More

    ಆರೂವರೆ ತಿಂಗಳ ನಂತರ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾದ ಸಲ್ಮಾನ್​

    ಮುಂಬೈ: ಸಲ್ಮಾನ್​ ಖಾನ್​ ಲಾಕ್​ಡೌನ್​ನಲ್ಲಿ ಏನೆಲ್ಲಾ ಮಾಡಿದ್ರು ಎಂದು ಎಲ್ಲರಿಗೂ ಗೊತ್ತೇ ಇದೆ. ಪನ್ವೇಲ್​ನ ತಮ್ಮ ಫಾರ್ಮ್​ ಹೌಸ್​ನಲ್ಲಿ ಗೆಳತಿಯರ ಜತೆಗೆ ಲಾಕ್​ಡೌನ್​ ಸಮಯವನ್ನು ಕಳೆಯುವುದರ ಜತೆಗೆ, ವಿಡಿಯೋ ಆಲ್ಬಮ್​ ಕೂಡಾ ಅವರು ಮಾಡಿದ್ದರು. ಈಗ ಲಾಕ್​ಡೌನ್​ ತೆರವಾಗಿ, ಚಿತ್ರೀಕರಣ ಶುರುವಾಗುತ್ತಿದ್ದಂತೆಯೇ, ಸಲ್ಮಾನ್​ ಖಾನ್​ ಸಹ ತಮ್ಮ ‘ರಾಧೆ’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

    ಇದನ್ನೂ ಓದಿ: ನಿವೃತ್ತ ಆರ್ವಿು ಆಫೀಸರ್ ಅವತಾರದಲ್ಲಿ ರಾಘಣ್ಣ ಆಗಮನ

    ಲಾಕ್​ಡೌನ್​ ಶುರುವಾಗುವ ಮುನ್ನ ಸಲ್ಮಾನ್​ ಖಾನ್​, ‘ರಾಧೆ’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸದ್ದರು. ಒಂದು ಹಾಡು ಮತ್ತು ಪ್ಯಾಚ್​ವರ್ಕ್​ ಶುರು ಮುಗಿಸಿದ್ದರೆ, ಚಿತ್ರೀಕರಣ ಸಹ ಮುಗಿದು ಹೋಗಿರುತಿತ್ತು. ಅಷ್ಟೇ ಅಲ್ಲ, ಈದ್​ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್​ಡೌನ್​ ಇದ್ದುದರಿಂದ ಎಲ್ಲವೂ ತಡವಾಯಿತು.

    ಇದೀಗ ಆರೂವರೆ ತಿಂಗಳ ನಂತರ ಸಲ್ಮಾನ್​ ಖಾನ್​ ಮತ್ತೆ ‘ರಾಧೆ’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಇದೀಗ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, ಈ ಹಾಡಿನ ಚಿತ್ರೀಕರಣದಲ್ಲಿ ಸಲ್ಮಾನ್​ ಭಾಗವಹಿಸಿರುವ ಒಂದು ಫೋಟೋವನ್ನು ಅವರು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆರೂವರೆ ತಿಂಗಳುಗಳ ನಂತರ ಚಿತ್ರೀಕರಣದಲ್ಲಿ ಭಾಗವಹಿಸುತ್ತಿರುವುದು ಬಹಳ ಖುಷಿ ತಂದಿದೆ ಎಂದು ಸಹ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: 14 ದಿನದಲ್ಲಿ 10 ಸಾವಿರ ಟಿಕೆಟ್​ ಮಾರಾಟ!; ಇದು ಭ್ರಮೆ ತಂಡದ ಸಾಹಸ

    ‘ರಾಧೆ’ ಚಿತ್ರದ ಚಿತ್ರೀಕರಣ ಕಳೆದ ನವೆಂಬರ್​ನಲ್ಲಿ ಪ್ರಾರಂಭವಾಗಿತ್ತು. ಈ ಚಿತ್ರದಲ್ಲಿ ಸಲ್ಮಾನ್​ಗೆ ನಾಯಕಿಯಾಗಿ ದಿಶಾ ಪಠಾಣಿ ಅಭಿನಯಿಸುತ್ತಿದ್ದು, ಮಿಕ್ಕಂತೆ ಜಾಕಿ ಶ್ರಾಫ್​, ರಣದೀಪ್​ ಹೂಡಾ ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ಅತುಲ್​ ಅಗ್ನಿಹೋತ್ರಿ ಮತ್ತು ಸೋಹೈಲ್​ ಖಾನ್​ ಜಂಟಿಯಾಗಿ ನಿರ್ಮಿಸುತ್ತಿದ್ದು, ಪ್ರಭುದೇವ ನಿರ್ದೇಶನ ಮಾಡುತ್ತಿದ್ದಾರೆ.

    ಯೋಗರಾಜ್​ ಭಟ್​ ನಿರ್ಮಾಣದ ‘ಪದವಿ ಪೂರ್ವ’ ಚಿತ್ರದ ನಾಯಕಿ ಇವರೇ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts