ರಿಪೋರ್ಟ್​ ನೋಡದೆ ಕಿಡ್ನಿ ಆಪರೇಷನ್​ ಮಾಡಿದ ವೈದ್ಯರು; ಆಮೇಲೆ ನಡೆದಿದ್ದು ಮಾತ್ರ…!

Operation

ರೇವಾರಿ: ವೈದ್ಯಕೀಯ ನಿರ್ಲಕ್ಷ್ಯದ ಘಟನೆಯೊಂದರಲ್ಲಿ ಮಹಿಳೆಯೊಬ್ಬರಿಗೆ ವೈದ್ಯರು ಬಲ ಕಿಡ್ನಿಯ ಬದಲು ಎಡಭಾಗದ ಮೂತ್ರಪಿಂಡಕ್ಕೆ ಶಸ್ತ್ರಚಿಕಿತ್ಸೆ ಮಾಡಿರುವ ಘಟನೆ ಹರಿಯಾಣದ ರೇವಾರಿಯಲ್ಲಿ ನಡೆದಿದೆ. ಘಟನೆಯೂ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವೈದ್ಯರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಗುರುಗ್ರಾಮದ ರಥಾವಾಸ್ ಗ್ರಾಮದ ಅಜಯ್ ಕುಮಾರ್ ರತಿ ಅವರ ಪತ್ನಿ ಗುಡ್ಡಿ ಬಾಯಿಗೆ ಫೆಬ್ರವರಿ 13, 2024ರಂದು ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಟ್ಟೆನೋವು ಕಡಿಮೆಯಾಗದಿದ್ದಾಗ ಅವರನ್ನುಬೇರೊಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಸ್ಕ್ಯಾನಿಂಗ್​ ಮಾಡಿ ಪರಿಶೀಲಿಸಿದಾಗ ಬಲಭಾಗದಲ್ಲಿ ಕಿಡ್ನಿ ಸ್ಟೋನ್ಸ್​ ಆಗಿರುವುದು ಕಂಡು ಬಂದಿದೆ.

ಇದನ್ನೂ ಓದಿ: ಸರ್ಕಾರ ತನ್ನ ಕೆಲಸ ಮಾಡಿದೆ, ಇಷ್ಟಾದರೂ… ಒಲಿಂಪಿಕ್ಸ್​ನಲ್ಲಿ ಭಾರತದ ನೀರಸ ಪ್ರದರ್ಶನಕ್ಕೆ ಪ್ರಕಾಶ್ ಪಡುಕೋಣೆ ಕಿಡಿ

ತಕ್ಷಣವೇ ಆಪರೇಷನ್​ ಮಾಡಬೇಕೆಂದು ವೈದ್ಯರು ಸೂಚಿಸಿದ ಪರಿಣಾಮ ಗುಡ್ಡಿ ಬಾಯಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಸ್ತ್ರಚಿಕಿತ್ಸೆಯಾದ ಎರಡು ದಿನಗಳ ಬಳಿಕ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದ್ದು, ಡಿಸ್ಚಾರ್ಜ್​ ಸಮರಿಯಲ್ಲಿ ಎಡಭಾಗದ ಕಿಡ್ನಿಗೆ ಆಪರೇಷನ್​ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ. ಬಳಿಕ ಈ ಬಗ್ಗೆ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ರಿಪೋರ್ಟ್​ ಬರೆಯುವಾಗ ತಪ್ಪಾಗಿದೆ ಎಂದು ಹೇಳಿದ ವೈದ್ಯರು ಆ ಬಳಿಕ ತಪ್ಪೊಪ್ಪಿಕೊಂಡಿದ್ದಾರೆ.

ಇದಾದ ಬಳಿಕ ಮತ್ತೊಮ್ಮೆ ಸ್ಕ್ಯಾನ್​ ಮಾಡಿದ ವೈದ್ಯರು ಫ್ರೀಯಾಗಿ ಆಪರೇಷನ್​ ಮಾಡುವುದಾಗಿ ಆಮಿಷ ಒಡ್ಡಿದ್ದಾರೆ. ಇವರು ಮಾಡಿ ಎಡವಟ್ಟಿನಿಂದಾಗಿ ತಮ್ಮ ಪತ್ನಿ ಪ್ರಾಣಕ್ಕೆ ಕುತ್ತಾಗಿದ್ದು, ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಜಯ್​ ಪೊಲೀಸ್​, ವೈದ್ಯಕೀಯ ಮಹಾವಿಶ್ವವಿದ್ಯಾಲಯಕ್ಕೆ ದೂರು ನೀಡಿದ್ದಾರೆ. ತನಿಖೆ ವೇಳೆ ವೈದ್ಯರ ನಿರ್ಲಕ್ಷ್ಯ ಸ್ಪಷ್ಟವಾಗಿ ಕಂಡು ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…