More

    ಶುಗರ್, ಬಿಪಿ ಇದ್ದವರ ಕಾಡಲಿದೆ ದಂತ ಸಮಸ್ಯೆ

    ಎನ್.ಆರ್.ಪುರ: ಮಧುಮೇಹ, ರಕ್ತದೊತ್ತಡ ಇದ್ದವರಿಗೆ ಹೆಚ್ಚಾಗಿ ದಂತ ಹಾಳಾಗಲಿದ್ದು, ಪ್ರತಿಯೊಬ್ಬರೂ ಬಾಯಿಯ ಆರೋಗ್ಯದ ಕಡೆ ಗಮನ ನೀಡಬೇಕು ಎಂದು ಜಿಲ್ಲಾ ದಂತ ನೋಡಲ್ ಅಧಿಕಾರಿ ಹಾಗೂ ಹಿರಿಯ ದಂತ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಸಲಹೆ ನೀಡಿದರು.

    ಪಟ್ಟಣದ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿ ವಿಶ್ವ ಬಾಯಿ ಆರೋಗ್ಯ ದಿನಾಚರಣೆಯ ಪ್ರಯುಕ್ತ ಪೊಲೀಸರಿಗೆ ಏರ್ಪಡಿಸಿದ್ದ ಉಚಿತ ದಂತ ತಪಾಸಣೆ ಹಾಗೂ ದಂತ ಆರೋಗ್ಯ ಜಾಗೃತಿ ಶಿಬಿರದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು.
    2010ರಿಂದ ಪ್ರತಿವರ್ಷ ಮಾ.20ರಂದು ವಿಶ್ವ ಬಾಯಿ ದಿನ ಆಚರಿಸುತ್ತಿದ್ದೇವೆ. ಪ್ರತಿಯೊಬ್ಬರೂ ತಮ್ಮ ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. 6 ವರ್ಷದಿಂದ ಮಕ್ಕಳಿಗೆ ಹಲ್ಲು ಬರಲು ಪ್ರಾರಂಭವಾಗುತ್ತದೆ. 14 ವರ್ಷವರೆಗೂ ಹಲ್ಲು ಬಿದ್ದು ಮತ್ತೆ ಹುಟ್ಟುತ್ತದೆ. ದೊಡ್ಡವರಿಗೆ 32 ಹಲ್ಲುಗಳಿದ್ದು ಈ ಒತ್ತಡದ ಬದುಕಿನಲ್ಲಿ ಶುಗರ್, ಬಿಪಿ ಹಾಗೂ ಅತಿಯಾದ ಮಾತ್ರೆ ಸೇವನೆ, ಆಹಾರದ ವ್ಯತ್ಯಾಸದಿಂದ ಗ್ಯಾಸ್ಟ್ರಿಕ್ ಉಂಟಾಗಿ ದಂತದ ಮೇಲೂ ಪರಿಣಾಮ ಬೀರುತ್ತದೆ. ಕೆಲವರಿಗೆ ಬಾಯಿ ವಾಸನೆ ಬರುತ್ತದೆ. ದಂತ ಭಾಗ್ಯ ಯೋಜನೆಯಡಿ 40 ವರ್ಷದ ದಾಟಿದವರಿಗೆ ಉಚಿತವಾಗಿ ಹಲ್ಲನ್ನು ಕಟ್ಟಿಸಿಕೊಡಲಾಗುವುದು ಎಂದರು.
    ತಾಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಮಾತನಾಡಿ, ಆಧುನಿಕ ಬದುಕಿನಲ್ಲಿ ಪ್ರತಿಯೊಬ್ಬರಿಗೂ ದಂತದ ಸಮಸ್ಯೆ ಕಾಡುತ್ತಿದೆ. ದಂತದ ಸಮಸ್ಯೆ ಬಂದಾಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇತ್ತೀಚಿಗೆ 30ರಿಂದ 35 ವರ್ಷದವರಿಗೆ ದಂತದ ಸಮಸ್ಯೆ ಕಾಡುತ್ತಿದೆ ಎಂದರು.
    ಪಿಎಸ್‌ಐ ಬಿ.ಎಸ್.ನಿರಂಜನಗೌಡ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಹಿರಿಯ ಆರೋಗ್ಯ ನಿರೀಕ್ಷಕ ದರ್ಶನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts