

ಮುಂಬೈ: ಅಕ್ಷಯ್ ಕುಮಾರ್ ಅವರ ಬೆಲ್ಬಾಟಂ ಸಿನಿಮಾ ಶೂಟಿಂಗ್ ಮುಗಿದಿದೆ. ಇತ್ತೀಚೆಗಷ್ಟೇ ಬಿಡುಗಡೆಗೂ ದಿನಾಂಕ ನಿಗದಿಯಾಗಿದೆ. ಇದೀಗ ಸದ್ದಿಲ್ಲದೆ ಚಿತ್ರದ ಕಿರು ಟೀಸರ್ ಸಹ ಬಿಡುಗಡೆಯಾಗಿದೆ. ಹೌದು, 2021ರ ಏಪ್ರಿಲ್ 02ರಂದು ಬೆಲ್ಬಾಟಂ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತೀರ್ಮಾನಿಸಿದ್ದು, ಅಕ್ಷಯ್ ಕುಮಾರ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ಘೋಷಿಸಿದ್ದರು.
ಇದನ್ನೂ ಓದಿ: ನಿವೃತ್ತ ಆರ್ವಿು ಆಫೀಸರ್ ಅವತಾರದಲ್ಲಿ ರಾಘಣ್ಣ ಆಗಮನ
ಇದೀಗ ಅಭಿಮಾನಿಗಳಿಗೆ ಅಚ್ಚರಿ ರೀತಿಯಲ್ಲಿ ಟೀಸರ್ ಮೂಲಕ ಉಡುಗೊರೆ ನೀಡಿದ್ದಾರೆ. ಕಿರು ಟೀಸರ್ನಲ್ಲಿ ಅಕ್ಷಯ್ ಅವರ ಹಲವು ಅವತಾರಗಳನ್ನು ತೋರಿಸಲಾಗಿದೆ. ಅಂದಹಾಗೆ, 50 ದಿನಗಳ ಅವಧಿಯಲ್ಲಿ ಸ್ಕಾಟ್ಲೆಂಡ್ನಲ್ಲಿ ಈ ಚಿತ್ರದ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡ, ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.
‘ಬೆಲ್ ಬಾಟಮ್’ ಚಿತ್ರವನ್ನು ರಂಜಿತ್ ತಿವಾರಿ ನಿರ್ದೇಶಿಸಿದ್ದು, ಪೂಜಾ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ವಾಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಚಿತ್ರವನ್ನು ನಿರ್ಮಿಸಿದ್ದಾರೆ. ಇದೊಂದು ರೆಟ್ರೋ ಥ್ರಿಲ್ಲರ್ ಶೈಲಿಯ ಸಿನಿಮಾ ಆಗಿದ್ದು ಅಕ್ಷಯ್ ಕುಮಾರ್ ಜತೆಗೆ ವಾಣಿ ಕಪೂರ್, ಲಾರಾ ದತ್ತ, ಹುಮಾ ಖುರೇಷಿ ಸೇರಿ ಹಲವರು ನಟಿಸಿದ್ದಾರೆ. (ಏಜೆನ್ಸೀಸ್)