

ಹೈದರಬಾದ್: ಸದಾ ವಿವಾದಗಳಿಂದಲೇ ಸುದ್ದಿಯಾಗುವ ಬಾಲಿವುಡ್ ನಿರ್ದೇಶಕ ರಾಮ್ಗೋಪಾಲ್ ವರ್ಮಾ (ಆರ್ಜಿವಿ) ತನ್ನ ಸಿನಿಮಾಗಳಿಗೆ ಕ್ರೇಜಿಯಾಗಿ ಪ್ರಮೋಷನ್ ಮಾಡುವುದರಲ್ಲಿ ನಂಬರ್ ಒನ್. ಟೀಸರ್ ಮೂಲಕವೇ ಭಾರೀ ನಿರೀಕ್ಷೆ ಹುಟ್ಟುಹಾಕುವ ವರ್ಮ, ಇತ್ತೀಚೆಗೆ ತಮ್ಮ ಮುಂದಿನ ಚಿತ್ರದ ನಟಿ ಅರಿಯಾನಾ ಗ್ಲೋರಿ ಜತೆಗೆ ಒನ್ ಟು ಒನ್ ಸಂದರ್ಶನದಲ್ಲಿ ಬೋಲ್ಡ್ ಆಗಿ ಮಾತನಾಡುವ ಮೂಲಕ ವಿಭಿನ್ನವಾಗಿ ಚಿತ್ರದ ಪ್ರಮೋಷನ್ಗೆ ಕೈಹಾಕಿದ್ದಾರೆ.
ಜಿಮ್ ಮಾಡುತ್ತಾ ಒಬ್ಬರಿಗೊಬ್ಬರು ಬೋಲ್ಡ್ ಮಾತುಗಳನ್ನಾಡಿರುವ ಸಂದರ್ಶನದ ವಿಡಿಯೋ ಯೂಟ್ಯೂಬ್ನಲ್ಲಿ ವೈರಲ್ ಆಗಿದೆ. ಇತ್ತೀಚೆಗಷ್ಟೇ ಬೋಲ್ಡ್ ಇಂಟರ್ವ್ಯೂವ್ ವಿತ್ ಗ್ಲೋರಿ ಟೀಸರ್ ಅನ್ನು ಅರಿಯಾನಾ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದರು. ಸಂದರ್ಶನವೂ ಸಹ ವರ್ಮ ಸಿನಿಮಾ ರೀತಿಯಲ್ಲೇ ಬೋಲ್ಡ್ ಆಗಿದೆ.
ಇಡೀ ಸಂದರ್ಶನದಲ್ಲಿ ದೇಹದ ಅಂಗಾಂಗ, ಸೆಕ್ಸ್, ರೊಮ್ಯಾನ್ಸ್, ಸಂಬಂಧ (ಅಫೇರ್) ಮುಂತಾದ ವಿಚಾರಗಳ ಬಗ್ಗೆಯೇ ಇಬ್ಬರು ಮುಕ್ತವಾಗಿ ಚರ್ಚಿಸಿದ್ದಾರೆ. ಅಂದಹಾಗೆ ಈ ಸಂದರ್ಶನ ವರ್ಮ ಅವರು ಆಫೀಸ್ನಲ್ಲೇ ನಡೆದಿದೆ.
ಜಿಮ್ಗೆ ಅರಿಯಾನಾ ಪ್ರವೇಶಿಸುತ್ತಿದ್ದಂತೆ ಆಕೆಯ ಉಡುಗೆ ಬಗ್ಗೆ ಹೊಗಳುವುದರೊಂದಿಗೆ ಸಂದರ್ಶನ ಆರಂಭವಾಗುತ್ತದೆ. ಆರಂಭದಲ್ಲಿ ವರ್ಮರನ್ನು ತಾನು ಭಾಗವಾಗಿದ್ದ ಬಿಗ್ಬಾಸ್ ಶೋ ಅನ್ನು ಏಕೆ ವೀಕ್ಷಣೆ ಮಾಡುತ್ತಿದ್ರಿ ಎಂದು ಅರಿಯಾನಾ ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರಿಸುವ ವರ್ಮ, ಸನ್ನಿ ಲಿಯೋನ್ ಭಾಗಿಯಾಗಿದ್ದಾಗ ಮೊದಲ ಬಾರಿಗೆ ಬಿಗ್ಬಾಸ್ ಶೋ ವೀಕ್ಷಿಸಿದೆ. ಶೋನಲ್ಲಿ ನೀನು ಮತ್ತು ನಿನ್ನ ಸೌಂದರ್ಯ ನನಗೆ ತುಂಬಾ ಇಷ್ಟವಾಯಿತು. ಹೀಗಾಗಿಯೇ ನಾನು ನಿನ್ನ ಬಗ್ಗೆ ಟ್ವೀಟ್ ಮಾಡಿದೆ ಎಂದು ಉತ್ತರಿಸುತ್ತಾರೆ.
ಇನ್ನು ಬಿಗ್ಬಾಸ್ ಶೋ ವೇಳೆ ಅರಿಯಾನಾ ಬೆಂಬಲಿಸಿ ವರ್ಮ ಟ್ವೀಟ್ ಮಾಡಿದ್ದು, ಮಾಧ್ಯಮದಲ್ಲಿ ವಿಶೇಷ ಗಮನ ಸೆಳೆಯಿತು. ಶೋನಿಂದ ಹೊರಬಂದಾಗ ನಿಮ್ಮ ಮತ್ತು ನನ್ನ ನಡುವೆ ಅಫೇರ್ ಇದೆಯಾ ಎಂದು ಅನೇಕರು. ಈ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಾ ಸರ್? ಎಂದು ಅರಿಯಾನಾ ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರ ನೀಡುವ ವರ್ಮ, ಸಾಮಾಜಿಕ ಮಾಧ್ಯಮದಲ್ಲಿರುವ ಜನರು ಯಾವಾಗಲೂ ಏನನ್ನಾದರೂ ಲೈವ್ ನೋಡಲು ಬಯಸುತ್ತಾರೆ. ನಾನು ಅಂತಹ ವಿಷಯಗಳ ಬಗ್ಗೆ ಹೆದರುವುದಿಲ್ಲ. ನಾವು ನಮ್ಮ ಕೆಲಸದತ್ತ ಗಮನ ಹರಿಸೋಣ ಮತ್ತು ಅವರು ತಮ್ಮ ಕೆಲಸದ ಮೇಲೆ ಕೇಂದ್ರೀಕರಿಸುತ್ತಾರೆ ಎಂದರು.
ಬಿಗ್ಬಾಸ್ನಲ್ಲಿ ತನಗೆ ಬೆಂಬಲವಾಗಿ ಟ್ವೀಟ್ ಮಾಡಿದ್ದಕ್ಕೆ ಅರಿಯಾನಾ ವರ್ಮಾಗೆ ಕೃತಜ್ಞತೆ ಸಲ್ಲಿಸಿದರು. ತನಗೆ ಮಾಡಬೇಕೆಂದು ಅನಿಸಿದ್ದನ್ನು ಮಾಡಿದ್ದೇನೆ. ಹೀಗಾಗಿ ನನಗೆ ಧನ್ಯವಾದ ಹೇಳುವುದರಲ್ಲಿ ಅರ್ಥವಿಲ್ಲ ಎಂದರು. ಕಳೆದ ವರ್ಷದ ಲಾಕ್ಡೌನ್ ಸಂದರ್ಭದಲ್ಲಿಯೂ ನಿಮ್ಮ ಸಂದರ್ಶನ ಮಾಡಿದ್ದೇ. ಈ ಲಾಕ್ಡೌನ್ನಲ್ಲಿ ಸಂದರ್ಶನ ಮಾಡುತ್ತಿದ್ದೇನೆ. ಇದು ಅದೃಷ್ಟ ಎಂದು ನಾನು ಭಾವಿಸುತ್ತೇನೆ, ”ಎಂದು ಅರಿಯಾನಾ ಹಂಚಿಕೊಂಡರು. ಆದರೆ ಆರ್ಜಿವಿ ಅದನ್ನು ತಳ್ಳಿಹಾಕಿ, ಅದೃಷ್ಟ ನಂಬುವುದಿಲ್ಲ ಎಂದು ಹೇಳಿದರು.
ವರ್ಮ ಅವರು ಹುಡುಗಿಯರನ್ನು ಮೆಚ್ಚಿಸಲು ಮಾತ್ರ ವರ್ಕೌಟ್ ಮಾಡುತ್ತಿದ್ದಾರೆಯೇ ಎಂದು ಅರಿಯಾನಾ ಪ್ರಶ್ನಿಸಿದರು. ಅದರಲ್ಲಿ ಯಾವುದೇ ಸತ್ಯವಿಲ್ಲ ಎಂದು ಅದನ್ನು ತಳ್ಳಿಹಾಕಿದ ವರ್ಮಾ, ನಾನು ಹುಡುಗಿಯರನ್ನು ಮೆಚ್ಚಿಸಲು ಮಾತ್ರ ಮಾತನಾಡಬಲ್ಲೆ. ನಾನು ನನ್ನ ದೇಹವನ್ನು ಸದೃಢವಾಗಿರಲು ವರ್ಕೌಟ್ ಮಾಡುತ್ತಿದ್ದೇನೆ ಎಂದರು. (ಏಜೆನ್ಸೀಸ್)