ಹೈದರಾಬಾದ್: ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಸುಕುಮಾರ್ ನಿರ್ದೇಶನದ ಪುಷ್ಪ 2: ದಿ ರೂಲ್ ಸಿನಿಮಾಕ್ಕಾಗಿ ಅಭಿಮಾನಿಗಳ ಕಾತುರದಿಂದ ಕಾಯುತ್ತಿದ್ದಾರೆ. ಸಿನಿಮಾವನ್ನು ಈ ಮೊದಲು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಚಿತ್ರೀಕರಣ ಪೂರ್ಣವಾಗಿರದ ಕಾರಣ ಮುಂದೂಡಿದ್ದರು. ಇತ್ತೀಚೆಗೆ ಡಿಸೆಂಬರ್ 26ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಚಿತ್ರತಂಡ ಅಭಿಮಾನಿಗಳಿಗೆ ಸರ್ಪೈಸ್ ಗಿಫ್ಟ್ ಕೊಟ್ಟಿದೆ.
ಇದನ್ನು ಓದಿ: ಫೋಟೋ ಎಡಿಟ್ ಮಾಡಿದ ಅಭಿಮಾನಿಗೆ ‘ಸೀತಾಮಹಾಲಕ್ಷ್ಮಿ’ ಕ್ಲಾಸ್; ಬಳಿಕ ಬದಲಾದ Mrunal Thakur ಮಾತು..
ಈಗಾಗಲೇ ಅಧಿಕೃತವಾಗಿ ಚಿತ್ರದ ಪ್ರಚಾರ ಆರಂಭಿಸಿರುವ ಚಿತ್ರತಂಡ ಒಂದೊಂದೆ ಅಪ್ಡೇಟ್ ನೀಡುತ್ತಿದೆ. ಅಭಿಮಾನಿಗಳಿಗೆ ದೀಪಾವಳಿ ಗಿಫ್ಟ್ ನೀಡಿರುವ ಚಿತ್ರತಂಡ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ರೋಮ್ಯಾಂಟಿಕ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದೆ. ಈ ಪೋಸ್ಟರ್ ಚಿತ್ರದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪುಷ್ಪ ರಾಜ್ ಮತ್ತು ಶ್ರೀವಲ್ಲಿ ಅವರಿಂದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ವಿಶ್ ಮಾಡಿ ಹೊಸ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
Pushpa Raj & Srivalli wish you and your family a very Happy Diwali 🫶
GRAND RELEASE WORLDWIDE ON 5th DECEMBER, 2024 ❤🔥#Pushpa2TheRuleOnDec5th
Icon Star @alluarjun @iamRashmika @aryasukku #FahadhFaasil @ThisIsDSP @SukumarWritings @MythriOfficial @AAFilmsIndia… pic.twitter.com/fJ0pmQxk4j
— Rashmika Mandanna (@iamRashmika) October 31, 2024
ಈ ಸಿನಿಮಾದಲ್ಲಿ ಅಲ್ಲು ಅರ್ಜುನ್-ಪುಷ್ಪಾ ರಾಜ್, ರಶ್ಮಿಕಾ ಮಂದಣ್ಣ-ಶ್ರೀವಲ್ಲಿ ಮತ್ತು ಫಹದ್ ಫಾಸಿಲ್-ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದ್ಹಾಗೆ ಈ ಹಿಂದೆ ಡಿಸೆಂಬರ್ 26ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ಚಿತ್ರತಂಡ ಇದೀಗ ತನ್ನ ನಿರ್ಧಾರವನ್ನು ಬದಲಾಯಿಸಿದೆ. ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 25ರಂದು ಪುಷ್ಪ 2: ದಿ ರೂಲ್ ಸಿನಿಮಾ ಬಿಡುಗಡೆಯಾವುದೆಂದು ತಿಳಿಸಿದೆ. (ಏಜೆನ್ಸೀಸ್)