ಮುಂಬೈ: ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿರುತ್ತವೆ. ಇತ್ತೀಚಿನ ಘಟನೆಯೊಂದು ಈ ವದಂತಿಗೆ ಪೂರಕ ಎಂಬಂತಿದೆ. ನಟಿ ಐಶ್ವರ್ಯಾ ರೈ ನವೆಂಬರ್ 1 ರಂದು ಅವರು ತಮ್ಮ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಆದರೆಬಿಗ್ಬಿ ಅಮಿತಾಭ್ ಫ್ಯಾಮಿಲಿಯಿಂದ ಯಾವುದೇ ಶುಭಹಾರೈಕೆಗಳು ಬಂದಿಲ್ಲ. ಪ್ರತಿ ವರ್ಷ ಆಕೆಯ ಪತಿ ಅಭಿಷೇಕ್ ಬಚ್ಚನ್ ಐಶ್ವರ್ಯಾ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬರ್ತ್ಡೇ ವಿಶ್ ಮಾಡುತ್ತಿದ್ದರು. ಆದರೆ ಈ ಬಾರಿ ಅಭಿಷೇಕ್ ಮತ್ತು ಅಮಿತಾಭ್ ಬಚ್ಚನ್ ಶುಭ ಹಾರೈಸಿಲ್ಲ.(Post Viral )
ಇದನ್ನು ಓದಿ: ಸ್ಟಾರ್ ಹೀರೋಗಳಿಗೆ ನಟಿಯರನ್ನು ಆಯ್ಕೆ ಮಾಡುವವರು..; Bollywood ಕಹಿಸತ್ಯ ಬಿಚ್ಚಿಟ್ಟ ತಾಪ್ಸಿ ಪನ್ನು
ಆದರೆ ಐಶ್ವರ್ಯಾ ರೈ ಅವರ ಹುಟ್ಟುಹಬ್ಬದ ದಿನದಂದು ಅಮಿತಾಭ್ ಅವರ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಅಮಿತಾಭ್ ಬಚ್ಚನ್ ತನ್ನ ಸೊಸೆಯ ಹುಟ್ಟುಹಬ್ಬಕ್ಕೆ ಸಾರ್ವಜನಿಕವಾಗಿ ಶುಭ ಹಾರೈಸಿರಲಿಲ್ಲ. ಆದರೆ 2010 ನವೆಂಬರ್ 1 ರಂದು ಅಂದರೆ 14 ವರ್ಷಗಳ ಹಿಂದೆ ಎರಡು ಟ್ವೀಟ್‌ಗಳನ್ನು ಮಾಡಿದ್ದರು. ಅದರಲ್ಲಿ ಅವರು ತಮ್ಮ ಸೊಸೆ ಐಶ್ವರ್ಯಾಗೆ ಶುಭ ಹಾರೈಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲ ಹುಟ್ಟುಹಬ್ಬದ ಆಚರಣೆಯ ಬಗ್ಗೆಯೂ ಬರೆಯಲಾಗಿತ್ತು.
ತಾಜ್‌ನ ಚೈನೀಸ್ ರೆಸ್ಟೋರೆಂಟ್‌ನಲ್ಲಿ ಫ್ಯಾಮಿಲಿ ಡಿನ್ನರ್, ಸಮಾರಂಭ ನಡೆದಿತ್ತು. ಐಶ್ವರ್ಯಾ ಅವರ ಹುಟ್ಟುಹಬ್ಬದಂದು ನಾವೆಲ್ಲರೂ ಒಟ್ಟಿಗೆ ಸೇರಿದ್ದೇವೆ, ದಿನ ಚೆನ್ನಾಗಿತ್ತು ಎಂದು ಮೊದಲ ಪೋಸ್ಟ್ನಲ್ಲಿ ಬರೆದಿದ್ದಾರೆ.
T171 -….family dinner at Chinese in Taj where function was held … and brought in Aishwarya Birthday ..good feel about the day ..
— Amitabh Bachchan (@SrBachchan) October 31, 2010
ಮೊದಲಿಗೆ ಐಶ್ವರ್ಯಾ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಅವರಿಗೆ ನಿಮ್ಮ ಶುಭ ಹಾರೈಕೆಗಳನ್ನು ತಿಳಿಸಿದ್ದೇನೆ. ಅಲ್ಲದೆ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ ಎಂದು ಮತ್ತೊಂದು ಪೋಸ್ಟ್ನಲ್ಲಿ ತಿಳಿಸಿದ್ದರು.
T172 -First things first … thank you all for wishing Aishwarya on her birthday !! Have passed it on to her .. she thanks all … love
— Amitabh Bachchan (@SrBachchan) November 1, 2010
ಐಶ್ವರ್ಯಾಗೆ ಇಂದು ಸಂಭ್ರಮದ ದಿನವಾಗಿತ್ತು. ವರ್ಷಗಳ ನಂತರ ನೆಲದ ಮೇಲೆ ಕುಳಿತು ಊಟ ಮಾಡಿದ್ದು ಅದ್ಭುತವಾಗಿತ್ತು ಎಂದು ಎರಡನೇ ಪೋಸ್ಟ್ನಲ್ಲಿ ಬರೆಯಲಾಗಿತ್ತು.
T172 -Been a day of celebration for Aishwarya .. today sitting on the floor and eating lunch from ‘thali’.. so wonderful.. after years !!
— Amitabh Bachchan (@SrBachchan) November 1, 2010
ಅಭಿಷೇಕ್ ಮತ್ತು ಐಶ್ವರ್ಯಾ ಮದುವೆಯಾದ ಮೂರು ವರ್ಷಗಳ ನಂತರ ಬಿಗ್ಬಿ ಅವರು ಈ ಪೋಸ್ಟ್ ಮಾಡಿದ್ದರು. ದಂಪತಿ 2007ರಲ್ಲಿ ವಿವಾಹವಾದರು ಮತ್ತು ಮಗಳು ಆರಾಧ್ಯ 2011 ರಲ್ಲಿ ಜನಿಸಿದರು. ಆದರೆ ಈ ಬಾರಿ ಐಶ್ವರ್ಯಾ ರೈ ಅವರ ಹುಟ್ಟುಹಬ್ಬ ಮತ್ತು ದೀಪಾವಳಿ ಹಬ್ಬವೂ ಒಂದೇ ದಿನವಾಗಿತ್ತು. ‘ಜಲ್ಸಾ’ ಅಮಿತಾಭ್ ಕುಟುಂಬದಲ್ಲಿ ಐಶ್ವರ್ಯಾ ಹುಟ್ಟುಹಬ್ಬದ ದಿನದಂದು ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ದೀಪಗಳಿಂದ ಮನೆ ಹೊಳೆಯುತ್ತಿತ್ತು. ಜಯಾ ಬಚ್ಚನ್‌ನಿಂದ ಹಿಡಿದು ಶ್ವೇತಾ ಬಚ್ಚನ್ ಮತ್ತು ಅಮಿತಾಭ್ ರಸ್ತೆಗಳಲ್ಲಿ ಕಾಣಿಸಿಕೊಂಡರು. ಆದರೆ ಎಲ್ಲಿಯೂ ಐಶ್ವರ್ಯಾ ಅವರ ಪ್ರಸ್ತಾಪ ಇರಲಿಲ್ಲ. ಕುಟುಂಬದಲ್ಲಿ ಏನೋ ಸರಿಯಿಲ್ಲ ಎಂಬ ವದ್ದಂತಿಗೆ ಇದು ಪುಷ್ಟಿ ನೀಡಿದಂತಿದೆ.(ಏಜೆನ್ಸೀಸ್)
ದಕ್ಷಿಣದಂತೆ ಉತ್ತರದ ಚಿತ್ರೋದ್ಯಮವು ಶಕ್ತಿಶಾಲಿಯಾಗಿಲ್ಲ; DCM ಉದಯನಿಧಿ ಸ್ಟಾಲಿನ್ ಹೀಗೆಳಿದ್ದೇಕೆ?