More

    VIDEO| ಕಾಫಿ ಶಾಪ್​ನಲ್ಲಿ ಖಾಸಗಿ ಅಂಗದ ಬಗ್ಗೆ ಮಾತನಾಡಿದ ಆರ್​ಜಿವಿ ಕಪಾಳಕ್ಕೆ ಬಿತ್ತು ಏಟು..!

    ಹೈದರಬಾದ್​: ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರು ವಿವಾದಗಳ ಕೇಂದ್ರ ಬಿಂದು ಎಂಬುದು ಗೊತ್ತಿರುವ ವಿಚಾರ. ಸದಾ ವಿವಾದಗಳನ್ನೇ ಹುಟ್ಟುಹಾಕವ ಮೂಲಕ ಸುದ್ದಿಯಾಗುವುದೇ ಇವರ ಖಯಾಲಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ಬಿಗ್​ಬಾಸ್​ ಬ್ಯೂಟಿ ಅರಿಯಾನಾ ಗ್ಲೋರಿ ಜತೆಗೆ ಆರ್​ಜಿವಿ ಒನ್​ ಟು ಒನ್​ ಸಂದರ್ಶನದಲ್ಲಿ ಬೋಲ್ಡ್​ ಆಗಿ ಮಾತನಾಡಿದ್ದ ವಿಡಿಯೋ ವೈರಲ್​ ಆಗಿತ್ತು. ಇದೀಗ ಮತ್ತೊಬ್ಬ ಬಿಗ್​ಬಾಸ್​ ಬ್ಯೂಟಿ ಆಶು ರೆಡ್ಡಿ ಜತೆ “ಬೋಲ್ಡ್​ ಇಂಟರ್ವ್ಯೂವ್​ ವಿತ್​ ಆಶು ರೆಡ್ಡಿ” ಎಂಬ ಸಂದರ್ಶನ ಮಾಡಿರುವ ಆರ್​ಜಿವಿ ಕಪಾಳಕ್ಕೆ ಏಟು ಸಹ ತಿಂದಿದ್ದಾರೆ.

    ಆರ್​ಜಿವಿ ತಾವು ಮಾಡಿರುವ ಮುಂದಿನ ಹಾಟ್​ ಆ್ಯಂಡ್​ ಬೋಲ್ಡ್​ ಸಂದರ್ಶನದಲ್ಲಿ ಆಶು ರೆಡ್ಡಿ ಭಾಗಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರೊಮೋವನ್ನು ತಮ್ಮ ಆರ್​ಜಿವಿ ಯೂಟ್ಯೂಬ್​​ನಲ್ಲಿ ಹಂಚಿಕೊಂಡಿದ್ದಾರೆ. ಪ್ರೊಮೋದಲ್ಲಿ ಆರ್‌ಜಿವಿ ಕಾಫಿ ಶಾಪ್​ ಒಂದಕ್ಕೆ ಪ್ರವೇಶಿಸಿದಾಗ ಆಶು ರೆಡ್ಡಿ ಕಾಫಿ ಕುಡಿಯುತ್ತಾ ಕುಳಿತಿರುತ್ತಾರೆ. ಅವಳೊಂದಿಗೆ ಮಾತನಾಡಲು ಪ್ರಯತ್ನಿಸುವ ಆರ್​ಜಿವಿ, ಆರಂಭದಲ್ಲೇ ನಿಮ್ಮ ತೊಡೆ ಅಂದ್ರೆ ನನಗೆ ತುಂಬಾ ಇಷ್ಟ ಅನ್ನುತ್ತಾನೆ. ಹೀಗಂದ ತಕ್ಷಣವೇ ಆಶು ರೆಡ್ಡಿ, ಆರ್​ಜಿವಿ ಕೆನ್ನೆಗೆ ಬಾರಿಸುತ್ತಾಳೆ. ಇದಿಷ್ಟು ಬಿಡುಗಡೆಯಾಗಿರುವ ಪ್ರೊಮೋದಲ್ಲಿದೆ.

    ಈ ವಿಡಿಯೋ ಸಂಬಂಧ ತಮ್ಮ ಟ್ವಿಟರ್​ನಲ್ಲಿ ಸ್ಪಷ್ಟನೆ ನೀಡಿರುವ ಆರ್​ಜಿವಿ, ಇದು ಮುಂದಿನ ನನ್ನ ಸಂದರ್ಶನದ ಪ್ರೊಮೋ ಆಗಿದೆ, ಇದನ್ನು ಹಾಸ್ಯಾತ್ಮಕ ರೀತಿಯಲ್ಲಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇವೆಂದು ಹೇಳಿದ್ದಾರೆ.

    ಆಶು ರೆಡ್ಡಿ ಯಾರು ಎಂದು ನೋಡುವುದಾದರೆ, ಆಕೆ ತೆಲುಗು ಚಿತ್ರರಂಗದ ನಟಿ. ಅಲ್ಲದೆ, ಡಬ್​ಸ್ಮ್ಯಾಶರ್​ ಕೂಡ ಹೌದು. ಚಲ್​ ಮೋಹನ್​ ರಂಗ ಚಿತ್ರದ ಮೂಲಕ ಟಾಲಿವುಡ್​ ಚಿತ್ರರಂಗದಲ್ಲಿ ತಮ್ಮ ಸಿನಿ ಜರ್ನಿ ಆರಂಭಿಸಿದ್ದಾರೆ. ಬಿಗ್​ಬಾಸ್​ ಸಿಸನ್​ 3ರಲ್ಲಿ ತುಂಬಾ ಗುರುತಿಸಿಕೊಂಡವರು. ಹ್ಯಾಪಿ ಡೇಸ್ ಎಂಬ ಕಾರ್ಯಕ್ರಮದ ಮೂಲಕ ಟಿವಿ ನಿರೂಪಕರಾಗಿಯು ಕಾಣಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ರಾಜ್ಯಸಭಾ ಸಂಸದ ಜೋಗಿನಪಲ್ಲಿ ಸಂತೋಷ್ ರೆಡ್ಡಿ ಆರಂಭಿಸಿದ ಗ್ರೀನ್ ಇಂಡಿಯಾ ಚಾಲೆಂಜ್​ನಲ್ಲಿ ಭಾಗವಹಿಸಿ, ಜುಬಿಲಿ ಹಿಲ್ಸ್‌ನ ಜಿಎಚ್‌ಎಂಸಿ ಪಾರ್ಕ್‌ನಲ್ಲಿ ಸಸಿಗಳನ್ನು ನೆಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆಶು ರೆಡ್ಡಿ ಇನ್​ಸ್ಟಾಗ್ರಾಂಲ್ಲಿ 1 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ನೋಡಲು ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಹೋಲಿಕೆಯು ಆಕೆಗೆ ಸ್ವಲ್ಪ ಖ್ಯಾತಿಯನ್ನು ತಂದುಕೊಟ್ಟಿದೆ.

    ಕೆಲವು ತಿಂಗಳ ಹಿಂದೆ ಬಿಗ್​ಬಾಸ್​ ಬ್ಯೂಟಿ ಅರಿಯಾನಾ ಜತೆ ಆರ್​ಜಿವಿ ಬೋಲ್ಡ್​ ಸಂದರ್ಶನ ಮಾಡಿದ್ದರು. ದೇಹದ ಅಂಗಾಂಗ, ಸೆಕ್ಸ್​, ರೊಮ್ಯಾನ್ಸ್​, ಸಂಬಂಧ (ಅಫೇರ್​) ಮುಂತಾದ ವಿಚಾರಗಳ ಬಗ್ಗೆ ಮುಕ್ತಾವಾಗಿ ಆರ್​ಜಿವಿ ಮಾತನಾಡಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಅಲ್ಲದೆ, ಟ್ರೋಲಿಗರಿಗೆ ಆರ್​​ಜಿವಿ ಮತ್ತು ಅರಿಯಾನಾ ಹಾಟ್​ ಸಂದರ್ಶನವು ಆಹಾರವಾಗಿತ್ತು. (ಏಜೆನ್ಸೀಸ್​)

    ನಿನ್ನ ಜತೆ ಸೆಕ್ಸ್​ ಮಾಡಿದ್ದೀನಿ, ಆ ಭಾಗವನ್ನು ತುಂಬಾ ಇಷ್ಟಪಡ್ತೇನೆ! ಅರಿಯಾನಾಗೆ ಶಾಕ್​ ಕೊಟ್ಟ ಆರ್​ಜಿವಿ​

    ಅರಿಯಾನಾ ಜತೆ ಆರ್​ಜಿವಿ ಅಫೇರ್​? ಸಂದರ್ಶನದಲ್ಲಿದೆ ವರ್ಮರ ಬೋಲ್ಡ್​ ಮಾತುಗಳು

    VIDEO| ನಟಿಯೊಂದಿಗೆ ಆರ್​ಜಿವಿ ಡ್ಯಾನ್ಸ್​ ವಿಡಿಯೋ ವೈರಲ್: ಏನಿದು ಅಸಹ್ಯ ಅಂದ್ರು ನೆಟ್ಟಿಗರು!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts