More

    ಆರೋಗ್ಯ ಕಣಜ ಈ ಸಿರಿಧಾನ್ಯ! ಬಿಪಿ, ಷುಗರ್ ನಿಯಂತ್ರಣಕ್ಕೆ ಸಿರಿಧಾನ್ಯಗಳೆಷ್ಟು ಸಹಕಾರಿ?

    ನೀವ್ ಬಿಡಿ ಆಗಿನ್ ಕಾಲದ ಫುಡ್ ತಿಂದೋರು ಅದಕ್ಕೆ ಈಗಲೂ ಇಷ್ಟು ಆರೋಗ್ಯವಾಗಿದ್ದೀರ. ಆದ್ರೆ, ನಾವ್ ನೋಡಿ ಎಲ್ಲ ಕಲಬೆರೆಕೆ ಫುಡ್ ತಿಂದು ಈಗಲೇ ಹೀಗಾಗಿದ್ದೀವಿ. ಇನ್ನು ಮುಂದೆ ಹೇಗೋ ಅನ್ನೋದು ಈಗಿನ ಜರೇಷನ್​ನ ಮಾತು.

    ಹೌದು, ನಾವು ತಿಂತಿರೋ ಆಹಾರದಲ್ಲಿ ಸಾರವೇ ಇಲ್ಲ ಅನ್ನೋದು ನಮಗೆಲ್ಲ ಗೊತ್ತಿರುವ ಸಂಗತಿ. ಆದ್ರೆ ಇದನ್ನು ತಿನ್ನದೇ ಬೇರೆ ಏನನ್ನ ತಿಂದ್ರೆ ಆರೋಗ್ಯವಂತರಾಗಿರ್ಬಹುದು ಅನ್ನೋ ಬಗ್ಗೆ ತಲೆಕೆಡಿಸಿಕೊಳ್ಳೋಕೆ ಹೋಗ್ತಿಲ್ಲ. ಯಾಕಂದ್ರೆ ಇಂತಹ ಆಹಾರಗಳನ್ನು ತಿಂದೇ ನಮಗೆ ಅಭ್ಯಾಸ ಆಗಿಹೋಗಿದೆ.

    ಈಗ ಮಾರುಕಟ್ಟೆಗಳಲ್ಲಿ ಸಿಗ್ತಿರೋ ಅಕ್ಕಿಗಳು ಹೇಗಿವೆ ಅಂದ್ರೆ, ಅಕ್ಕಿ ಮೇಲಿನ ಪದರವನ್ನೇ ಪಾಲಿಷ್ ಮಾಡೋ ಮೂಲಕ ಸಾರವನ್ನೇ ತೆಗೆದು ಹಾಕಿರ್ತಾರೆ ಹೀಗಾಗಿ ಅನ್ನ ಮಾಡಿದ್ರೂ ಕೂಡ ಅದರ ಪೋಷಕಾಂಶ ನಮ್ಮ ದೇಹ ಸೇರೋದಿಲ್ಲ. ಅಂದಹಾಗೆ ಪ್ರಾಚೀನ ಭಾರತದ ಪ್ರಧಾನ ಆಹಾರ ಸಿರಿಧಾನ್ಯವೇ ಹೊರತು, ಅಕ್ಕಿಯಲ್ಲ. ಇನ್ನು ಗೋಧಿ ಹಿಟ್ಟಿನ ಬಗ್ಗೆ ಕೇಳೋ ಹಾಗೇ ಇಲ್ಲ. ಗೋಧಿಯನ್ನು ನಾನಾ ರೀತಿ ಸಂಸ್ಕರಿಸಿ ಅದರ ಅಸಲಿ ಸತ್ವವನ್ನೇ ಮರೆಮಾಚಲಾಗ್ತಿದೆ.

    ಹಾಗಾದರೆ, ದಿನನಿತ್ಯ ಬಳಸೋ ಅಕ್ಕಿ, ಗೋಧಿ ಬಿಟ್ಟು ಬೇರೇನು ಬಳಸ್ಬೇಕು ಅಂತ ಯೋಚನೆ ಮಾಡ್ತಿದ್ದೀರಾ? ಚಿಂತೆ ಮಾಡ್ಬೇಡಿ. ಯಾಕಂದ್ರೆ ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಬಳಸ್ತಿದ್ದ ಸಿರಿಧಾನ್ಯಗಳು ಈಗ ನಮಗೆಲ್ಲ ಸುಲಭವಾಗಿ ಸಿಗ್ತಿದೆ.

    ಹೌದು, ಸಿರಿಧಾನ್ಯಗಳು ಅಂದ್ರೆ ರಾಗಿ, ಜೋಳ, ಸಜ್ಜೆ, ನವಣೆ, ಬರಗು, ಸಾಮೆ, ಊದಲು, ಅರ್ಕ, ಕೊರಲೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಪೌಷ್ಟಿಕ ಸತ್ವಗಳಾದ ಮೆಗ್ನೀಷಿಯಂ, ತಾಮ್ರ, ಪಾಸ್ಪರಸ್ ಮತ್ತು ಮ್ಯಾಂಗನೀಸ್ ಅಂಶಗಳಿವೆ. ಇತರೆ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಸಿಗುವ ಪೌಷ್ಟಿಕಾಂಶಗಳ ಲಾಭವೇ ಹೆಚ್ಚು. ಸಿರಿಧಾನ್ಯಗಳಲ್ಲಿ ಯಾವುದೇ ಬಗೆಯ ಗ್ಲುಟೆನ್ ಅಂಶ ಮತ್ತು ಆಮ್ಲದ ಅಂಶ ಇರುವುದಿಲ್ಲ. ಹೀಗಾಗಿ ಇದು ಶುಗರ್ ಇರೋರಿಗೆ ಹೇಳಿ ಮಾಡಿಸಿದ ಆಹಾರ. ಸಿರಿಧಾನ್ಯಗಳಲ್ಲಿ ಅತಿ ಕಡಿಮೆ ಕ್ಯಾಲರಿ ಇದೆ. ಅಲ್ಲದೆ ಸುಲಭವಾಗಿ ಜೀರ್ಣ ಆಗುವುದಿಲ್ಲ. ಇದು ತೂಕ ಇಳಿಸಿಕೊಳ್ಳಬೇಕು ಅನ್ನೋರಿಗೆ ಒಂದು ವರ ಅಂದ್ರೆ ತಪ್ಪಾಗೋದಿಲ್ಲ. ಹೆಚ್ಚಿನ ಪ್ರಮಾಣದ ಫೈಬರ್, ಅಗತ್ಯವಾದ ಅಮೈನೋ ಆಮ್ಲಗಳು, ಜೀವಸತ್ವಗಳು ಮತ್ತು ಖನಿಜಗಳು, ನೈಸರ್ಗಿಕವಾಗಿ ಇವು ಅಂಟು ರಹಿತ, ಕ್ಷಾರೀಯ, ಅಲರ್ಜಿನ್ ರಹಿತ, ಹಾಗೂ ಸುಲಭವಾಗಿ ಜೀರ್ಣವಾಗುತ್ತವೆ.

    ಸಿರಿಧಾನ್ಯಗಳಲ್ಲಿ ದೇಹಕ್ಕೆ ಅವಶ್ಯವಿರುವ ಅಗತ್ಯವಾದ ಪ್ರೊಟೀನ್, ಕೊಬ್ಬಿನ ಅಂಶಗಳು ಅದರಲ್ಲೂ ನೈಸರ್ಗಿಕ ಕೊಬ್ಬಿನ ಆಮ್ಲಗಳಿವೆ. ನಮ್ಮ ದೇಹದ ಮಾಂಸ – ಖಂಡಗಳ ಮೇಲೆ ಶೇಖರಣೆಯಾಗೋ ಕೊಲೆಸ್ಟ್ರಾಲ್ ಅಂಶಗಳನ್ನು ಮತ್ತು ಕೊಬ್ಬಿನ ಅಂಶಗಳನ್ನು ನಿಯಂತ್ರಿಸಿ ಪಾರ್ಶ್ವವಾಯು, ಬಿಪಿ, ಹೃದಯ ಸ್ತಂಭನ ಮತ್ತು ಹಾರ್ಟ್ ಅಟ್ಯಾಕ್ ಸೇರಿದಂತೆ ಇತರೆ ಹೃದ್ರೋಗಗಳಿಗೆ ಕಡಿವಾಣ ಹಾಕುತ್ತದೆ.

    ಇನ್ನು ಸಿರಿಧಾನ್ಯಗಳಲ್ಲಿ ಅತಿ ಹೆಚ್ಚು ಬಳಕೆಯಾಗ್ತಿರೋ ಸಜ್ಜೆ, ಕೊರಲೆ ಮತ್ತು ಸಾಮೆಗಳಲ್ಲಿ ಹೆಚ್ಚಿನ ಕಬ್ಬಿಣಾಂಶವಿದ್ದು, ರಕ್ತಹೀನತೆಯಿಂದ ದೂರ ಇಡುತ್ತೆ. ಸಿರಿಧಾನ್ಯಗಳಲ್ಲಿ ಬಿಸಿಬೇಳೆ ಬಾತ್, ಉಪ್ಪಿಟ್ಟು, ಹೋಳಿಗೆ, ದೋಸೆ, ಇಡ್ಲಿ ಹೀಗೆ ಸಾಕಷ್ಟು ವೆರೈಟಿಯ ಆಹಾರವನ್ನ ತಯಾರಿಸಬಹುದು.

    ಪ್ರೋಟೀನ್, ವಿಟಮಿನ್ಸ್​, ಮೆಗ್ನೀಷಿಯಂ ಮತ್ತಿತರ ಖನಿಜಗಳನ್ನ ಹೊಂದಿರುವ ಈ ಸಿರಿಧಾನ್ಯಗಳ ದಿನನಿತ್ಯದ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಆರೋಗ್ಯಯುತ ಜೀವನ ನಡೆಸಬಹುದಾಗಿದೆ. ಕರುಳಿನಲ್ಲಿನ ವಿಷದ ಅಂಶವನ್ನು ಸ್ವಚ್ಛಗೊಳಿಸಲು ಇದು ಸಹಾಯ ಮಾಡುವುದರಿಂದಾಗಿ ಜೀರ್ಣಾಂಗ ಸಂಬಂಧಿ ಅಸ್ವಸ್ಥತೆಗಳಿಗೆ ಇದು ಅದ್ಭುತ ಆಹಾರವಾಗಿದೆ.

    ಊದಲು ತಿನ್ನೋರಿಗೆ ಉಬ್ಬಸ ಇರುವುದಿಲ್ಲ ಎಂಬ ಹಿರಿಯ ಮಾತಿನಂತೆ ಊದಲು ಸೇವಿಸುವುದರಿಂದ ಲಿವರ್ ಸಮಸ್ಯೆ, ಜಾಂಡೀಸ್, ಥೈರಾಯ್ಡ್ ಮತ್ತು ಕಿಡ್ನಿ ಸಮಸ್ಯೆಗಳಿಗೆ ಹಾಗೂ ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇನ್ನೂ ಬರಗು ಇದ್ದರೆ ಬರಗಾಲದಲ್ಲಿ ಕೂಡ ಬದುಕು ನಡೆಸಬಹುದಂತೆ. ಇದರ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ ತ್ವಚೆಯ ಹೊಳಪಿಗೆ ಸಹಕಾರಿ ಹಾಗೂ ಎಲ್ಲಾ ರೀತಿಯ ಚರ್ಮ ರೋಗಕ್ಕೆ ರಾಮಬಾಣ. ಜೋಳ ಪಚನ ಕ್ರಿಯೆ ಸರಿಯಾಗುವಂತೆ ಮಾಡುತ್ತದೆ ಹಾಗೂ ತಾರುಣ್ಯ ಕಾಪಾಡುವುದು ಅಲ್ಲದೆ ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಇನ್ನೂ ರಾಗಿ ಬಗ್ಗೆ ಎಲ್ಲರಿಗೂ ಗೊತ್ತಿರುವ ಹಾಗೆ ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ ಎಂಬ ಮಾತು ಗ್ರಾಮೀಣ ಪ್ರದೇಶದಲ್ಲಿ ಸದಾ ಗುನುಗುತ್ತಿರುತ್ತದೆ. ಅಷ್ಟು ಶಕ್ತಿಶಾಲಿ ಈ ರಾಗಿ. ಇದು ಮೂಳೆಗಳನ್ನು ಸದೃಢಗೊಳಿಸುವುದು ಅಲ್ಲದೆ ಹೃದಯ ಸಂಬಂಧಿ ಖಾಯಿಲೆಗಳಿಗೆ ರಾಮಾಬಾಣ ಈ ರಾಗಿ ಧಾನ್ಯ ಅಷ್ಟೆ ಅಲ್ಲದೆ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ.

    ಸಿರಿಧಾನ್ಯಗಳನ್ನೇಕೆ ತಿನ್ನಬೇಕು?
    ಮೊದಲೇ ಹೇಳಿದಂತೆ ಸಿರಿಧಾನ್ಯಗಳು ಹಲವಾರು ವೋಷಕಾಂಶಗಳಿಂದ ಕೂಡಿದೆ. ವಿಟಮಿನ್, ಪ್ರೋಟೀನ್, ಕ್ಯಾಲ್ಷಿಯಂ, ಕಬ್ಬಿಣ, ನಾರು ಸೇರಿ ಆರೋಗ್ಯವಂತ ಮನುಷ್ಯನಿಗೆ ಅಗತ್ಯವಿರುವ ಎಲ್ಲ ರೀತಿಯ ಪೋಷಕಾಂಶಗಳನ್ನು ಕೇವಲ ಒಂದೇ ಬಗೆಯ ಸಿರಿಧಾನ್ಯ ಒದಗಿಸಬಲ್ಲದು ಎಂದರೆ ನಿಮಗೆ ಅಚ್ಚರಿಯಾಗಬಹುದು. ರಾಗಿಯಯಲ್ಲಿ 7.70 ಗ್ರಾಂ. ಪ್ರೋಟೀನ್, 67 ಗ್ರಾಂ. ಸಿಎಚ್‌ಒ, 350 ಮಿಲಿ ಗ್ರಾಂ. ಕ್ಯಾಲ್ಷಿಯಂ, 3.9 ಮಿ.ಗ್ರಾಂ. ಕಬ್ಬಿಣ, 3.6 ಗ್ರಾಂ. ನಾರಿನ ಅಂಶವಿರುತ್ತದೆ. ಇನ್ನು ನವಣೆಯಲ್ಲಿ 5 ಗ್ರಾಂ. ಪ್ರೋಟೀನ್, 60.9 ಗ್ರಾಂ. ಸಿಎಚ್‌ಒ, 15 ಮಿಲಿ ಗ್ರಾಂ. ಕ್ಯಾಲ್ಷಿಯಂ, 31 ಮಿ.ಗ್ರಾಂ. ಕಬ್ಬಿಣ, 4.3 ಗ್ರಾಂ. ನಾರಿನ ಅಂಶವಿದೆ. ಸಜ್ಜೆ ಅತ್ಯಂತ ಸಂಪತ್ಭರಿತವಾಗಿದ್ದು, ಇದರಲ್ಲಿ 11.80 ಗ್ರಾಂ. ಪ್ರೋಟೀನ್, 72 ಗ್ರಾಂ. ಸಿಎಚ್‌ಒ, 42 ಮಿಲಿ ಗ್ರಾಂ. ಕ್ಯಾಲ್ಷಿಯಂ, 11 ಮಿ.ಗ್ರಾಂ. ಕಬ್ಬಿಣ, 2.3 ಗ್ರಾಂ. ನಾರಿನ ಅಂಶವಿರುತ್ತದೆ. ಇದರೊಂದಿಗೆ ಅಗತ್ಯ ಪ್ರಮಾಣದ ಕೊಬ್ಬಿನ ಅಂಶ ಕೂಡ ಇವುಗಳಲ್ಲಿದೆ. ಹೀಗಾಗಿ ಸಂಸ್ಕರಿಸಿ ತಯಾರಾದ ಪೌಡರ್ ಸೇವನೆ ಮತ್ತು ಹೈಬ್ರೀಡ್ ಧಾನ್ಯಗಳಿಗಿಂತಲೂ ಸಿರಿಧಾನ್ಯಗಳ ಬಳಕೆ ಸೂಕ್ತ ಎನ್ನುತ್ತಾರೆ ತಜ್ಞರು.

    ಸಿರಿಧಾನ್ಯಗಳಿಗಾಗಿ ಸಂಪರ್ಕಿಸಿ: ಜೀವಿತಾ ಎಂಟರ್ ಪ್ರೈಸಸ್ ಯರಗುಂಟೆ, ಶಿರಾ ತಾಲೂಕು, ತುಮಕೂರು ಜಿಲ್ಲೆ.

    ಮೊಬೈಲ್​ ನಂಬರ್​: 7624931166

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts