ರಾಮ್ ಚರಣ್​ ಬೇಡ ಅಂದಿದ್ರೂ ಸಮಂತಾ ಲಿಪ್​ಲಾಕ್: ರಂಗಸ್ಥಳಂ ಚಿತ್ರದ ಹಿಂದಿನ ಸೀಕ್ರೆಟ್​ ಬಿಚ್ಚಿಟ್ಟ ನಿರ್ದೇಶಕ!

Samantha
Published on

ಹೈದರಾಬಾದ್​: ಟಾಲಿವುಡ್​ ನಟ ರಾಮ್​ ಚರಣ್​ ಸಿನಿಮಾ ಕೆರಿಯರ್​ನಲ್ಲೇ ರಂಗಸ್ಥಳಂ ಚಿತ್ರ ಒಂದು ಮೈಲಿಗಲ್ಲು. ನಿರ್ದೇಶಕ ಸುಕುಮಾರ್​ ನಿರ್ದೇಶನದ ರಂಗಸ್ಥಳಂ ಚಿತ್ರದಲ್ಲಿ ಸಮಂತಾ ಮತ್ತು ರಾಮ್ ​ಚರಣ್​​ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್​ ಆಗಿತ್ತು. ಅದರಲ್ಲೂ ಇಬ್ಬರ ಲಿಪ್​ಲಾಕ್​ ಸೀನ್​ ಬಗ್ಗೆ ಭಾರಿ ಚರ್ಚೆ ಶುರುವಾಗಿತ್ತು. ಆದರೆ, ಈ ದೃಶ್ಯದ ಹಿಂದೆ ಕುತೂಹಲಕಾರಿ ಸ್ಟೋರಿಯೊಂದು ಇರುವುದು ಇದೀಗ ಬಹಿರಂಗವಾಗಿದೆ.

ನಿರ್ದೇಶಕ ಸುಕುಮಾರ್​ ಚಿತ್ರದ ಸ್ಕ್ರಿಪ್ಟ್​ ಅನ್ನು ರಾಮ್​ ಚರಣ್​ಗೆ ವಿವರಿಸುವಾಗ ಚಿತ್ರದಲ್ಲಿ ಲಿಪ್​ಲಾಕ್​ ದೃಶ್ಯವಿದೆ ಎಂದು ಹೇಳಿದ್ದರು. ಆದರೆ, ಇದು ರಾಮ್​ ಚರಣ್​ ಇಷ್ಟವಾಗದೇ ಭಾರಿ ಚರ್ಚೆ ಮಾಡಿದ ಆ ಸೀನ್​ ಅನ್ನು ತೆಗೆದುಹಾಕುವಂತೆ ಹೇಳಿದ್ದರು. ಅದಕ್ಕೆ ಒಪ್ಪಿದ ನಿರ್ದೇಶಕರು ಶೂಟಿಂಗ್​ ಶುರು ಮಾಡಿದರು. ಆದರೆ, ಚಿತ್ರಕ್ಕೆ ಆ ದೃಶ್ಯದ ಅವಶ್ಯಕತೆ ಇದ್ದಿದ್ದರಿಂದ ಮತ್ತೊಮ್ಮೆ ರಾಮ್​ ಚರಣ್​ ಮನವೊಲಿಸಲು ಮುಂದಾದರು. ಆದರೆ, ಇನ್ನು ಸಿನಿಮಾ ಒಪ್ಪಂದ ಮಾಡಿಕೊಳ್ಳದೇ ಇದ್ದಿದ್ದರಿಂದ ಯಾವುದೇ ಕಾರಣಕ್ಕೂ ಆ ದೃಶ್ಯವನ್ನು ಮಾಡುವುದಿಲ್ಲ ಎಂದು ಕಡ್ಡಿ ಮುರಿದಂತೆ ರಾಮ್​ ಚರಣ್​ ಹೇಳಿದ್ದರು. ತನ್ನ ಪತ್ನಿ ಉಪಾಸನಾ ಕಮಿನೇನಿಯ ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಉದ್ದೇಶದಿಂದ ರಾಮ್​ ಚರಣ್​ ಬಲವಾಗಿಯೇ ಲಿಪ್​ಲಾಕ್​ ದೃಶ್ಯವನ್ನು ನಿರಾಕರಿಸಿದ್ದರು. ಎಲ್ಲ ಪ್ರಯತ್ನ ವಿಫಲವಾದ ಬಳಿಕ ಆ ಐಡಿಯಾವನ್ನೇ ಸುಕುಮಾರ್​ ಕೈಚೆಲ್ಲಿದ್ದರು.

ಒಮ್ಮೆ ಚಿತ್ರದ ಚಿತ್ರೀಕರಣ ಪೂರ್ಣಗೊಂಡ ಬಳಿಕ ಹೊಸ ಐಡಿಯಾದೊಂದಿಗೆ ನಿರ್ದೇಶಕ ಸುಕುಮಾರ್​ ಮತ್ತೊಮ್ಮೆ ರಾಮ್ ​ಚರಣ್​ ಮನವೊಲಿಸಲು ಮುಂದಾದರು. ನೀವೇನು ಕಿಸ್​ ಮಾಡ್ಬೇಡಿ ಸರ್​, ನಟಿಯೊಂದಿಗೆ ಮಾಡಿದಂತೆ ನಟಿಸಿ ನಾವು ಪೋಸ್ಟ್​ ಪ್ರೊಡಕ್ಷನ್​ನಲ್ಲಿ ಗ್ರಾಫಿಕ್ಸ್​ನಲ್ಲಿ ಮಾಡಿಕೊಳ್ಳುತ್ತೇವೆ ಅಂದಿದ್ದರು. ಅದಕ್ಕೂ ಯೋಚನೆ ಮಾಡಿ ಕೊನೆಗೆ ರಾಮ್​ಚರಣ್​ ಅಸ್ತು ಅಂದಿದ್ದರು.

ಯಾವಾಗ ಆ ದೃಶ್ಯ ಚಿತ್ರೀಕರಿಸಲು ಮುಂದಾದರೋ ನಟಿ ಸಮಂತಾರೇ ರಾಮ್ ಚರಣ್​ ಜತೆ ಲಿಪ್​ಲಾಕ್​ ಮಾಡಿದರಂತೆ. ಇಷ್ಟೆಲ್ಲ ಪ್ರಯತ್ನದ ಬಳಿಕ ಈ ದೃಶ್ಯ ಬೆಳಕಿಗೆ ಬಂದಿತು ಎಂದು ನಿರ್ದೇಶಕರು ಹೇಳಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳ ನಡುವಿನ ಪ್ರೀತಿಯ ಆಳವನ್ನು ಅರ್ಥಮಾಡಿಕೊಳ್ಳಲು ಈ ಸನ್ನಿವೇಶವು ತುಂಬಾ ಉಪಯುಕ್ತವಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ ಎಂದು ವರದಿಯಾಗಿದೆ, ಈ ದೃಶ್ಯವಿಲ್ಲದೇ ಅವರು ಚಲನಚಿತ್ರದಲ್ಲಿ ಅವರ ಕೆಮಿಸ್ಟ್ರಿಗೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net