More

    ಕೆಎಲ್ ರಾಹುಲ್ ಸ್ಥಿರ ಬ್ಯಾಟಿಂಗ್ ಹಿಂದಿದೆ ಆ ನೋವು..!

    ನವದೆಹಲಿ: ಪ್ರತಿಯೊಬ್ಬರ ಜೀವನದಲ್ಲಿ ನೋವು, ಅವಮಾನ, ಕಷ್ಟಗಳು ಕಲಿಸುವ ಪಾಠವನ್ನು ಬೇರೆ ಯಾರೂ ಕಲಿಸುವುದಿಲ್ಲ. ಎಲ್ಲರ ವೈಯಕ್ತಿಕ ಜೀವನದಲೂ ಇದು ಸರ್ವೆ ಸಾಮಾನ್ಯ. ಇದಕ್ಕೆ ಕ್ರಿಕೆಟಿಗ ರಾಹುಲ್ ಕೂಡ ಹೊರತಾಗಿಲ್ಲ. ಸ್ವತಃ ಅವೇ ಹೇಳಿಕೊಂಡರಂತೆ 2019ರಲ್ಲಿ ಅನುಭವಿಸಿದ ಅಮಾನತು ಶಿಕ್ಷೆಯಿಂದ ಸಾಕಷ್ಟು ಬದಲಾದೆ. ಬಳಿಕ ಸ್ಥಿರ ನಿರ್ವಹಣೆ ನೀಡುತ್ತಿದ್ದೇನೆ ಎಂದು ಕೆಎಲ್ ರಾಹುಲ್ ಹೇಳಿಕೊಂಡಿದ್ದಾರೆ. ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜತೆಗೂಡಿ ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದರು. ಇದಕ್ಕಾಗಿ ಬಿಸಿಸಿಐ ರಾಹುಲ್-ಪಾಂಡ್ಯಗೆ ನಿಷೇಧದ ಶಿಕ್ಷೆ ವಿಧಿಸಿತ್ತು.

    ಇದನ್ನೂ ಓದಿ: ‘ಆತ ನನ್ನನ್ನು ತುಂಬ ಪ್ರೀತಿಸುತ್ತಿದ್ದ…ನಾನು ಅವನ ಮಿಸ್​ ಮಾಡಿಕೊಳ್ಳುತ್ತೇನೆ…’: ಶಾರುಖ್​ ಖಾನ್​ ಕಣ್ಣೀರು

    ‘ಈ ಘಟನೆ ಬಳಿಕ ನಾನು ಸಾಕಷ್ಟು ಬದಲಾದೆ. ಇಂಥ ಕಠಿಣ ವೇಳೆಯಲ್ಲಿ ಸ್ಥಿರ ನಿರ್ವಹಣೆ ಕಾಯ್ದುಕೊಳ್ಳುವುದೇ ಸವಾಲಾಗಿತ್ತು. ಈ ವೇಳೆ ಬಗೆ ಬಗೆಯ ರೀತಿಯಲ್ಲಿ ಯೋಚಿಸಿದೆ. ನನ್ನಿಂದ ತಂಡ ಏನು ಅಪೇಕ್ಷಿಸುತ್ತದೆ. ಅದನ್ನು ಪೂರೈಸುವುದಷ್ಟೇ ನನ್ನ ಕೆಲಸ ಎಂದು ಯೋಚಿಸಿದೆ ಎಂದು ರಾಹುಲ್ ಹೇಳಿದ್ದಾರೆ. ನನ್ನನ್ನು ನಾನು ಅರ್ಥೈಸಿಕೊಳ್ಳಲು ಅವಕಾಶ ನೀಡಿತು. ನಮ್ಮ ವೃತ್ತಿ ಜೀವನ ದೀರ್ಘವಾಗಿಲ್ಲ. 11 ರಿಂದ 12 ವರ್ಷವಷ್ಟೇ ನಮಗೆ ಕ್ರೀಡೆಯಲ್ಲಿ ಅಯಸ್ಸು, ಈ ವೇಳೆಯಲ್ಲಿ ನನ್ನಿಂದ ಸಾಧ್ಯವಾದಷ್ಟು ಉತ್ತಮ ನಿರ್ವಹಣೆಯನ್ನು ಕ್ರಿಕೆಟ್‌ಗೆ ನೀಡಬೇಕೆಂದು ನಿರ್ಧರಿಸಿದೆ ಎಂದು 28 ವರ್ಷದ ರಾಹುಲ್ ಹೇಳಿದ್ದಾರೆ. ತಂಡದ ಹಿರಿಯ ಆಟಗಾರನಾಗಿ ರೋಹಿತ್ ಶರ್ಮ ನನ್ನ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಅವರು ನೀಡುವ ಪೋತ್ಸಾಹ ನಾನು ಋಣಿಯಾಗಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.

    ಇದನ್ನೂ ಓದಿ : ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ; ನೆಟ್ಟಿಗರ ಕೋಪಕ್ಕೆ ಯಾವುದರ ಮೇಲೆ?

    ಕೆಎಲ್ ರಾಹುಲ್ ಸ್ಥಿರ ಬ್ಯಾಟಿಂಗ್ ಹಿಂದಿದೆ ಆ ನೋವು..!ರಾಹುಲ್ ಹಾಗೂ ಪಾಂಡ್ಯ ಮಾಡಿಕೊಂಡ ಎಡವಟ್ಟಿನಿಂದಾಗಿ ಕೆಲಕಾಲ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದರು. 2019ರ ಜನವರಿಯಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಇವರಿಬ್ಬರನ್ನು ವಾಪಸ್ ಕರೆಸಿಕೊಂಡ ಬಿಸಿಸಿಐ ಕೆಲ ಪಂದ್ಯಗಳಿಗೆ ನಿಷೇಧ ಹೇರಿತ್ತು. ಬಳಿಕ ನಡೆದ ಏಕದಿನ ವಿಶ್ವಕಪ್‌ನಲೂ ರಾಹುಲ್ ಮಿಂಚಿದ್ದರು. ಕಳೆದ ವರ್ಷ ನಡೆದ ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ಹಾಗೂ ಟಿ20 ಸರಣಿಗಳಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸಿದ್ದರು.

    ನಟ ಸುಶಾಂತ್​ ಸಿಂಗ್​ನ ವೈದ್ಯರನ್ನು ಹುಡುಕುತ್ತಿದ್ದಾರೆ ಪೊಲೀಸರು; ಕೊನೆಯ ಕರೆ ಮಾಡಿದ್ಯಾರಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts