ಕಲ್ಕತ್ತಾ: ಉದ್ಯೋಗ ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಉಗ್ರರೂಪ ತಾಳಿದ್ದು, 300ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ನೆರೆಯ ಬಾಂಗ್ಲಾದೆಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಹಲವೆಡೆ ಹಿಂದೂಗಳ ಹತ್ಯೆಯಾಗಿದ್ದು, ದೇವಸ್ಥಾನಗಳನ್ನು ಧ್ವಂಸ ಮಾಡಿ ವಿಕೃತಿ ಮೆರೆದಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಒಂದು ಕೋಟಿಗೂ ಅಧಿಕ ಹಿಂದೂಗಳು ಪಶ್ಚಿಮ ಬಂಗಾಳಕ್ಕೆ ಬರುವ ನಿರೀಕ್ಷೆ ಇದೆ ಎಂದು ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಹೇಳಿದ್ದಾರೆ.
ಪಶ್ವಿಮ ಬಂಗಾಳದ ವಿಧಾನಸಭೆಯ ಮುಂಗಾರು ಅಧಿವೇಶನದ ವೇಳೆ ಮಾಧ್ಯಮರವರೊಂದಿಗೆ ಮಾತನಾಡಿದ ಅಧಿಕಾರಿ, ನೆರೆಯ ಬಾಂಗ್ಲಾದೆಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಹಲವೆಡೆ ಹಿಂದೂಗಳ ಹತ್ಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ 1 ಕೋಟಿಗೂ ಅಧಿಕ ನಿರಾಶ್ರಿತರು ಪಶ್ಚಿಮ ಬಂಗಾಳಕ್ಕೆ ಶೀಘ್ರ ಪ್ರವೇಶಿಸುವ ಸಾಧ್ಯತೆ ಇದೆ. ಹೀಗಾಗಿ ಅವರನ್ನು ಬರ ಮಾಡಿಕೊಳ್ಳಲು ಸರ್ಕಾರ ಹಾಗೂ ಜನರು ಸಿದ್ದರಿರಬೇಕು ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ: ಹಣೆಯ ಮೇಲೆ ಡಿ ಬಾಸ್ ಎಂದು ಟ್ಯಾಟೂ ಹಾಕಿಸಿಕೊಂಡ ದರ್ಶನ್ ಅಭಿಮಾನಿ; ಅತಿರೇಕದ ವಿಡಿಯೋ ವೈರಲ್
ನಿರಾಶ್ರಿರಾಗಿ ಬರುವ ಬಾಂಗ್ಲಾದ ಹಿಂದೂಗಳಿಗೆ ಸರ್ಕಾರ ಸಿಎಎ ಅಡಿ ಭಾರತದ ಪೌರತ್ವ ನೀಡಬೇಕು. ಈ ಸಂಬಂಧ ನಾನು ರಾಜ್ಯಪಾಲರಾದ ಆನಂದ್ ಬೋಸ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ವಿನಂತಿಸುತ್ತೇನೆ. ಧಾರ್ಮಿಕ ಹಿಂಸೆಗೆ ಗುರಿಯಾದವರಿಗೆ ನಾವು ರಕ್ಷಣೆ ನೀಡಬೇಕಾಗಿದೆ.
ಬಾಂಗ್ಲಾದದೇಶದಲ್ಲಿ ಹಿಂದೂಗಳ ಹತ್ಯೆ ಮಾಡಲಾಗುತ್ತಿದೆ. ಕೆಲ ದಿನಗಳಲ್ಲಿ ಅಲ್ಲಿನ ಪರಿಸ್ಥಿತಿ ತಹಬದಿಗೆ ಬರದಿದ್ದರೆ, 1947 ಅಥವಾ 1971ರ ಲಿಬರೇಶನ್ ಯುದ್ಧದ ಸಂದರ್ಭದಲ್ಲಾದಂತೆ ಬಾಂಗ್ಲಾದಿಂದ ಬರಲಿರುವ 1 ಕೊಟಿಗೂ ಅಧಿಕ ನಿರಾಶ್ರಿತರನ್ನು ಸೇರಿಸಿಕೊಳ್ಳಲು ಪಶ್ಚಿಮ ಬಂಗಾಳ ಸಿದ್ಧವಾಗಬೇಕಿದೆ ಎಂದು ವಿಪಕ್ಷ ನಾಯಕ ಸುವೆಂದು ಅಧಿಕಾರಿ ಹೇಳಿದ್ದಾರೆ.