More

    ಸುಶಾಂತ್ ಸಾವಿಗೆ ವಿದೇಶಿ ಕ್ರಿಕೆಟಿಗರಿಂದಲೂ ಕಂಬನಿ

    ಬೆಂಗಳೂರು: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಜೀವನ ಆಧಾರಿತ ಸಿನಿಮಾದ ಹೀರೋ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಈಗಾಗಲೆ ಬಾಲಿವುಡ್ ಜತೆಗೆ ಭಾರತೀಯ ಕ್ರಿಕೆಟ್ ತಾರೆಯರೂ ಕಂಬನಿ ಮಿಡಿದಿದ್ದಾರೆ. ಧೋನಿ ಪಾತ್ರದಿಂದಾಗಿ ಸುಶಾಂತ್ ನಟ, ಮಾತ್ರವಲ್ಲದೆ ಓರ್ವ ಕ್ರಿಕೆಟಿಗರಂತೆಯೂ ಕಂಡಿದ್ದರು. ಒಬ್ಬ ಕ್ರಿಕೆಟಿಗ ಮೃತಪಟ್ಟಿದ್ದಾನೆಯೇ ಎಂಬಷ್ಟು ನೋವಿನಿಂದ, ವಿದೇಶಿ ಕ್ರಿಕೆಟಿಗರು ಕೂಡ ಸುಶಾಂತ್ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಆಸ್ಟ್ರೇಲಿಯಾದ ಕ್ರಿಕೆಟ್ ತಾರೆಯರಾದ ಶೇನ್ ವ್ಯಾಟ್ಸನ್ ಮತ್ತು ಡೇವಿಡ್ ವಾರ್ನರ್ ಇವರಲ್ಲಿ ಪ್ರಮುಖರು. ಪಾಕಿಸ್ತಾನದ ಕ್ರಿಕೆಟಿಗರೂ ಕಂಬನಿ ಮಿಡಿದಿದ್ದಾರೆ.

    ಇದನ್ನೂ ಓದಿ: ಯುಎಸ್ ಓಪನ್‌ಗೆ ಆಟಗಾರರಿಂದಲೇ ವಿರೋಧ!

    ‘ಕೈ ಪೋ ಚೇ’ ಮತ್ತು ‘ಛಿಛೋರೆ’ ಸಿನಿಮಾಗಳಿಂದಾಗಿ ಸುಶಾಂತ್ ಬಹುತೇಕ ಮಂದಿಗೆ ಕ್ರೀಡಾಪಟುವಿನಂತೆಯೂ ಕಂಡಿದ್ದಾರೆ. ಧೋನಿ ಜೀವನ ಆಧಾರಿತ ಸಿನಿಮಾದಲ್ಲಿನ ಅವರ ನಟನೆಯನ್ನು ವಿದೇಶಿ ಕ್ರಿಕೆಟಿಗರು ಕೂಡ ಮೆಚ್ಚಿಕೊಂಡಿದ್ದರು. ಹೀಗಾಗಿ ಸುಶಾಂತ್ ಸಾವು ಅವರಿಗೂ ಅರಗಿಸಿಕೊಳ್ಳಲಾಗದಂತಾಗಿದೆ.

    ಸುಶಾಂತ್ ಸಾವಿಗೆ ವಿದೇಶಿ ಕ್ರಿಕೆಟಿಗರಿಂದಲೂ ಕಂಬನಿ

    ಇದನ್ನೂ ಓದಿ: ಧೋನಿ 3ನೇ ಕ್ರಮಾಂಕದಲ್ಲಿ ಆಡಿದ್ದರೆ ಹಲವು ದಾಖಲೆಗಳು ಮುರಿಯುತ್ತಿದ್ದವು ಎಂದ ಗಂಭೀರ್

    ‘ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಅಪಾರ ಪ್ರತಿಭೆಯನ್ನು ಹೊಂದಿದ್ದ ವ್ಯಕ್ತಿಯೊಬ್ಬ ಇಷ್ಟು ಬೇಗ ಪ್ರಪಂಚವನ್ನು ತೊರೆದಿದ್ದು ನಿಜಕ್ಕೂ ದುರಂತ. ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸಿನಿಮಾವನ್ನು ನೋಡಿದಾಗ, ಅದರಲ್ಲಿ ನಟಿಸಿದ್ದು ಸುಶಾಂತ್ ಅಥವಾ ಧೋನಿಯೋ ಎಂಬುದನ್ನು ಮರೆತುಬಿಟ್ಟಿದ್ದೆ. ಅಪೂರ್ವವಾಗಿ ಪಾತ್ರವನ್ನು ನಿರ್ವಹಿಸಿದ್ದರು. ಅವರಿಲ್ಲದೆ ಈಗ ಜಗತ್ತು ಬಡವಾಗಿದೆ. ಬಹಳ ಬೇಗನೆ ಹೋಗಿಬಿಟ್ಟೆ’ ಎಂದು ಆಸೀಸ್ ಆಲ್ರೌಂಡರ್ ಶೇನ್ ವ್ಯಾಟ್ಸನ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ವ್ಯಾಟ್ಸನ್ ಐಪಿಎಲ್‌ನಲ್ಲಿ ಧೋನಿ ಜತೆಗೆ ಚೆನ್ನೈ ಸೂಪರ್‌ಕಿಂಗ್ಸ್ ತಂಡದಲ್ಲಿ ಆಡಿದ್ದಾರೆ. ಆಸೀಸ್ ಆರಂಭಿಕ ಡೇವಿಡ್ ವಾರ್ನರ್ ಕೂಡ, ‘ಸುದ್ದಿ ಕೇಳಿ ನಿಜಕ್ಕೂ ಬಹಳ ಬೇಸರವಾಯಿತು. ಆರ್‌ಐಪಿ ಸುಶಾಂತ್ ಸಿಂಗ್ ರಜಪೂತ್’ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಸುಶಾಂತ್ ಸಾವಿನ ಬಗ್ಗೆ ಧೋನಿ ಮೌನವೇಕೆ?

    ಸುಶಾಂತ್ ಸಾವಿಗೆ ವಿದೇಶಿ ಕ್ರಿಕೆಟಿಗರಿಂದಲೂ ಕಂಬನಿ

    ಪಾಕಿಸ್ತಾನ ತಂಡದ ಮಾಜಿ ನಾಯಕ ಶೋಯಿಬ್ ಮಲಿಕ್, ‘ಸುಶಾಂತ್ ಆತ್ಮಹತ್ಯೆಯ ಸುದ್ದಿ ಕೇಳಿ ಆಘಾತವಾಯಿತು. ಬದುಕು ಸುದೀರ್ಘ ಮತ್ತು ಸುಂದರವಾದ ಇನಿಂಗ್ಸ್. 34 ವರ್ಷ ಸಾಯುವ ವಯಸ್ಸಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಟ್ವೀಟಿಸಿದ್ದಾರೆ. ಪಾಕ್ ಮಾಜಿ ವೇಗಿ ಶೋಯಿಬ್ ಅಖ್ತರ್, ‘ಎಂಎಸ್ ಧೋನಿ ಸಿನಿಮಾದಲ್ಲಿ ಅವರ ಪಾತ್ರವನ್ನು ಸುಶಾಂತ್ ಸಮರ್ಥವಾಗಿ ನಿಭಾಯಿಸಿದ್ದನ್ನು ನೋಡಿದ್ದೆ. ಆತ ನಿಜಕ್ಕೂ ಬಹಳ ಕಠಿಣ ಪರಿಶ್ರಮಿ ಯುವಕನಾಗಿದ್ದ’ ಎಂದು ಟ್ವೀಟಿಸಿದ್ದಾರೆ.’

    ಸುಶಾಂತ್ ರಣಜಿ ಟ್ರೋಫಿಯಲ್ಲಿ ಆಡ್ತಾರೆ ಎಂದಿದ್ದರು ಧೋನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts