More

    ಅಭಿಮಾನಿಯನ್ನು ತಳ್ಳಿದ ಶಾರುಖ್ ಖಾನ್; ಫ್ಯಾನ್ಸ್​​ ಗರಂ!

    ಮುಂಬೈ: ಶಾರುಖ್ ಖಾನ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯನ್ನು ತಳ್ಳಿದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

    ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ ಅಭಿಮಾನಿಯೊಂದಿಗೆ ಸೆಲ್ಫಿಗೆ ನಿರಾಕರಿಸಿದ್ದಾರೆ. ಶಾರುಖ್ ಅವರು ವಿಮಾನ ನಿಲ್ದಾಣದ ಗೇಟ್‌ನಿಂದ ನಿರ್ಗಮಿಸುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ನಟ ನಡೆದುಕೊಂಡಿರುವ ರೀತಿ ವೈರಲ್​ ಆಗಿದೆ.

    ಇದನ್ನೂ ಓದಿ: ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಭಾರತಕ್ಕೆ ಅಗ್ರಸ್ಥಾನ!

    ಈ ವೇಳೆ ಅಲ್ಲಿದ್ದ ಅಭಿಮಾನಿಗಳು ಶಾರುಖ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಇದರಿಂದ ಶಾರುಖ್‌ಗೆ ಕೋಪ ಬಂದಿದೆ. ಮೊಬೈಲ್ ಹಿಡಿದು ತಮ್ಮ ಕಡೆ ಬಂದ ಅಭಿಮಾನಿಯನ್ನು ಶಾರುಖ್ ತಳ್ಳಿದ್ದಾರೆ. ಅಲ್ಲದೇ ಒಂದು ಕ್ಷಣ ಹಿಂದಕ್ಕೆ ತಿರುಗಿ ನೋಡಿದ್ದಾರೆ. ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಈ ವೀಡಿಯೋ ಸೆರೆಯಾಗಿದೆ.

    ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಪ್ರಸ್ತಾಪ | ‘ಕೈ’ ನಾಯಕರಲ್ಲೇ ಗೊಂದಲ; ನಿಷೇಧ ಕೈಬಿಡುವಂತೆ ಹಲವರಿಂದ ಒತ್ತಾಯ

    ವಿಡಿಯೋದಲ್ಲಿ ಕಪ್ಪು ಬಟ್ಟೆ ಧರಿಸಿ ಶಾರುಖ್ ವಿಮಾನ ನಿಲ್ದಾಣದಿಂದ ಹೊರಬಂದು ಮಾಧ್ಯಮದತ್ತ ಕೈ ಬೀಸುತ್ತಿರುವುದನ್ನು ಕಂಡು ಅಭಿಮಾನಿಯೊಬ್ಬರು ಅವರ ಬಳಿಗೆ ಬಂದರು. ಈ ವೇಳೆ, ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಅವನನ್ನು ಶಾರುಖ್ ತಳ್ಳಿದ್ದಾರೆ. ಅಭಿಮಾನಿಯನ್ನು ತಳ್ಳಿರೋದ್ದಕ್ಕೆ ಶಾರುಖ್ ವಿರುದ್ಧ ಫ್ಯಾನ್ಸ್ ಕಿಡಿಕಾರಿದ್ದಾರೆ.

    ಕಳೆದ‌ ಮೂರೂವರೆ ವರ್ಷಗಳಿಂದ ಅಭಿವೃದ್ಧಿ ಆಗಿಲ್ಲ: ಪ್ರಿಯಾಂಕಾ ಗಾಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts