More

    ಕಳೆದ‌ ಮೂರೂವರೆ ವರ್ಷಗಳಿಂದ ಅಭಿವೃದ್ಧಿ ಆಗಿಲ್ಲ: ಪ್ರಿಯಾಂಕಾ ಗಾಂಧಿ

    – ಮೂರು ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ಲೂಟಿ

    ವಿಜಯಪುರ: ಪ್ರತಿಬಾರಿ ಚುನಾವಣೆ ಬಂದಾಗ ಬಿಜೆಪಿ ಅವರಿಗೆ ನೀವು ಪ್ರಶ್ನೆಯನ್ನು ಕೇಳೋದಿಲ್ಲಾ‌. ಜಾತಿಯತೆ ಮಾಡಿ ಚುನಾವಣೆ ಗೆಲ್ಲತಿವಿ ಎಂದು ಅವರಿಗೆ ಗೊತ್ತಿದ್ರೆ ಅವರೇಕೆ ಅಭಿವೃದ್ಧಿ ಮಾಡ್ತಾರೆ? ಎಂದು ಆಢಳಿತ ಸರ್ಕಾರದ ವಿರುದ್ಧವಾಗಿ ಕಾಂಗ್ರೆಸ್​​ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ಮಾಡಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮ ಓಟ್ ನಿಮ್ಮ ವಿಕಾಸಕ್ಕಾಗಿ ಬಳಸಿಕೊಳ್ಳಬೇಕು.ಅದಕ್ಕಾಗಿ ಇಂದು ನಾನು ನಿಮ್ಮ‌ ಮುಂದೆ ಬಂದಿದ್ದೇನೆ. ಅವರಿಗೆ ಹೇಳಿ ನಿಮ್ಮದು ಬಹಳ‌ ಆಗಿದೆ, ನೀವು ಹೊರಡಿ‌ ಎಂದು ಹೇಳಿ. ಎರಡೂವರೆ ಲಕ್ಷ ಸರ್ಕಾರಿ ಪೋಸ್ಟ್ ಗಳು ಖಾಲಿ ಇವೆ, ಆದ್ರೆ ಯಾರಿಗೂ ನೌಕರಿ ಸಿಕ್ಕಿಲ್ಲ. ರೈತರಿಗೆ ಅನುಕೂಲ ಆಗಿಲ್ಲ, ಇವರು ಯಾವುದೇ ಕೆಲಸ ಮಾಡಿಲ್ಲಾ. ದೊಡ್ಡ ದೊಡ್ಡ ಬಿಸಿನೆಸ್ ಗಳನ್ನು ತಮ್ಮ ಆಪ್ತರಿಗೆ ಕೊಟ್ಟಿದ್ದಾರೆ ಎಂದು ಸಾಲು ಸಾಲು ಆರೋಪವನ್ನು ಮಾಡಿದ್ದಾರೆ.

    ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಪ್ರಸ್ತಾಪ | ‘ಕೈ’ ನಾಯಕರಲ್ಲೇ ಗೊಂದಲ; ನಿಷೇಧ ಕೈಬಿಡುವಂತೆ ಹಲವರಿಂದ ಒತ್ತಾಯ

    ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ, ಪಶುಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಕೊಟ್ಟಿದೆ. 8 ಲಕ್ಷ ರೈತರಿಗೆ ಛತ್ತಿಸಘಡ ನಲ್ಲಿ ಅನುಕೂಲ ಆಗಿದೆ. ನೀವು ಜಾಗೃತಿ ಆಗದಿದ್ರೆ ಜೀವನಪೂರ್ತಿ ಅವರು ಬ್ರಷ್ಟಾಚಾರ ಮಾಡ್ತಾರೆ. ಬಿಜೆಪಿಯಿಂದಾಗಿ ಗ್ಯಾಸ್, ಪೆಟ್ರೋಲ್, ಯೂರಿಯಾ ಸೇರಿದಂತೆ ಎಲ್ಲ ಬೆಲೆಗಳು ಏರುತ್ತಿವೆ. ತಪ್ಪಾಗಿರುವಂತಹ ಸರ್ಕಾರ ಸಿಕ್ಕಿದೆ. ಹೀಗಾಗಿ ಆರಂಭದಿಂದಲೇ ಇವರು‌ ಲೂಟಿಗೆ ಇಳಿದಿದ್ದಾರೆ ಎಂದು ಬಿಜೆಪಿ ವಿರುದ್ಧವಾಗಿ ವಾಗ್ದಾಳಿ ಮಾಡಿದ್ದಾರೆ.

    ಕಳೆದ‌ ಮೂರೂವರೆ ವರ್ಷಗಳಿಂದ ಏನೂ ಅಭಿವೃದ್ಧಿ ಆಗಿಲ್ಲ. ಸರ್ವಶ್ರೇಷ್ಠ, ವಿಕಾಸ ಪುರುಷ ಎಂದು ಮೋದಿಯನ್ನು ಕರಿತಾರೆ. ಆದ್ರೆ ಈ ಮೋದಿ ಕರ್ನಾಟಕದಲ್ಲಿ ಬಂದು ಹೇಳ್ತಾರೆ, ನನ್ನ ಕನಸಿದೆ ಕರ್ನಾಟಕ ವಿಕಾಸ ಮಾಡೋದು ಎಂತಾರೆ. ಆದ್ರೆ ನಿಮ್ಮ ಕನಸು ಏನಕೆ ನನಸು ಮಾಡೋಕೆ ಆಗಿಲ್ಲಾ.? ಯಾಕಂದ್ರೆ ನಿಮ್ಮ ಬಿಜೆಪಿ ಸರ್ಕಾರ 40 ಪರ್ಸೆಂಟ್ ಲೂಟಿ ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.

    ಇದನ್ನೂ ಓದಿ: ವಯಾಗ್ರ ತೆಗೆದುಕೊಂಡ ಆತ ಅವಳ ಮಾತು ಕೇಳದೆ ಕೊನೆಗೆ ಸಾವಿಗೀಡಾದ!

    ನೀವು ಕಣ್ಣುಮುಚ್ಚಿ ಕನಸು ಕಾಣ್ತಿದ್ರಿ. ಹೀಗಾಗಿ ನೀವು ಭ್ರಷ್ಟಾಚಾರ ಮಾಡುವ ಯಾರಿಗೂ ತಡೆಯಲಿಲ್ಲ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡ್ರು. ಕರ್ನಾಟಕ ಲೂಟಿ ಹೊಡೆಯಲಾಗಿದೆ. ಇಂದು ಚುನಾವಣೆ ಬಂದಿದೆ. ವಿಕಾಸ, ಆಸ್ಪತ್ರೆ, ರಸ್ತೆ, ಅಭಿವೃದ್ಧಿ ಯಾಕೆ ಮಾಡಲಿಲ್ಲ. ಮೂರು ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ಲೂಟಿ ಮಾಡಿದ್ದೀರಿ ಎಂದು ಆರೋಪಿಸಿದ್ದಾರೆ.
    ನೀವು ಲೂಟಿ ಮಾಡಿರುವ ಹಣದಲ್ಲಿ, 2250 ಕಿಲೊಮೀಟರ್ ರಸ್ತೆ ಮಾಡಬಹುದು, 30ಸಾವಿರ ಸ್ಮಾರ್ಟ್ ಕ್ಲಾಸ್ ಮಾಡಬಹುದು, 30ಲಕ್ಷ ಮನೆ ಮಾಡಬಹುದಿತ್ತು. ಬೆಂಗಳೂರಿನಂತ ದೊಡ್ಡ ಸಿಟಿಯಿಂದ ಎಷ್ಟೋ ಕಂಪನಿಗಳು ಹೊರಹೋಗಿವೆ ಎಂದಿದ್ದಾರೆ.

    ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಭಾರತಕ್ಕೆ ಅಗ್ರಸ್ಥಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts