ಲ್ಯಾಗ್​ ಮಂಜು-ದಿವ್ಯಾ ಸುರೇಶ್​ ಬಗ್ಗೆ ಹರಿದಾಡ್ತಿರೋ ಸುದ್ದಿ ನಿಜನಾ? ಹೌದು ಅನ್ನುವಂತಿದೆ ಈ ವೈರಲ್​ ಫೋಟೋ!

Lag Manju
Published on

ಬೆಂಗಳೂರು: ಇತ್ತೀಚೆಗಷ್ಟೇ ಮುಗಿದ ಬಿಗ್​ಬಾಸ್​ ಸೀಸನ್​ 8ರಲ್ಲಿ ಭಾರೀ ಸದ್ದು ಮಾಡಿದ ಎರಡು ಜೋಡಿ ಅಂದ್ರೆ ಒಂದು ಅರವಿಯಾ (ಅರವಿಂದ್​ ಮತ್ತು ದಿವ್ಯಾ ಉರುಡುಗ) ಇನ್ನೊಂದು ಬಿಗ್​ಬಾಸ್​ ವಿನ್ನರ್​ ಮಂಜು ಪಾವಗಡ-ದಿವ್ಯಾ ಸುರೇಶ್​ ಜೋಡಿ. ಬಿಬಿಕೆ 8ರ ಆರಂಭದಿಂದಲೂ ಲ್ಯಾಗ್​ ಮಂಜು ಮತ್ತು ದಿವ್ಯಾ ಸುರೇಶ್​ಮ ತುಂಬಾ ಕ್ಲೋಸ್​ ಆದರು. ಎಷ್ಟರ ಮಟ್ಟಿಗೆ ಅಂದ್ರೆ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಬಿಗ್​ ಮನೆಯಲ್ಲಿ ಮತ್ತು ಹೊರಗಡೆ ವೀಕ್ಷಕರ ನಡುವೆಯೂ ಭಾರಿ ಚರ್ಚೆಯಾಯಿತು.

ಒಬ್ಬರ ಬಗ್ಗೆ ಇನ್ನೊಬ್ಬರು ತುಂಬಾ ಒಳ್ಳೆಯ ಮಾತುಗಳನ್ನಾಡುವುದು ಸೇರಿ ಶೋ ಆರಂಭದಿಂದಲೂ ಕೊನೆಯವರೆಗೂ ಇಬ್ಬರು ಹೆಚ್ಚು ಸಮಯ ಒಟ್ಟಿಗೆ ಕಳೆದಿದ್ದಾರೆ. ಕರೊನಾ ಲಾಕ್​ಡೌನ್​ನಿಂದ ಬಿಗ್​ಬಾಸ್​ 75 ದಿನಗಳಿಗೆ ಮೊಟಕುಗೊಂಡು ಮತ್ತೆ ಎರಡನೇ ಇನ್ನಿಂಗ್ಸ್​ ಆರಂಭಿಸಿದಾಗ ಮಂಜು, ದಿವ್ಯಾರಿಂದ ಸ್ವಲ್ಪ ಅಂತರ ಕಾಯ್ದುಕೊಂಡರು. ಈ ವೇಳೆ ದಿವ್ಯಾ ತುಂಬಾ ಭಾವುಕರಾಗಿದ್ದು ಉಂಟು. ನಂತರ ಇಬ್ಬರು ಮತ್ತೆ ಕ್ಲೋಸ್​ ಆಗಿದ್ದು ಉಂಟು ಕೊನೆಯಲ್ಲಿ ದಿವ್ಯಾ ಸುರೇಶ್​ ಲ್ಯಾಗ್​ ಮಂಜುಗಾಗಿ ಕ್ಯಾಂಡಲ್​ ಲೈಟ್​ ಡಿನ್ನರ್​ ಆಯೋಜಿಸಿದ್ದು ಇಬ್ಬರ ನಡುವಿನ ಸಂಬಂಧಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿತ್ತು.

ಇನ್ನು ಬಿಬಿಕೆಯಿಂದ ದಿವ್ಯಾ ಸುರೇಶ್​ ಎಲಿಮಿನೇಟ್​ ಆಗಿ ಹೊರಬಂದಾಗಲೂ ಮಂಜು ಪರವೇ ಹೆಚ್ಚು ಮಾತನಾಡಿದರು. ಮಂಜುನೇ ಗೆಲ್ಲಬೇಕೆಂದು ಬಯಸಿದರು. ಅವರಿಗೆ ಮತ ಚಲಾಯಿಸುವಂತೆ ಅಭಿಮಾನಿಗಳಲ್ಲಿ ಕೇಳಿಕೊಂಡರು. ಕೊನೆಗೂ ಬಿಗ್​ಬಾಸ್​ನಲ್ಲಿ ಮಂಜು ವಿನ್ನರ್​ ಎಂದು ಘೋಷಿಸಿದಾಗ ಮಂಜುಗಿಂತ ಹೆಚ್ಚು ಖುಷಿಯಾಗಿದ್ದೇ ದಿವ್ಯಾ. ಸಿಕ್ಕಾಪಟ್ಟೆ ಖುಷಿಯಾಗಿ ವೇದಿಕೆ ಮೇಲೆ ದಿವ್ಯಾ ಕುಣಿದು ಕುಪ್ಪಳಿಸಿದರು. ಇದನ್ನು ನೋಡಿದ ವೀಕ್ಷಕರು ದಿವ್ಯಾ ಮತ್ತು ಮಂಜು ನಡುವೆ ಲವ್​ ಇದೆ ಎಂದಿದ್ದರು.

ಬಿಬಿಕೆ 8ನೇ ಆವೃತ್ತಿ ಮುಗಿದ ಬಳಿಕವೂ ದಿವ್ಯಾ ಮತ್ತು ಮಂಜು ಅನೇಕ ಸನ್ನಿವೇಶಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಜನರ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ. ಅಲ್ಲದೆ, ಪಾರ್ಕ್​ ಒಂದರಲ್ಲಿ ಇಬ್ಬರು ಒಟ್ಟಿಗೆ ಮ್ಯೂಸಿಕ್​ ಒಂದಕ್ಕೆ ರೊಮ್ಯಾಂಟಿಕ್​ ಆಗಿ ನಟಿಸಿದ ವಿಡಿಯೋ ಕೂಡ ವೈರಲ್​ ಆಗಿತ್ತು. ಈ ಎಲ್ಲ ಕಾರಣಗಳಿಂದ ಇಬ್ಬರ ನಡುವೆ ಸಮ್​ಥಿಂಗ್​ ಏನೋ ಇದೆ ಎಂದು ಭಾರಿ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಂತೂ ಇಬ್ಬರ ಫೋಟೋ ವೈರಲ್​ ಆಗಿದೆ. ಅಲ್ಲದೆ, ಮಂಜು-ದಿವ್ಯಾ ಹೆಸರಿನಲ್ಲಿ ಫ್ಯಾನ್ಸ್​ ಪೇಜ್​ ಸಹ ಕ್ರಿಯೆಟ್​ ಆಗಿದ್ದು, ಬಿಗ್​ಬಾಸ್​ ಜೋಡಿಯ ಖ್ಯಾತಿಗೆ ಕನ್ನಡಿ ಹಿಡಿದಂತಾಗಿದೆ.

ಇನ್ನು ತಾಜಾ ಬೆಳವಣಿಗೆಯೇನೆಂದರೆ, ಇತ್ತೀಚೆಗಷ್ಟೇ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಗಣೇಶೋತತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಪ್ರದಾಯುತವಾಗಿ ಆಚರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಗ್​ಬಾಸ್​ ಸ್ಪರ್ಧಿಗಳು ಕೂಡ ಭಾಗವಹಿಸಿದ್ದಾರೆ. ಅಲ್ಲದೆ, ಸ್ಪರ್ಧಿಗಳ ಕುಟುಂಬದ ಸದಸ್ಯರು ಕೂಡ ಪಾಲ್ಗೊಂಡಿದ್ದರು. ಏನಪ್ಪ ವಿಚಾರ ಅಂದ್ರೆ ದಿವ್ಯಾ ಅವರ ತಾಯಿ ಮತ್ತು ಸಹೋದರ ಜತೆಯಲ್ಲಿ ನಿಂತು ಮಂಜು ಪಾವಗಡ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ದಿವ್ಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಫೋಟೋ ಬಗ್ಗೆ ಬರೆದುಕೊಂಡಿರುವ ದಿವ್ಯಾ ಈ ಫ್ರೇಮ್​ನಲ್ಲಿರುವ ಮೂರು ಜನ ನನ್ನ ಜೀವನದ ನಿಜವಾದ ಶಿಕ್ಷಕರು ಎಂದಿದ್ದಾರೆ. ನೀವು ಮೂವರು ನನಗೆ ತುಂಬಾ ಸ್ಫೂರ್ತಿ ನೀಡಿದ್ದೀರಿ, ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದೀರಿ ಎಂದು ಶಿಕ್ಷಕರ ದಿನದಂದು ಫೋಟೋಮ ಪೋಸ್ಟ್​ ಮಾಡಿ ವಿಶ್​ ಮಾಡಿದ್ದಾರೆ.

ಇದೀಗ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮದುವೆ ವಿಚಾರ ಪ್ರಸ್ತಾಪಿಸಿದ್ದಾರೆ. ಇಬ್ಬರ ಬಾಂದವ್ಯ ಚೆನ್ನಾಗಿದೆ. ಇದು ಹೀಗೆ ಕೊನೆಯವರೆಗೂ ಇರಲಿ ಎಂದಿದ್ದಾರೆ. ಇನ್ನು ಕೆಲವರು ಇಬ್ಬರ ನಡುವೆ ನಿಜವಾದ ಪ್ರೀತಿ ಇದೆ. ಈ ಪ್ರೀತಿ ಕೊನೆಯವರೆಗೂ ಉಳಿಯಲಿ ಎನ್ನುವ ಮೂಲಕ ಮದುವೆ ಬಗ್ಗೆ ಪರೋಕ್ಷವಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net