More

    ‘ಜವಾನ್​’ ಆದ ಶಾರೂಖ್​ ಖಾನ್​; ಪುಣೆಯಲ್ಲಿ ಚಿತ್ರೀಕರಣ ಪ್ರಾರಂಭ

    ಪುಣೆ: ಮೂರು ವರ್ಷಗಳಿಂದ ಕ್ಯಾಮೆರಾದಿಂದ ದೂರವೇ ಇದ್ದ ಶಾರೂಖ್​ ಖಾನ್​, ಇದೀಗ ಬ್ಯಾಕ್​ ಟು ಬ್ಯಾಕ್​ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಅವರು ‘ಪಠಾಣ್​’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯಬೇಕಿದ್ದು, ಮಧ್ಯೆ ಸಿಕ್ಕ ಗ್ಯಾಪ್​ನಲ್ಲಿ ಅವರು ಇನ್ನೊಂದು ಹೊಸ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

    'ಜವಾನ್​' ಆದ ಶಾರೂಖ್​ ಖಾನ್​; ಪುಣೆಯಲ್ಲಿ ಚಿತ್ರೀಕರಣ ಪ್ರಾರಂಭ

    ಇದನ್ನೂ ಓದಿ: ಲ್ಯಾಗ್​ ಮಂಜು-ದಿವ್ಯಾ ಸುರೇಶ್​ ಬಗ್ಗೆ ಹರಿದಾಡ್ತಿರೋ ಸುದ್ದಿ ನಿಜನಾ? ಹೌದು ಅನ್ನುವಂತಿದೆ ಈ ವೈರಲ್​ ಫೋಟೋ!

    ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದಲ್ಲಿ ಶಾರೂಖ್​ ಖಾನ್​ ನಟಿಸಲಿದ್ದಾರೆ, ಅವರಿಗೆ ನಾಯಕಿಯಾಗಿ ನಯನತಾರಾ ಆಯ್ಕೆಯಾಗಿದ್ದಾರೆ ಎಂಬ ವಿಷಯ ಹಳೆಯದೇ. ಈ ಚಿತ್ರಕ್ಕೆ ಇದೀಗ ‘ಜವಾನ್​’ ಎಂಬ ಹೆಸರನ್ನು ಇಡಲಾಗಿದ್ದು, ಸದ್ದಿಲ್ಲದೆ ಕಳೆದ ವಾರದಿಂದ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಚಿತ್ರತಂಡವು ಪುಣೆಯಲ್ಲಿ ಬೀಡುಬಿಟ್ಟಿದ್ದು, ಅಲ್ಲಿ ಮಹತ್ವದ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ತೊಡಗಿಸಿಕೊಂಡಿದೆ.

    ಇದೊಂದು ಪಕ್ಕಾ ಕಮರ್ಷಿಯಲ್​ ಚಿತ್ರ ಎಂದು ಹೇಳಲಾಗಿದ್ದು, ಅಂತಾರಾಷ್ಟ್ರೀಯ ವೆಬ್​ಸೀರೀಸ್​, ‘ಮನ ಹೇಯ್ಸ್ಟ್​’ ಆಧರಿಸಿ ಚಿತ್ರ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಇದೊಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಶಾರೂಖ್​ ಖಾನ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ರಾಮ್ ಚರಣ್​ ಬೇಡ ಅಂದಿದ್ರೂ ಸಮಂತಾ ಲಿಪ್​ಲಾಕ್: ರಂಗಸ್ಥಳಂ ಚಿತ್ರದ ಹಿಂದಿನ ಸೀಕ್ರೆಟ್​ ಬಿಚ್ಚಿಟ್ಟ ನಿರ್ದೇಶಕ!

    ಶಾರೂಖ್​ ಖಾನ್​ ಜತೆಗೆ ನಯನತಾರಾ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ಯೋಗಿ ಬಾಬು, ಸುನೀಲ್​ ಗ್ರೋವರ್​, ಮರಾಠಿ ನಟಿ ರುತುಜ ಮುಂತಾದವರು ನಟಿಸುತ್ತಿದ್ದಾರೆ.

    ಚಿತ್ರಪ್ರದರ್ಶನ ಪ್ರಾರಂಭಿಸಿ … ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಕಂಗನಾ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts