

ಬೆಂಗಳೂರು: ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮಕ್ಕಿಂತಲೂ ಮಿಗಿಲಾಗಿ ಪ್ರೀತಿಸುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಗೊಂಡ ಬಳಿಕವಂತೂ ಅಭಿಮಾನಿಗಳ ಬರವಿಲ್ಲ. ಬೇಸಿಗೆ ಅವಧಿಯಲ್ಲಿ ನಡೆಯುವ ಎರಡು ತಿಂಗಳ ಐಪಿಎಲ್ ಹಬ್ಬಕ್ಕಾಗಿ ಅಭಿಮಾನಿಗಳು ವರ್ಷವಿಡಿ ಕಾಯುತ್ತಾರೆ. ಕರೊನಾ ವೈರಸ್ ಭೀತಿಯಿಂದ ಈ ಬಾರಿಯ ಲೀಗ್ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾಗಿದೆ. ಟಿ20 ವಿಶ್ವಕಪ್ ಮುಂದೂಡಿಕೆಯಾದರೆ ಖಾಲಿ ಸ್ಟೇಡಿಯಂನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ. ಆದರೆ, ಐಪಿಎಲ್‌ನಲ್ಲಿ ಪ್ರೇಕ್ಷಕರು ಇಲ್ಲದಿದ್ದರೆ ಹೇಗೆ...ಒಂದು ವೇಳೆ ಐಪಿಎಲ್ ಪ್ರೇಕ್ಷಕರಿಲ್ಲದೆ ನಡೆದರೆ, ಮದುವೆ ಮನೆಯಲ್ಲಿ ಅತಿಥಿಗಳು ಇಲ್ಲದಂತೆ ಎಂದು ಮಾಜಿ ಆಟಗಾರ ಇರ್ಫಾನ್ ಪಠಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಮ್ಮನಾದ ಟೆನಿಸ್ ತಾರೆ ಸಿಬುಲ್ಕೋವಾ
ಇದನ್ನೂ ಓದಿ: ಸುಶಾಂತ್ ಬ್ಯಾಟಿಂಗ್ ಶೈಲಿಗೆ ಫಿದಾ ಆಗಿದ್ದ ಸಚಿನ್..!
ವೃತ್ತಿಜೀವನಕ್ಕೆ ನಿವೃತ್ತಿ ಹೇಳಿದ ಬಳಿಕ ಇರ್ಫಾನ್ ಪಠಾಣ್ ಜಮ್ಮುಕಾಶ್ಮೀರ ತಂಡಕ್ಕೆ ಮೆಂಟರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಐಪಿಎಲ್‌ನಲ್ಲಿ ಸಿಎಸ್‌ಕೆ, ಡೆಲ್ಲಿ ಡೇರ್‌ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದರು. 29 ಟೆಸ್ಟ್, 120 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನಾಡಿದ್ದಾರೆ.