ಮುಂಬೈ: ತೆಲುಗು ಸಿನಿಮಾ ಜುಮ್ಮಂದಿ ನಾದಂ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ನಟಿ ತಾಪ್ಸಿ ಪನ್ನು ಬಾಲಿವುಡ್ನಲ್ಲಿ ಬಿಜಿ ಇರುವುದು ಗೊತ್ತೆ ಇದೆ. ಅಮಿತಾಭ್ ಬಚ್ಚನ್ ಜತೆಗಿನ ಬಾದ್ಲಾದಿಂದ ಶಾರೂಖ್ ಖಾನ್ ಡಂಕಿ ಚಿತ್ರದವರೆಗೂ ತಮ್ಮ ಅಮೋಘ ನಟನೆಯ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ರಾಜ್‌ಕುಮಾರ್ ಹಿರಾನಿ ಅಭಿನಯದ ಡಂಕಿ ಸಿನಿಮಾ 2023ರಲ್ಲಿ ಬಿಡುಗಡೆಯಾಗಿತ್ತು. ಸಿನಿಮಾದಲ್ಲಿ ನಟಿ ತಾಪ್ಸಿ ಶಾರೂಖ್ ಖಾನ್ ಜತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸೂಪರ್ಸ್ಟಾರ್ ನಟರ ಜತೆಗೆ ತೆರೆ ಹಂಚಿಕೊಂಡಿರುವುದು ಹಾಗೂ ಸಿನಿಮಾದಲ್ಲಿ ಪಡೆದ ಸಂಭಾವನೆ ಕುರಿತು ನಟಿ ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ಇದನ್ನು ಓದಿ: ಆತನ ಭಯಕ್ಕೆ ಸಿನಿಮಾ ಸೆಟ್ನಿಂದ ಓಡಿಹೋಗಿದ್ದೆ; ನಿರ್ದೇಶಕ ಅನೀಸ್ ಬಾಜ್ಮಿ ಹೇಳಿದ ‘ಶೋಮ್ಯಾನ್’ ಇವರೇ.. | Anees Aazmee
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ತಾಪ್ಸಿ ಪನ್ನು ಸೂಪರ್ಸ್ಟಾರ್ಗಳ ಸಿನಿಮಾದಲ್ಲಿ ಕೆಲಸ ಮಾಡಿದರೆ ದೊಡ್ಡ ಸಂಭಾವನೆ ಪಡೆಯುತ್ತೇನೆ ಎಂಬ ತಪ್ಪು ಕಲ್ಪನೆ ಇದೆ. ತಮಾಷೆಯೆಂದರೆ ನಾನು ಹಣಕ್ಕಾಗಿ ‘ಜುಡ್ವಾ’ ಅಥವಾ ‘ಡಿಂಕಿ’ ಚಿತ್ರಗಳನ್ನು ಮಾಡುತ್ತೇನೆ ಎಂದು ಜನರು ಭಾವಿಸುತ್ತಾರೆ. ಆದರೆ ಅದು ನಿಜವಲ್ಲ, ಬದಲಿಗೆ ಇದಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
‘ಹಸೀನ್ ದಿಲ್ರುಬಾ’ ದಂತಹ ನಾನು ಮುಖ್ಯ ಭೂಮಿಕೆಯಲ್ಲಿರುವ ಆ ಚಿತ್ರಗಳಲ್ಲಿ ಕೆಲಸ ಮಾಡಿದ್ದಕ್ಕಾಗಿ ನಾನು ಹೆಚ್ಚು ಸಂಭಾವನೆ ಪಡೆಯುತ್ತೇನೆ. ಆದರೆ ಇತರ ಚಿತ್ರಗಳಲ್ಲಿ ಕೆಲಸ ಮಾಡಲು ನಾನು ಹೆಚ್ಚು ಸಂಭಾವನೆ ಪಡೆಯುವುದಿಲ್ಲ ಏಕೆಂದರೆ ಅವರು ಸಿನಿಮಾದಲ್ಲಿ ಅವಕಾಶ ನೀಡುವ ಮೂಲಕ ನನ್ನ ಲಾಭವನ್ನು ಪಡೆಯುತ್ತಿದ್ದಾರೆ ಹಾಗೂ ಉಪಕಾರ ಮಾಡುತ್ತಿದ್ದಾರೆ ಎಂದು ಭಾವಿಸುತ್ತಾರೆ. ಈಗಾಗಲೇ ಸಿನಿಮಾದಲ್ಲಿ ದೊಡ್ಡ ಹೀರೋ ಇದ್ದಾನೆ ಎಂದು ಅವರಿಗೆ ಅನ್ನಿಸುತ್ತದೆ. ಆದರೆ ಈ ರೀತಿಯ ಪರಿಸ್ಥಿತಿಯಲ್ಲಿ ಬೇರೆಯವರನ್ನು ತೆಗೆದುಕೊಳ್ಳುವ ಅವಶ್ಯಕತೆ ಏನಿದೆ. ಅಂತಹ ಕಲ್ಪನೆಗಳೊಂದಿಗೆ ನಾನು ಪ್ರತಿದಿನ ಹೋರಾಡುತ್ತೇನೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ಹಲವು ಚಿತ್ರಗಳಲ್ಲಿ ನಾಯಕಿ ಯಾರೆಂದು ನಾಯಕನೇ ನಿರ್ಧರಿಸುತ್ತಾನೆ ಎಂದೂ ನಟಿ ಹೇಳಿದ್ದಾರೆ. ತಮ್ಮ ಚಿತ್ರದಲ್ಲಿ ಯಾವ ನಟಿ ಇರಬೇಕು ಎಂಬುದನ್ನು ಹೆಚ್ಚಾಗಿ ನಾಯಕನೇ ನಿರ್ಧರಿಸುತ್ತಾನೆ ಎಂಬ ಕಹಿ ಸತ್ಯ ಈಗ ಪ್ರೇಕ್ಷಕರಿಗೂ ತಿಳಿದಿದೆ ಎಂದು ತಾಪ್ಸಿ ಪನ್ನು ಹೇಳಿದ್ದಾರೆ. ಆದರೆ ಅತ್ಯಂತ ಯಶಸ್ವಿ ನಿರ್ದೇಶಕರು ಇದ್ದಾಗ ನಾಯಕಿ ಯಾರೆಂದು ನಿರ್ದೇಶಕರು ನಿರ್ಧರಿಸುತ್ತಾರೆ. ಏಕೆಂದರೆ ಅವರದೇ ಆದ ಪ್ರೇಕ್ಷಕರು, ಯಾರು ಏನೇ ಹೇಳಿದರೂ ಅಂತಿಮ ನಿರ್ಧಾರವನ್ನು ನಿರ್ದೇಶಕರು ಪರಿಗಣಿಸುತ್ತಾರೆ ಎಂದು ತಿಳಿಸಿದರು. ತಾಪ್ಸಿ ಅವರು ಗಾಂಧಾರಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಲಿದೆ. ಆದರೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. (ಏಜೆನ್ಸೀಸ್)
‘Pushpa 2’ ನ್ಯೂಪೋಸ್ಟರ್ ರಿಲೀಸ್; ಸಿನಿಮಾ ಬಿಡುಗಡೆಗೆ ಆ ದಿನವೇ ಫಿಕ್ಸ್ ಎಂದ ಚಿತ್ರತಂಡ