ದಕ್ಷಿಣದಂತೆ ಉತ್ತರದ ಚಿತ್ರೋದ್ಯಮವು ಶಕ್ತಿಶಾಲಿಯಾಗಿಲ್ಲ; DCM ಉದಯನಿಧಿ ಸ್ಟಾಲಿನ್​​ ಹೀಗೆಳಿದ್ದೇಕೆ?

blank

ತಿರುವನಂತಪುರಂ: ತಮಿಳುನಾಡು ಹಿಂದಿಯನ್ನು ವಿರೋಧಿಸುತ್ತಿಲ್ಲ ಆದರೆ ಬಲವಂತದ ಹಿಂದಿ ಹೇರಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಮಿಳುನಾಡು ಉಪಮುಖ್ಯಮಂತ್ರಿ(DCM) ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

ಇದನ್ನು ಓದಿ: ಸ್ಟಾರ್​ ಹೀರೋಗಳಿಗೆ ನಟಿಯರನ್ನು ಆಯ್ಕೆ ಮಾಡುವವರು..; Bollywood ಕಹಿಸತ್ಯ ಬಿಚ್ಚಿಟ್ಟ ತಾಪ್ಸಿ ಪನ್ನು

ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದ ರಾಜ್ಯಗಳು ತಮ್ಮ ಭಾಷಾ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿಕೊಂಡಿವೆ. ಹೆಚ್ಚುತ್ತಿರುವ ಹಿಂದಿ ಪ್ರಭಾವದಿಂದಾಗಿ ಉತ್ತರ ಭಾರತದ ಭಾಷೆಗಳು ತಮ್ಮ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿವೆ ಎಂದು ತಿಳಿಸಿದರು.

ದಕ್ಷಿಣ ಚಲನಚಿತ್ರೋದ್ಯಮದಲ್ಲಿ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಚಿತ್ರೋದ್ಯಮಗಳು ಅಭಿವೃದ್ಧಿ ಹೊಂದುತ್ತಿವೆ. ಆದರೆ ಬಾಲಿವುಡ್‌ನಲ್ಲಿ ಹಿಂದಿ ಚಿತ್ರಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಉತ್ತರದ ಪ್ರಾದೇಶಿಕ ಭಾಷೆಗಳಾದ ಮರಾಠಿ, ಬಿಹಾರಿ, ಭೋಜ್‌ಪುರಿ, ಹರಿಯಾಣ ಮತ್ತು ಗುಜರಾತ್‌ನ ಚಿತ್ರಗಳನ್ನು ತುಳಿಯಲಾಗುತ್ತಿದೆ ಎಂದು ಟೀಕಿಸಿದರು. ಉತ್ತರದ ಕೆಲವು ರಾಜ್ಯಗಳು ತಮ್ಮದೇ ಆದ ಚಲನಚಿತ್ರೋದ್ಯಮವನ್ನು ಹೊಂದಿಲ್ಲ ಎಂದು ಉದಯನಿಧಿ ತಿಳಿಸಿದರು.

ನಾನು ರಾಜಕೀಯಕ್ಕೆ ಸೇರುವ ಮುನ್ನ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ಕೇರಳದಲ್ಲೂ ಚಿತ್ರೋದ್ಯಮ ಪ್ರವರ್ಧಮಾನಕ್ಕೆ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ತಯಾರಾದ ಬಹುತೇಕ ಮಲಯಾಳಂ ಚಿತ್ರಗಳು ನನಗೆ ಇಷ್ಟ. ಅದೇ ರೀತಿ ತೆಲುಗು, ಕನ್ನಡ ಚಿತ್ರಗಳೂ ಉತ್ತಮ ಪ್ರದರ್ಶನ ನೀಡುತ್ತಿವೆ.ಇಂದು ತಮಿಳು ಚಿತ್ರರಂಗವಲ್ಲದೆ ದಕ್ಷಿಣದ ತೆಲುಗು, ಮಲಯಾಳಂ, ಕನ್ನಡ ಇಂಡಸ್ಟ್ರಿಗಳು ಕೋಟಿಗಟ್ಟಲೆ ವ್ಯಾಪಾರ ಮಾಡುತ್ತಿವೆ. ಆದರೆ ನೀವೇ ಯೋಚಿಸಿ, ದಕ್ಷಿಣ ಭಾರತದಲ್ಲಿ ಇರುವಷ್ಟು ಶಕ್ತಿಶಾಲಿ ಚಿತ್ರೋದ್ಯಮವನ್ನು ಉತ್ತರ ಭಾರತದಲ್ಲಿ ಹಿಂದಿ ಬಿಟ್ಟು ಬೇರೆ ಯಾವುದೇ ಭಾಷೆ ಸೃಷ್ಟಿಸಿದೆಯೇ?

ಉತ್ತರ ಭಾರತದ ರಾಜ್ಯಗಳಲ್ಲಿ ಮಾತನಾಡುವ ಬಹುತೇಕ ಎಲ್ಲಾ ಭಾಷೆಗಳು ಹಿಂದಿಯಿಂದ ದೂರ ಸರಿದಿವೆ. ಪರಿಣಾಮವಾಗಿ ಅವರು ಹಿಂದಿ ಚಲನಚಿತ್ರಗಳಿಗೆ ಮಾತ್ರ ಆದ್ಯತೆ ನೀಡುತ್ತಾರೆ. ಬಾಲಿವುಡ್ ಹೆಚ್ಚಾಗಿ ಹಿಂದಿ ಚಿತ್ರಗಳನ್ನು ಮಾತ್ರ ನಿರ್ಮಿಸುತ್ತಿದೆ ಹಾಗಾಗಿ ಉತ್ತರದ ಉಳಿದ ಉದ್ಯಮಗಳು ತುಳಿತಕ್ಕೆ ಒಳಗಾಗುತ್ತಿವೆ ಎಂದು ಆರೋಪಿಸಿದರು. ಉತ್ತರದ ಇತರ ರಾಜ್ಯಗಳು ತಮ್ಮ ಚಿತ್ರೋದ್ಯಮವನ್ನು ರಕ್ಷಿಸುವಲ್ಲಿ ವಿಫಲವಾದರೆ, ಹಿಂದಿ ಅವರ ಸಂಸ್ಕೃತಿಯನ್ನು ತೆಗೆದುಕೊಳ್ಳುವುದಲ್ಲದೆ ಅವರ ಗುರುತನ್ನು ನಾಶಪಡಿಸುತ್ತದೆ ಎಂದು ಹೇಳಿದರು.

ಇದೇ ವೇಳೆ ದ್ರಾವಿಡ ಚಳವಳಿ ಕುರಿತು ಮಾತನಾಡಿದ ಉದಯನಿಧಿ ಸ್ಟಾಲಿನ್​​, ದ್ರಾವಿಡ ಚಳವಳಿ ಸಂಸ್ಕೃತಿ ಮತ್ತು ಭಾಷೆಯ ಪ್ರಾಬಲ್ಯದ ವಿರುದ್ಧ ಹುಟ್ಟಿಕೊಂಡ ಚಳವಳಿ. 1930 ಮತ್ತು 1960ರ ದಶಕದಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಗುರುತಿಸುವುದರ ವಿರುದ್ಧ ದೊಡ್ಡ ಪ್ರಮಾಣದ ದ್ರಾವಿಡ ಚಳವಳಿಗಳು ನಡೆದಿದ್ದವು ಎಂದು ಹೇಳಿದರು. ಈಗ ಕೆಲವು ರಾಷ್ಟ್ರೀಯವಾದಿಗಳು ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಬಲವಂತವಾಗಿ ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ಉದಯನಿಧಿ ಸ್ಟಾಲಿನ್ ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. (ಏಜೆನ್ಸೀಸ್​​)

ಆ​ತನ ಭಯಕ್ಕೆ ಸಿನಿಮಾ ಸೆಟ್​​ನಿಂದ ಓಡಿಹೋಗಿದ್ದೆ; ನಿರ್ದೇಶಕ ಅನೀಸ್ ಬಾಜ್ಮಿ ಹೇಳಿದ ‘ಶೋಮ್ಯಾನ್’ ಇವರೇ.. | Anees Aazmee

Share This Article

ಆಯುಷ್ಯ ಇರುವಾಗ ಸಾಯುವವರೆಗೆ ಬದುಕಲೇಬೇಕಲ್ಲ!

| ಡಾ.ಕೆ.ಪಿ. ಪುತ್ತೂರಾಯ ಇದು ಸಹಿಸಿಕೊಳ್ಳಲಾಗದ ವೃದ್ಯಾಪಕ್ಕೆ ಒಳಗಾಗಿ ಸಾಯಲಾಗದೆ ಸಾವಿನ ಕ್ಷಣವನ್ನೇ ಎದುರು ನೋಡುತ್ತಿರುವ…

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…