ಮನೆಗೆ ಕನ್ನ ಹಾಕಿದ ಬಾಲಕರಿಬ್ಬರ ಬಂಧನ

web - kuppe kalavu
ಆರೋಪಿಗಳಿಂದ ವಶಪಡಿಸಲಾದ ಬೈಕ್ ಹಾಗೂ ಬೆಳ್ಳಿಯ ಪರಿಕರಗಳು.
Published on

ಗುರುಪುರ: ಬಜ್ಪೆ, ಪೆರ್ಮುದೆ, ಕೈಕಂಬ, ಸೂರಲ್ಪಾಡಿ, ಕಂದಾವರ ಮತ್ತಿತರ ಕಡೆಗಳಲ್ಲಿ ಮನೆಗೆ ಕನ್ನ ಹಾಕುತ್ತಿದ್ದ ಇಬ್ಬರು ಬಾಲಕರು ಬಜ್ಪೆ ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ.

ಬಾಲಾಪರಾಧಿಗಳಿಂದ ಒಂದು ಬೈಕ್ ಹಾಗೂ ಪೆರ್ಮುದೆಯ ಮನೆಯೊಂದರಲ್ಲಿ ಕಳ್ಳತನ ಮಾಡಲಾಗಿದ್ದ 30,000 ರೂ. ಮೌಲ್ಯದ ಬೆಳ್ಳಿಯ ಸೊತ್ತು ವಶಪಡಿಸಿಕೊಳ್ಳಲಾಗಿದೆ. ಇಬ್ಬರನ್ನೂ ಬಾಲ ನ್ಯಾಯ ಮಂಡಳಿಯ ನ್ಯಾಯಾಧೀಶರೆದುರು ಹಾಜರುಪಡಿಸಲಾಗಿದೆ.ಕಳ್ಳರ ಪತ್ತೆಗಾಗಿ ಬಜ್ಪೆ ಪೊಲೀಸ್ ನಿರೀಕ್ಷಕ ನಂದೇಶ್ ಬಿ. ಕುಂಬಾರ್ ನೇತೃತ್ವದ ಪೊಲೀಸ್ ತಂಡ ಯಶಸ್ವಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net