ಮುಂಬೈ: ಬಾಲಿವುಡ್ನ ಸೂಪರ್ಸ್ಟಾರ್ಗಳಾದ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ನಟನೆಯ ಚಿತ್ರ ಬಿಡುಗಡೆಯಾದರೆ ಅವರ ಫ್ಯಾನ್ಸ್ಗೆ ಹಬ್ಬವಿದ್ದಂತೆ. ಬಿಡುಗಡೆ ದಿನವೇ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸುವ ಇವರ ಚಿತ್ರಗಳ ಗೆಲುವಿನ ಹಿಂದೆ ಸಾಮಾನ್ಯತೆ ಇರಬೇಕು ಎಂದು ಬಹತೇಕರು ಭಾವಿಸಿದ್ದಾರೆ. ಆದರೆ, ಇವರ ಕೆಲಸ ಮಾಡುವ ರೀತಿ ಭಿನ್ನವಾಗಿದ್ದು, ಈ ಬಗ್ಗೆ ಖ್ಯಾತ ನಟರೊಬ್ಬರು ಮಾತನಾಡಿದ್ದು, ಶಾರುಖ್ ಹಾಗೂ ಸಲ್ಮಾನ್ ನಡುವೆ ಇರುವ ವ್ಯತ್ಯಾಸವನ್ನು ಹಂಚಿಕೊಂಡಿದ್ದಾರೆ.
ಶಾರುಖ್, ಸಲ್ಮಾನ್ ಸೇರಿದಂತೆ ಬಾಲಿವುಡ್ನ ಅನೇಕ ಸ್ಟಾರ್ ನಟರೊಂದಿಗೆ ನಟಿಸಿ ಖ್ಯಾತಿ ಪಡೆದಿರುವ ಹಿರಿಯ ನಟ ಗೋವಿಂದ್ ನಾಮ್ದೇವ್ ಈ ಇಬ್ಬರು ನಟರ ಕುರಿತು ಹಲವು ವಿಚಾರವನ್ನು ಹಂಚಿಕೊಂಡಿದ್ದು, ಇಬ್ಬರ ನಡುವಿನ ವ್ಯತ್ಯಾಸಗಳನ್ನು ವಿವರಿಸಿದ್ದಾರೆ.
ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಗೋವಿಂದ್, ನಾನು ನೋಡಿದಂತೆ ಸಲ್ಮಾನ್ ಖಾನ್ ಸಿನಿಮಾ ಸೆಟ್ಗಳಲ್ಲಿ ಸಿಬ್ಬಂದಿ ಹಾಗೂ ಸಹ ನಟರೊಂದಿಗೆ ಹೆಚಚು ಮಾತನಾಡುವುದಿಲ್ಲ. ಸೀನ್ ಮುಗಿಯುತ್ತಿದ್ದಂತೆ ತಮ್ಮ ಕ್ಯಾರಾವಾನ್ಗೆ ಹೋಗಿ ಕುಳಿತು ಬಿಡುತ್ತಾರೆ. ಆದರೆ, ಕೆಲವೊಮ್ಮೆ ತಮ್ಮ ಸಲೀಂ ಖಾನ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಳ್ಳುತ್ತಿದ್ದರು.
ಇದನ್ನೂ ಓದಿ: ಬಾಂಗ್ಲಾದಿಂದ 1 ಕೋಟಿ ಹಿಂದೂ ನಿರಾಶ್ರಿತರು ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆ: ಸುವೇಂದು ಅಧಿಕಾರಿ
ಆದರೆ ನಾನು ನೋಡಿದಂತೆ ಶಾರುಖ್ ಹಾಗಲ್ಲ. ಅವರು ಸಿನಿಮಾ ಸೆಟ್ನಲ್ಲಿರುವ ಪ್ರತಿಯೊಬ್ಬರನ್ನು ಮಾತನಾಡಿಸುತ್ತಾರೆ ಮತ್ತು ಅವರೊಂದಿಗೆ ಬರೆಯುತ್ತಾರೆ. ನಾನು ಕೆಲಸ ನಾನು ಕೆಲಸ ಮಾಡುವವರ ಬಗ್ಗೆ ಸಾಕಷ್ಟು ಕೇಳಿದ್ದೇನೆ, ಆದರೆ ಶಾರುಖ್ ಅವರಲ್ಲಿ ಆ ಗುಣವನ್ನು ನೋಡಿದೆ. ಅವರು ಎಲ್ಲರಂತೆ ನಮ್ಮ ಜೊತೆ ಕುಳಿತುಕೊಂಡು ಊಟ ಮಾಡುತ್ತಿದ್ದರು. ರಾತ್ರಿ 2 ಗಂಟೆವರೆಗೂ ಕೆಲಸ ಮಾಡುತ್ತಿದ್ದರು. ರಾತ್ರಿ ಬರಿ ಮೂರುವರೆ ತಾಸು ಮಲಗಿ ಚೆನ್ನೈನಲ್ಲಿ ಕಾರ್ಯಕ್ರಮ ಒಂದನ್ನು ಅಟೆಂಡ್ ಮಾಡಿ ಶೂಟಿಂಗ್ನಲ್ಲಿ ನಮ್ಮೊಂದಿಗೆ ಭಾಗಿಯಾಗಿದ್ದರು. ಆಗ ನನಗೆ ಶಾರುಖ್ ಎಂತಹ ಕೆಲಸಗಾರ ಎಂಬುದು ತಿಳಿಯಿತು.
ಶಾರುಖ್ ಧೂಮಪಾನ ಮಾಡಲು ಶುರು ಮಾಡಿದರೆ ಚಿಮ್ನಿಯಲ್ಲಿ ಹೊಗೆ ಹೋದಂತೆ ಧಮ್ ಹೊಡೆಯುತ್ತಾನೆ. ಆತ ಮುಂದೆ ಏನು ಮಾಡಬೇಕೆಂದು ಸದಾ ಯೋಚಿಸುತ್ತಾನೆ. ನಾನು ನೋಡಿದಂತೆ ಸೂಪರ್‌ಸ್ಟಾರ್‌ಗಳು ಸಾಮಾನ್ಯವಾಗಿ ಈ ಮನೋಭಾವವನ್ನು ಹೊಂದಿರುತ್ತಾರೆ. ಆದರೆ, ಶಾರುಖ್ ನಾನು ನೋಡಿದಕ್ಕಿಂತ ಭಿನ್ನ ವ್ಯಕ್ತಿ ಎಂದು ಬಾಲಿವುಡ್ನ ಹಿರಿಯ ನಟ ಗೋವಿಂದ್ ನಾಮ್ದೇವ್ ಹೇಳಿದ್ದಾರೆ.