More

    ಬೇವನ್ನು ಪ್ರತಿ ದಿನ ಈ ರೀತಿ ಸೇವನೆ ಮಾಡುವುದರಿಂದ ಯಾವುದೇ ರೋಗ ನಿಮ್ಮ ಬಳಿ ಸುಳಿಯುವುದೇ ಇಲ್ಲ…

    ಭಾರತದಲ್ಲಿ ಬೇವಿನ ಮರಕ್ಕೆ ವಿಶೇಷ ಸ್ಥಾನವಿದೆ. ಗ್ರಾಮೀಣ ಪ್ರದೇಶದ ಜನರು ಈ ಮರವನ್ನು ಹೆಚ್ಚಾಗಿ ಬೆಳೆಯಲು ಇಷ್ಟಪಡುತ್ತಾರೆ. ಬಹುತೇಕ ಮನೆಗಳಲ್ಲಿ ಬೇವಿನ ಮರಗಳಿವೆ. ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಈ ಮರವು ಮಧುಮೇಹಿಗಳಿಗೂ ತುಂಬಾ ಉಪಯುಕ್ತವಾಗಿದೆ. ಬೇವಿನ ಎಲೆಗಳು ಹುಳುಗಳನ್ನೂ ಸಹ ಕೊಲ್ಲುತ್ತವೆ ಮತ್ತು ಮನೆಯಲ್ಲಿ ಬೇವಿನ ಎಲೆಯ ನೀರನ್ನು ಚಿಮುಕಿಸುವುದರಿಂದ ಅದರ ಕಹಿ ಗುಣವು ವಿವಿಧ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.

    ಬೇವು ಒಂದು ಔಷಧೀಯ ಮೂಲಿಕೆಯಾಗಿದ್ದು ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಎಂದು ಹಲವಾರು ಸಂಶೋಧನೆಗಳಿಂದ ಸಾಬೀತಾಗಿದೆ. ಬೇವು ಟ್ರೈಟರ್‌ಪೆನಾಯ್ಡ್‌ಗಳು, ಫ್ಲೇವನಾಯ್ಡ್‌ಗಳು, ಕೀಟೋನ್‌ಗಳು ಮತ್ತು ಸ್ಟೀರಾಯ್ಡ್‌ಗಳಂತಹ ಇತರ ಸಂಯುಕ್ತಗಳನ್ನು ಒಳಗೊಂಡಿದೆ. ಬೇವಿನ ಎಲೆಗಳಲ್ಲಿ ಆಸ್ಕೋರ್ಬಿಕ್ ಆಮ್ಲ, ಅಮೈನೋ ಆಮ್ಲ, ನಿಂಬಿನ್, ನಿಮ್ಪಾಂಡಿಯೋಲ್, ಹೆಕ್ಸಾಕೋಸಾನಾಲ್, ನಿಂಬನಾನ್, ಪಾಲಿಫಿನಾಲಿಕ್ ಫ್ಲೇವನಾಯ್ಡ್​ಗಳು, ಕ್ವೆರ್ಸೆಟಿನ್ ಇರುತ್ತದೆ.

    ಬೇವು ಮಧುಮೇಹ ನಿವಾರಕ ಗುಣಗಳನ್ನು ಹೊಂದಿದ್ದು, ಮಧುಮೇಹ ರೋಗಿಗಳಲ್ಲಿ ಇನ್ಸುಲಿನ್ ಚುಚ್ಚುಮದ್ದಿನ ಅಗತ್ಯವನ್ನು ಕಡಿಮೆ ಮಾಡಲು ಈ ಬೇವು ತುಂಬಾ ಪರಿಣಾಮಕಾರಿಯಾಗಿದೆ. ನಾಲ್ಕು ವಾರಗಳ ಕಾಲ ಬೇವಿನ ಎಲೆಯ ರಸ ಮತ್ತು ಬೀಜದ ಎಣ್ಣೆಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನವು ಸೂಚಿಸುತ್ತದೆ. ಇಲಿಗಳ ಮೇಲೆ ಪರೀಕ್ಷಿಸಿದಾಗ, ಬೇವಿನ ಬೇರು ಮತ್ತು ತೊಗಟೆಯ ಸಾರಗಳು ರಕ್ತದಲ್ಲಿನ ಗ್ಲೂಕೋಸ್ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ ಎಂಬುದು ಸಾಬೀತಾಗಿದೆ.

    ಟೈಪ್ 2 ಮಧುಮೇಹಿಗಳಲ್ಲಿ ಇನ್ಸುಲಿನ್ ಪ್ರತಿರೋಧವು ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಹೀಗಾಗಿ ಬೇವಿನ ಎಲೆಯ ರಸವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ.

    ಬಳಸುವುದು ಹೇಗೆ?
    ಅರ್ಧ ಲೀಟರ್ ನೀರಿನಲ್ಲಿ ಸುಮಾರು 20 ಬೇವಿನ ಎಲೆಗಳನ್ನು ಸೇರಿಸಿ ಮತ್ತು ಸುಮಾರು 5 ನಿಮಿಷಗಳ ಕಾಲ ಕುದಿಸಿ. ನಂತರ ನೀರು ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗಿದಾಗ, ಒಲೆಯನ್ನು ಆಫ್ ಮಾಡಬೇಕು. ನಂತರ ಫಿಲ್ಟರ್ ಮಾಡಿ ಕುಡಿಯಿರಿ. ನೀವು ದಿನಕ್ಕೆ ಎರಡು ಬಾರಿ ಕುಡಿಯಬಹುದು. ನಿಯಮಿತವಾಗಿ ಕುಡಿಯುವುದರಿಂದ ಅನೇಕ ರೋಗಗಳಿಂದ ನಿಮ್ಮನ್ನು ಅದು ರಕ್ಷಣೆ ಮಾಡುತ್ತದೆ. (ಏಜೆನ್ಸೀಸ್​)

    ವಿಶ್ವಕಪ್ ಟೂರ್ನಿಯ ಒಂದೇ ಗುಂಪಿನಲ್ಲಿದ್ದರೂ ಭಾರತ-ಪಾಕ್ ಪಂದ್ಯವಿಲ್ಲ!: ಕಾರಣ ಹೀಗಿದೆ

    ಇಂದಿನಿಂದ ಬಜೆಟ್ ಅಧಿವೇಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts