More

    ಸುಶಾಂತ್ ಬ್ಯಾಟಿಂಗ್​ ಶೈಲಿಗೆ ಫಿದಾ ಆಗಿದ್ದ ಸಚಿನ್..!

    ಮುಂಬೈ: ಸುಶಾಂತ್ ಸಿಂಗ್ ರಜಪೂತ್, ಬಾಲಿವುಡ್ ಅಂಗಳದಲ್ಲಿ ಭರವಸೆ ಮೂಡಿಸಿದ್ದ ನಟ. ಕ್ರೀಡೆಗೂ ಆತನಿಗೂ ಅವಿನಾಭಾವ ಸಂಬಂಧ. ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಜೀವನ ಆಧಾರಿತ ‘ಎಂಎಸ್ ಧೋನಿ: ದ ಅನ್‌ಟೋಲ್ಡ್ ಸ್ಟೋರಿ’ ಸಿನಿಮಾದಲ್ಲಿನ ನೈಜ ಅಭಿನಯದ ಮೂಲಕ ಕೇವಲ ಸಿನಿರಸಿಕರಲ್ಲದೆ ಕ್ರೀಡಾಭಿಮಾನಿಗಳಿಗೂ ಇಷ್ಟವಾಗಿದ್ದರು ಸುಶಾಂತ್. ಈ ಸಿನಿಮಾಗಾಗಿ ಧೋನಿ ಶೈಲಿಯಲ್ಲೇ ಬ್ಯಾಟಿಂಗ್ ಮಾಡಲು ಒಂದು ವರ್ಷ ಅಭ್ಯಾಸ ನಡೆಸಿದ್ದರು. ಅಭ್ಯಾಸದ ವೇಳೆ ಇವರ ಬ್ಯಾಟಿಂಗ್ ಗಮನಿಸಿದ್ದ ದಿಗ್ಗಜ ಸಚಿನ್ ತೆಂಡುಲ್ಕರ್ ಶಹಬ್ಬಾಸ್ ಗಿರಿ ನೀಡಿದ್ದರಂತೆ.

    ಇದನ್ನೂ ಓದಿ: ಜೂ.15ರಂದು ನಟ ಸುಶಾಂತ್ ಸಿಂಗ್​ ಅಂತ್ಯಕ್ರಿಯೆ; ತಾಯಿ ಇಲ್ಲ, ಅಪ್ಪ ಪಟನಾದಿಂದ ಬರಬೇಕು…

    ಎಂಎಸ್ ಧೋನಿ ಹೆಲಿಕಾಪ್ಟರ್ ಶಾಟ್ ಮೂಲಕ ಭಾರಿ ಪ್ರಸಿದ್ಧಿ ಪಡೆದಿದ್ದರು. ಅವರ ಸಿನಿಮಾದ ಕಥಾನಾಯಕ ಸುಶಾಂತ್ ಕೂಡ ಆ ಶಾಟ್ ಕಲಿಯುವ ಸಲುವಾಗಿ ಹಗಲು ರಾತ್ರಿ ಬೆವರು ಸುರಿಸಿದ್ದರು. ಈ ಸಿನಿಮಾಕ್ಕಾಗಿ ಅಭಿನಯದ ಜತೆಗೆ ಕ್ರಿಕೆಟ್ ಕಲಿಯಲು ಮುಂದಾದ ಸುಶಾಂತ್, ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದ್ದರು. ಸ್ವತಃ ಕಿರಣ್ ಮೋರೆ ಹೇಳಿಕೊಂಡಂತೆ, ಮುಂಬೈನ ಬಾಂದ್ರಾ ಕ್ರೀಡಾ ಸಂಕೀರ್ಣದಲ್ಲಿ ಸುಶಾಂತ್ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಸಚಿನ್‌ರನ್ನು ಭೇಟಿಯಾಗಲು ಹೋದೆ. ಯಾರು ಆ ಹುಡುಗ, ಎಷ್ಟು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದರಂತೆ. ಧೋನಿ ಚಿತ್ರದ ನಾಯಕ ಸುಶಾಂತ್ ಎಂದಿದ್ದಕ್ಕೆ, ಗುಡ್ ವೃತ್ತಿಪರ ಬ್ಯಾಟ್ಸ್‌ಮನ್‌ನಂತೆಯೇ ಬ್ಯಾಟಿಂಗ್ ಮಾಡುತ್ತಿದ್ದಾನೆ ಎಂದು ಶಹಬ್ಬಾಸ್ ಗಿರಿ ಕೊಟ್ಟಿದ್ದರಂತೆ. ಸುಶಾಂತ್ ಬ್ಯಾಟಿಂಗ್​ ಶೈಲಿಗೆ ಫಿದಾ ಆಗಿದ್ದ ಸಚಿನ್..!

    34ವರ್ಷದ ಸುಶಾಂತ್ ಸಿಂಗ್ ಮುಂಬೈನ ಬಾಂದ್ರದ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡರು. ಖಿನ್ನತೆಗೆ ಒಳಗಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸುಶಾಂತ್ ನಿಧನಕ್ಕೆ ಬಾಲಿವುಡ್ ನಟರು ಹಾಗೂ ಕ್ರೀಡಾಪಟುಗಳು ಸಂತಾಪ ಸೂಚಿಸಿದ್ದಾರೆ.

    ಕೆಎಲ್ ರಾಹುಲ್ ಸ್ಥಿರ ಬ್ಯಾಟಿಂಗ್ ಹಿಂದಿದೆ ಆ ನೋವು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts