ನಾಗರಾಜ್ ಮೇಲೆ ವಾಗ್ದಾಳಿ ನಡೆಸಿ ಶರತ್​ ಬಚ್ಚೇಗೌಡ, “ಹೊಸಕೋಟೆಯ ಗ್ರಾಮಗಳಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಎಂಟಬಿ ಕಡೆಯವರು ಹಲ್ಲೆ ಮಾಡಿದ್ದಾರೆ. ಚುನಾವಣೆಯಲ್ಲಿ ಸೋತ ಹತಾಶೆಯಲ್ಲಿ ಕೆಲವಡೆ ಮಹಿಳೆಯರು ವೃದ್ದರ ಮೇಲೆ‌ ಹಲ್ಲೆ ನಡೆದಿದೆ. ಹಲ್ಲೆಗಳನ್ನ ನಡೆಸುವ ಮೂಲಕ ಕ್ಷೇತ್ರದಲ್ಲಿ ಶಾಂತಿ ಕದಡಿಸುವ ಯತ್ನವನ್ನ ಮಾಡ್ತಿದ್ದಾರೆ. ಆದ್ರೆ ಅದಕ್ಕೆಲ್ಲ ಅವಕಾಶ ನೀಡಬಾರದು ಅಂತ ನಾವು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇವೆ.

    ಇದನ್ನೂ ಓದಿ: ಎಲ್ಲವನ್ನೂ ರಾಜಕೀಯ ಲಾಭಕ್ಕೆ ಬಳಸದಿರಿ : ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಸಚಿವ ಎಂಟಿಬಿ ನಾಗರಾಜ್ ಕಿಡಿ

    ಗಾಯಾಗಳಾದವರು ಕಾನೂನು ಹೋರಾಟ ಮಾಡ್ತಿದ್ದಾರೆ. ಆದ್ರೆ ಈ ನಡುವೆ ಅಣ್ಣ ತಮ್ಮಂದಿರ ಜಗಳದ ಕೊಲೆ ಕೇಸ್ ನಮ್ಮ ಮೇಲೆ ಹಾಕುವ ಯತ್ನ ಮಾಡ್ತಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ನಮ್ಮ ಹೆಸರು ಕೆಡೆಸುವ ಕೆಲಸ ಮಾಡ್ತಿದ್ದಾರೆ. ಇದಕ್ಕೆಲ್ಲ ಯಾರೂ ತಲೆಕೆಡಸಿಕೊಳ್ಳಬಾರದು. ದೂರುದಾರರೆ ಸ್ವತಃ ದೂರಿನಲ್ಲಿ ಕಾಂಗ್ರೆಸ್ ಬಗ್ಗೆ ಉಲ್ಲೇಖ ಮಾಡಿಲ್ಲ. ಆದ್ರೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಕುತಂತ್ರದಿಂದ ಈ ಕೆಲಸ ಮಾಡ್ತಿದ್ದಾರೆ” ಎಂದು ಆರೋಪಿಸಿ ವಾಗ್ದಾಳಿ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts