More

    ಧೋನಿ 3ನೇ ಕ್ರಮಾಂಕದಲ್ಲಿ ಆಡಿದ್ದರೆ ಹಲವು ದಾಖಲೆಗಳು ಮುರಿಯುತ್ತಿದ್ದವು ಎಂದ ಗಂಭೀರ್

    ಮುಂಬೈ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಎಂಎಸ್ ಧೋನಿ. ಎರಡು ವಿಶ್ವಕಪ್ (ತಲಾ ಒಂದು ಟಿ20, ಏಕದಿನ) ಟ್ರೋಫಿ ಜಯಿಸಿರುವ ಭಾರತದ ಏಕೈಕ ನಾಯಕನಾಗಿರುವ ಧೋನಿ, ಬೆಸ್ಟ್ ಫಿನಿಷರ್ ಎನಿಸಿಕೊಂಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ತಂಡದ ಪಾಲಿಗೆ ಆಪತ್ಪಾಂಧವ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಮೂರನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್ ಮಾಡಿದ್ದರೆ ಮತ್ತಷ್ಟು ದಾಖಲೆ ನಿರ್ಮಿಸುತ್ತಿದ್ದರು ಎನ್ನುತ್ತಾರೆ ಧೋನಿ ಸಹಪಾಠಿ ಬಿಜೆಪಿ ಸಂಸದರೂ ಆಗಿರುವ ಗೌತಮ್ ಗಂಭೀರ್. ಆದರೆ, ರಾಷ್ಟ್ರೀಯ ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ನಡುವೆ ಹೋಲಿಕೆ ಮಾಡಲಾಗುವುದಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ಯುಎಸ್ ಓಪನ್‌ಗೆ ಆಟಗಾರರಿಂದಲೇ ವಿರೋಧ!

    ಫ್ಲಾಟ್​ ಪಿಚ್‌ಗಳಲ್ಲಿ ಎಂಥ ಗುಣಮಟ್ಟದ ಬೌಲಿಂಗ್‌ನಲೂ ಧೋನಿ ರನ್‌ಗಳಿಸುತ್ತಾರೆ. ಅದರಲೂ 3ನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್‌ಗಿಳಿದಿದ್ದರೆ, ದಾಖಲೆಗಳ ಸುರಿಮಳೆಯಾಗುತ್ತಿತ್ತು ಎಂದು ಗಂಭೀರ್ ಮಾಜಿ ನಾಯಕನ ಗುಣಗಾನ ಮಾಡಿದ್ದಾರೆ. ಗಂಭೀರ್ 2007ರ ಟಿ20 ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ವಿಶ್ವದ ಯಾವುದೇ ಬೌಲರ್ ಅನ್ನು ದಂಡಿಸುವ ಶಕ್ತಿ ಧೋನಿಗಿದೆ ಎಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧೋನಿ ಬಹುತೇಕ ಮಧ್ಯಮ ಕ್ರಮಾಂಕದ ಹಾಗೂ ಫಿನಿಷರ್ ಆಗಿಯೇ ಕಾರ್ಯನಿರ್ವಹಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್, 3ನೇ ಕ್ರಮಾಂಕಕ್ಕೆ ಧೋನಿಗಿಂತ ಕೊಹ್ಲಿಯೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಮೊದಲು ಗಂಭೀರ್ ಧೋನಿ ಟೀಮ್ ಇಂಡಿಯಾಗೆ ವಾಪಸಾಗುವುದರ ಬಗ್ಗೆ ಪ್ರಶ್ನಿಸಿದ್ದರು.

    ಇದನ್ನೂ ಓದಿ: ಪ್ರೇಕ್ಷಕರಿಲ್ಲದ ಐಪಿಎಲ್ ಅತಿಥಿಗಳಿಲ್ಲದ ಮದುವೆ ಮನೆ ಇದ್ದಂತೆ ಎಂದು ಇರ್ಫಾನ್ ಪಠಾಣ್ ಹೇಳಿದ್ದೇಕೆ..?

    ಬಿಜೆಪಿ ಸಂಸದರೂ ಆಗಿರುವ ಗಂಭೀರ್, 58 ಟೆಸ್ಟ್ ಪಂದ್ಯಗಳಿಂದ 9 ಶತಕ ಸೇರಿದಂತೆ 8.067 ರನ್‌ಗಳಿಸಿದ್ದು, 147 ಏಕದಿನ ಪಂದ್ಯಗಳಿಂದ 11 ಶತಕ ಸೇರಿದಂತೆ 5238 ರನ್, 37 ಟಿ20 ಪಂದ್ಯಗಳಿಂದ 932 ರನ್ ಬಾರಿಸಿದ್ದಾರೆ.

    ಗೋಕರ್ಣದ ಬೀಚ್ ಕ್ರಿಕೆಟ್‌ಗೆ ಮನಸೋತ ಐಸಿಸಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts