ಚೆನ್ನೈ: ತಮಿಳುನಾಡಿನ ಕಾರ್ಯಕ್ರಮವೊಂದರಲ್ಲಿ ನಟಿ ಕಸ್ತೂರಿ ಅವರು ನೀಡಿರುವ ಹೇಳಿಕೆ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ. ತಮಿಳುನಾಡಿನ ಕಾರ್ಯಕ್ರಮವೊಂದರಲ್ಲಿ ನಟಿ ಕಸ್ತೂರಿ(Actress Kasturi) ಅವರು ಹೇಳಿಕೆ ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು ಎಂಬ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅವರು ಮಾಡಿದ ಕಾಮೆಂಟ್‌ಗಳಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದಂತೆ, ನಟಿ ಕಸ್ತೂರಿ ತಮ್ಮ ಹೇಳಿಕೆಗೆ ಸೋಮವಾರ (ನವೆಂಬರ್ 4) ಸ್ಪಷ್ಟನೆ ನೀಡಿದ್ದಾರೆ.
ಇದನ್ನು ಓದಿ: ನಟ ಮಿಥುನ್ ಚಕ್ರವರ್ತಿ ಅವರ ಮೊದಲ ಪತ್ನಿ ಹೆಲೆನಾ ಲ್ಯೂಕ್ ನಿಧನ | Helena Luke
ಸಾಮಾಜಿಕ ಜಾಲತಾಣದಲ್ಲಿ ಬ್ಯಾಕ್ ಟು ಬ್ಯಾಕ್ ಪೋಸ್ಟ್ ಮಾಡಿರುವ ನಟಿ ಕಸ್ತೂರಿ, ತೆಲುಗಿನವರಿಗೆ ಅವಮಾನ ಮಾಡಿದ್ದಾರೆ ಎಂಬ ಪ್ರಚಾರ ಸುಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಹೇಳಿಕೆಗಳನ್ನು ತಿರುಚಿ ಸುಳ್ಳು ವ್ಯಾಖ್ಯಾನಗಳನ್ನು ಸೃಷ್ಟಿಸಲು ಡಿಎಂಕೆ ಪಕ್ಷ ನಡೆಸಿದ ಷಡ್ಯಂತ್ರ ಇದಾಗಿದೆ ಎಂದು ಆರೋಪಿಸಿದ್ದಾರೆ. ನಿನ್ನೆಯ ಬಿಜೆಪಿ ಸಭೆಯಲ್ಲಿ ದ್ರಾವಿಡ ವಿಚಾರವಾದಿಗಳು ಮತ್ತು ಅವರ ಸಿದ್ಧಾಂತದ ಬಗ್ಗೆ ನಾನು ಮಾಡಿದ ಕಾಮೆಂಟ್‌ಗಳನ್ನು ತಮಿಳು ಮಾಧ್ಯಮಗಳಲ್ಲಿ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ನಾನು ತೆಲುಗು ಜನರನ್ನು ಮತ್ತು ತೆಲುಗು ಜನಾಂಗವನ್ನು ಅವಮಾನಿಸಿಲ್ಲ. ನನ್ನ ಬಗ್ಗೆ ಅಪಾರ ಪ್ರೀತಿ ತೋರಿಸುವ ತೆಲುಗು ಜನರು ಈ ಸುಳ್ಳು ಪ್ರಚಾರವನ್ನು ನಂಬಬಾರದು. ನಾನು ಮದುವೆಯಾಗಿರುವುದು ಮತ್ತು ನನ್ನ ಕುಟುಂಬದ ಸದಸ್ಯರು ತೆಲುಗಿನವರು. ಇದನ್ನು ತಿಳಿಯದ ಕೆಲ ಮೂರ್ಖರು ತೆಲುಗಿನವರನ್ನು ನಾನು ಅವಮಾನಿಸಿದ್ದೇನೆ ಎಂದು ಹೇಳಿದ್ದಾರೆ.
Yesterday I exposed the double standards of fraud dravidia migrant imposters who play divisive hate politics among tamils.
Today DMK ecosystem trying to bully me by running a smear campaign about my telugu loyalty. They are trending FAKE NEWS that i spoke against telugus.— Kasturi (@KasthuriShankar) November 4, 2024
ಈ ರೀತಿ ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದ್ದು, ಡಿಎಂಕೆ ನಾಯಕರು ಉದ್ದೇಶಪೂರ್ವಕವಾಗಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.(ಏಜೆನ್ಸೀಸ್)
ಸ್ಟಾರ್ ಹೀರೋಗಳಿಗೆ ನಟಿಯರನ್ನು ಆಯ್ಕೆ ಮಾಡುವವರು..; Bollywood ಕಹಿಸತ್ಯ ಬಿಚ್ಚಿಟ್ಟ ತಾಪ್ಸಿ ಪನ್ನು