ಇನ್ಮುಂದೆ ಧೂಮಪಾನ ಮಾಡುವುದಿಲ್ಲ; ಬರ್ತ್​ಡೇ ಸೆಲೆಬ್ರೇಷನ್​ನಲ್ಲಿ Shah Rukh Khan ಫ್ಯಾನ್ಸ್​​ಗೆ ಹೇಳಿದಿಷ್ಟು..

blank

ಮುಂಬೈ: ಬಾಲಿವುಡ್‌ ಬಾದ್‌ಷಾ ಶಾರೂಖ್​ ಖಾನ್(Shah Rukh Khan)​​ ಶನಿವಾರ(ನವೆಂಬರ್​​ 2) ತಮ್ಮ 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಬಾಂದ್ರಾದಲ್ಲಿ ತಮ್ಮ ಅಭಿಮಾನಿಗಳು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇನ್ನು ಮುಂದೆ ಧೂಮಪಾನ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ತಾವು 30 ವರ್ಷಗಳಿಂದ ಹೆಚ್ಚು ಧೂಮಪಾನ ಮಾಡುತ್ತಿದ್ದು ಈ ವಿಷಯದಲ್ಲಿ ತನ್ನನ್ನು ತಾನು ಮಾದರಿ ಎಂದು ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ನಾನು ತೆಲುಗಿನವರಿಗೆ ಅವಮಾನ ಮಾಡಿದ್ದೇನೆ ಎಂಬ ಪ್ರಚಾರ ಸುಳ್ಳಲ್ಲ; ನಟಿ ಕಸ್ತೂರಿ ಹೀಗೆಳಿದ್ದೇಕೆ? | Actress Kasturi

30 ವರ್ಷಗಳ ಕಾಲ ಧೂಮಪಾನ ಮಾಡಿದ ನಂತರ ಧೂಮಪಾನವನ್ನು ತ್ಯಜಿಸುವುದನ್ನು ಸಮರ್ಥಿಸುವುದು ಸರಿಯಲ್ಲ. 30 ವರ್ಷಗಳ ಕಾಲ ಧೂಮಪಾನ ಮಾಡಿದ ನಂತರ ನಾನು ಧೂಮಪಾನ ಮಾಡಬೇಡಿ ಎಂದು ಸಲಹೆ ನೀಡುತ್ತಿರುವುದು ಕೆಟ್ಟ ವಿಷಯ. ಧೂಮಪಾನ ಮಾಡುವುದು ಒಳ್ಳೆಯದಲ್ಲ ಎಂದು ನಮಗೆ ತಿಳಿದಿದೆ. ನಾವು ಅದನ್ನು ತ್ಯಜಿಸಿದರೆ ಬಹಳ ಒಳ್ಳೆಯದು ಎಂದು ಹೇಳಿದರು.

ಧೂಮಪಾನವನ್ನು ತ್ಯಜಿಸಿದ ನಂತರ ನನಗೆ ಈ ಉಸಿರಾಟದ ಸಮಸ್ಯೆ ಬರುವುದಿಲ್ಲ ಎಂದು ನಾನು ಭಾವಿಸಿದೆ ಆದರೆ ನಾನು ಅದನ್ನು ಅನುಭವಿಸುತ್ತಿದ್ದೇನೆ. ಇನ್ಶಾ ಅಲ್ಲಾ, ಅವನೂ ಚೆನ್ನಾಗಿದ್ದೇನೆ ಎಂದು ತಿಳಿಸಿದರು.

ದಿನಕ್ಕೆ 100 ಸಿಗರೇಟ್ ಸೇದುತ್ತೇನೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಶಾರೂಖ್​ ಹೇಳಿದ್ದರು. ಆ ಹೇಳಿಕೆಗೆ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಇದೇ ಸಮಯದಲ್ಲಿ ತನ್ನನ್ನು ಅನುಸರಿಸುವ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ. ಜಬ್ ಜಬ್ ಜಿಂದಗಿ ಮೇ ಜೈಸಾ ಅಚ್ಚಾ ಲಗೇ ವೋ ಕರೋ… ಮೈನ್ ಕೋಯಿ ಐಸಾ ರೋಲ್ ಮಾಡೆಲ್ ನಹೀ ಹೂಂ… (ನಿಮಗೆ ಸರಿ ಎನಿಸುವದನ್ನು ಮಾಡಿ. ನಾನು ರೋಲ್ ಮಾಡೆಲ್ ಅಲ್ಲ) ಎಂದಿದ್ದಾರೆ.

ಸೊಸೆ ಐಶ್ವರ್ಯಾ ರೈ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಬಿಗ್​ಬಿ; ಅಮಿತಾಭ್​​​ ಓಲ್ಡ್​ Post Viral

Share This Article

ಬಹಳ ಇಷ್ಟಪಟ್ಟು ಪನೀರ್​ ಸೇವಿಸುತ್ತಿದ್ದೀರಾ; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇದು.. | Health Tips

ನಾನ್​ವೆಜ್​​​​​​ ಇಷ್ಟಪಡದವರು ಪ್ರೋಟೀನ್​ಗಾಗಿ ಪನೀರ್​​​​ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಪ್ರೋಟೀನ್‌ಗೆ ಉತ್ತಮವಾದ…

ಅಂಗಾಲಿನಲ್ಲಿ ಪದೇ ಪದೆ ನೋವು ಕಾಣಿಸಿಕೊಳ್ಳುತ್ತಿದೆಯೇ; ಅಪಾಯ ತಪ್ಪಿದ್ದಲ್ಲ ಎಚ್ಚರದಿಂದಿರಿ | Health Tips

ಅನೇಕ ಜನರು ಪಾದದ ಕೆಳಭಾಗದಲ್ಲಿ ಅಂದರೆ ಅಂಗಾಲಿನಲ್ಲಿ ನೋವನ್ನು ಅನುಭವಿಸುತ್ತಿರುತ್ತಾರೆ. ಈ ನೋವು ಸಾಮಾನ್ಯ ನೋವಿನಂತೆ…

Spirituality: ಇರುವೆಗಳಿಗೆ ಆಹಾರ ನೀಡಿದರೆ ಶನಿದೇವನ ಪ್ರಭಾವ ಇರುವುದಿಲ್ಲವೇ?

Spirituality: ನಮ್ಮಲ್ಲಿರುವ ವಸ್ತು ಅಥವಾ ಯಾವುದೇ ಪದಾರ್ಥವನ್ನು ಇಲ್ಲದವರಿಗೆ ದಾನ ಮಾಡಿದರೆ ದೇವರ ಅನುಗ್ರಹ ಸದಾ…