More

    ಸಂಭಾವನೆ ಕಡಿಮೆ ಮಾಡಿಕೊಂಡ ಶಾಹೀದ್​ … ಹೊಸ ಸಂಭಾವನೆ ಎಷ್ಟು?

    ಮುಂಬೈ: ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ ಚಿತ್ರರಂಗಕ್ಕೆ ಸಾಕಷ್ಟು ಸಮಸ್ಯೆ ಆಗಿದೆ ಮತ್ತು ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರೆಲ್ಲರೂ ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬ ಕೂಗು, ಇಡೀ ಭಾರತೀಯ ಚಿತ್ರರಂಗದಲ್ಲೇ ಕೇಳಿ ಬರುತ್ತಿದೆ. ಅದಕ್ಕೆ ಸರಿಯಾಗಿ, ಈಗಾಗಲೇ ತಮಿಳಿನಲ್ಲಿ ವಿಜಯ್​, ಮುರುಗದಾಸ್​ ಸೇರಿದಂತೆ ಹಲವರು ತಮ್ಮ ಸಂಭಾವನೆಯನ್ನು ಕಡಿತಗೊಳಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಆರೂವರೆ ತಿಂಗಳ ನಂತರ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾದ ಸಲ್ಮಾನ್​

    ಈಗ ಬಾಲಿವುಡ್​ ನಟ ಶಾಹೀದ್​ ಕಪೂರ್​ ಸಹ ತಮ್ಮ ಸಂಭಾವನೆಯನ್ನು ಕಡಿತಗೊಳಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಶಾಹೀದ್​, ಸದ್ಯ ತೆಲುಗಿನ ‘ಜರ್ಸಿ’ ಚಿತ್ರದ ಹಿಂದಿ ರೀಮೇಕ್​ನಲ್ಲಿ ನಟಿಸುತ್ತಿದ್ದಾರೆ. ನಿರ್ಮಾಪಕರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ, ಅವರು ತಮ್ಮ ಸಂಭಾವನೆಯನ್ನು 25 ಕೋಟಿ ರೂಪಾಯಿಗಳಿಗೆ ಇಳಿಸಿಕೊಂಡಿದ್ದಾರೆ.

    ಅಂದಹಾಗೆ, ಶಾಹೀದ್​ ಈ ಚಿತ್ರಕ್ಕೆ ಮೊದಲು ಪಡೆಯಬೇಕಿದ್ದ ಸಂಭಾವನೆ ಎಷ್ಟು ಗೊತ್ತಾ? ಕೇಳಿದರೆ ಬೆಚ್ಚಿಬೀಳುತ್ತೀರಿ. ‘ಕಬೀರ್​ ಸಿಂಗ್​’ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಶಾಹೀದ್​, ‘ಜೆರ್ಸಿ’ಯ ಹಿಂದಿ ರೀಮೇಕ್​ ಒಪ್ಪುವುದಕ್ಕೆ ಎರಡು ಷರತ್ತುಗಳನ್ನು ಒಡ್ಡಿದ್ದರಂತೆ. 33 ಕೋಟಿ ಸಂಭಾವನೆ ಕೊಡಬೇಕು ಮತ್ತು ಲಾಭದಲ್ಲಿ ಒಂದಂಶವನ್ನು ಕೊಡಬೇಕು ಎಂದು ಹೇಳಿಯೇ ಚಿತ್ರವನ್ನು ಒಪ್ಪಿಕೊಂಡಿದ್ದರಂತೆ.

    ಆದರೆ, ಇದೀಗ ಲಾಕ್​ಡೌನ್​ ನಂತರ ಚಿತ್ರದ ನಿರ್ಮಾಣದಲ್ಲಿ ಸಾಕಷ್ಟು ಏರುಪೇರುಗಳಾಗಿರುವ ದೃಷ್ಟಿಯಿಂದ ಶಾಹೀದ್​ ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಂಡಿದ್ದು, ಇದೀಗ ಅವರು ಚಿತ್ರದಲ್ಲಿ ಅಭಿನಯಿಸುವುದಕ್ಕೆ 25 ಕೋಟಿ ಪಡೆಯುತ್ತಿದ್ದಾರೆ ಎಂದು ಹೇಲಾಗುತ್ತಿದೆ.

    ಇದನ್ನೂ ಓದಿ: ನಿವೃತ್ತ ಆರ್ವಿು ಆಫೀಸರ್ ಅವತಾರದಲ್ಲಿ ರಾಘಣ್ಣ ಆಗಮನ

    ಈ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಡೆಹರಾಡೂನ್​ ಮತ್ತು ಚಂಡೀಘಡದಲ್ಲಿ ಮುಂದುವರೆಯಲಿದೆ. ಶಾಹೀದ್​ಗೆ ನಾಯಕಿಯಾಗಿ ಮೃಣಾಲ್​ ಠಾಕೂರ್​ ನಟಿಸುತ್ತಿದ್ದಾರೆ.

    ರಿಲೀಸ್​ ಆಯ್ತು ಅಕ್ಷಯ್​ ಕುಮಾರ್ ‘ಬೆಲ್​ಬಾಟಂ’ ಚಿತ್ರದ ಟೀಸರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts