ಅಮ್ಮನಾದ ಟೆನಿಸ್ ತಾರೆ ಸಿಬುಲ್ಕೋವಾ

DSC_3466_original
Published on

ಲಂಡನ್: ಸ್ಲೊವಾಕಿಯಾದ ಟೆನಿಸ್ ತಾರೆ ಡೊಮಿನಿಕಾ ಸಿಬುಲ್ಕೋವಾ ತಾಯಿಯಾಗಿದ್ದಾರೆ. ಭಾನುವಾರ ಗಂಡು ಮಗುವಿಗೆ ಜನ್ಮ ನೀಡಿರುವುದನ್ನು ಸ್ವತಃ ಸಿಬುಲ್ಕೋವಾ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

ಮಾಜಿ ವಿಶ್ವ ನಂ. 4 ಆಟಗಾರ್ತಿ ಸಿಬುಲ್ಕೋವಾ, ‘ನಮ್ಮ ಜಗತ್ತು ಇನ್ನು ಅದೇ ಆಗಿರುವುದಿಲ್ಲ. 14/06/2020ರಂದು ನಾವು ನಮ್ಮ ಪ್ರಿಯ ಪುತ್ರ ಜೇಕುಬ್ ನವಾರಾನನ್ನು ಸ್ವಾಗತಿಸಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. 8 ಡಬ್ಲ್ಯುಟಿಎ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದ ಸಿಬುಲ್ಕೋವಾ ಕಳೆದ ವರ್ಷವಷ್ಟೇ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಹೊಂದಿದ್ದರು.

31 ವರ್ಷದ ಸಿಬುಲ್ಕೋವಾ 2016ರಲ್ಲಿ ಗೆಳೆಯ ಮೈಕೆಲ್ ನವಾರಾರನ್ನು ವರಿಸಿದ್ದರು. ತಾವು ಗರ್ಭಿಣಿಯಾಗಿ ವಿಷಯವನ್ನು ಅವರು ಕಳೆದ ವರ್ಷವೇ ಬಹಿರಂಗಪಡಿಸಿದ್ದರು. ಎಲ್ಲ 4 ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ ಕ್ವಾರ್ಟರ್​ಫೈನಲ್‌ಗೇರಿರುವ ಸಿಬುಲ್ಕೋವಾ, 2014ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ರನ್ನರ್‌ಅಪ್ ಆಗಿದ್ದು ಶ್ರೇಷ್ಠ ಸಾಧನೆಯಾಗಿದೆ. 2 ಒಲಿಂಪಿಕ್ಸ್‌ನಲ್ಲೂ ಅವರು ಸ್ಪರ್ಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net