ಪ್ರಚಾರಕ್ಕೆ ಬಂದಿದ್ದ ವೇಳೆ ಶರತ್ ಬಚ್ಚೇಗೌಡ ಪತ್ನಿಯ ಕಾರಿನ ಗ್ಲಾಸ್ ಪುಡಿಮಾಡಿದ ಕಿಡಿಗೇಡಿಗಳು

Car
Published on

ದೇವನಹಳ್ಳಿ: ಹೊಸಕೋಟೆ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರ ಪತ್ನಿ ಪ್ರತಿಭಾ ಶರತ್ ಅವರ ಕಾರಿಗೆ ಕಿಡಿಗೇಡಿಗಳು ಹಾನಿಯುಂಟು ಮಾಡಿದ್ದಾರೆ. ಪ್ರಚಾರಕ್ಕೆಂದು ಬಂದಿದ್ದಾಗ ಪತ್ನಿಯ ಕಾರಿನ ಗ್ಲಾಸ್​ಗಳನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆ ಹೊಸಕೋಟೆಯ ಪಾರ್ವತಿಪುರದಲ್ಲಿ ನಡೆದಿದೆ.

ಕಿಡಿಗೇಡಿಗಳ ಕೃತ್ಯ

ಕಿಡಿಗೇಡಿಗಳು ಇನ್ನೋವಾ ಕ್ರಿಸ್ಟಾ ಕಾರಿನ ಗ್ಲಾಸ್​ಗಳನ್ನು ಒಡೆದು ಹಾಕಿ ಅಟ್ಟಹಾಸ ಮರೆದಿದ್ದಾರೆ. ಪತಿ ಶರತ್ ಬಚ್ಚೇಗೌಡ ಪರವಾಗಿ ನಗರದಲ್ಲಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ಪತ್ನಿ ಪ್ರತಿಭಾ ತೊಡಗಿಸಿಕೊಂಡಿದ್ದಾರೆ. ಕಾರನ್ನು ನಿಲ್ಲಿಸಿ ಪ್ರಚಾರದಲ್ಲಿ ತೊಡಗಿದ್ದ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಲವಂತ ಮಾಡಿ ಟಿಕೆಟ್ ನೀಡಲಾಗಿದೆ

ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿಗೆ ಸೂಕ್ತ ಅಭ್ಯರ್ಥಿ ಸಿಗದೆ, ಹಾಲಿ ವಿಧಾನ ಪರಿಷತ್‌ ಸದಸ್ಯರಿಗೆ ಬಲವಂತ ಮಾಡಿ ಟಿಕೆಟ್‌ ನೀಡಲಾಗಿದೆ. ಹೊಸಕೋಟೆಯಲ್ಲಿ ಕಮಲ ಬಾಡಿ ಹೋಗಿದೆ ಎಂದು ಪ್ರಚಾರದ ವೇಳೆ ಶರತ್ ಬಚ್ಚೇಗೌಡ ವ್ಯಂಗ್ಯವಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net