ಕ್ಲಾಸಿಕಲ್​ ಕಲ್ಟ್​​ ‘ದೇವದಾಸ್’ ಚಿತ್ರವನ್ನು ತಿರಸ್ಕರಿಸಿದ್ರಂತೆ ಶಾರೂಖ್​​; ಬಳಿಕ ಒಪ್ಪಿಕೊಂಡಿದ್ದು ಈ ಕಾರಣಕ್ಕಂತೆ!

ಮುಂಬೈ: ಶಾರೂಖ್​ ಅಭಿನಯದ ದೇವದಾಸ್​​ ಸಿನಿಮಾ ಯಾರಿಗೆ ತಿಳಿದಿಲ್ಲ. ಈ ಸಿನಿಮಾ ಸೂಪರ್ ಹಿಟ್​​ ಆಗುವುದರ ಜತೆಗೆ ಕ್ಲಾಸಿಕ್​ ಕಲ್ಟ್​​​ ಎಂದು ಎನ್ನಿಸಿಕೊಂಡಿತ್ತು. ದೇವದಾಸ್​​ ಚಿತ್ರವೂ ಬಿಡುಗಡೆಯಾಗಿ ಎರಡು ದಶಕಗಳಾಗಿದ್ದರೂ ಇಂದಿಗೂ ಜನರಲ್ಲಿ ನೆನಪಿದೆ. ಈ ರೊಮ್ಯಾಂಟಿಕ್​ ಡ್ರಾಮಾದಲ್ಲಿ ದೇವದಾಸ್​ ಪಾತ್ರದಲ್ಲಿ ನಟಿಸಿದ್ದ ಶಾರೂಖ್​​ ಖಾನ್ ತಮ್ಮ ನಟನೆಯ ಮೂಲಕ​ ಅಭಿಮಾನಿಗಳ ಮನಗೆದ್ದರು. ಆದರೆ ದೇವದಾಸ್​​ ಪಾತ್ರದಲ್ಲಿ ನಟಿಸುವ ಆಫರ್​ ಬಂದಾಗ ಶಾರೂಖ್​ ಮೊದಲಿಗೆ ತಿರಸ್ಕರಿಸಿದ್ದರಂತೆ.

ಇದನ್ನು ಓದಿ: ರಾಹುಲ್​ಗಾಂಧಿ ಅತ್ಯಂತ ಅಪಾಯಕಾರಿ ವ್ಯಕ್ತಿ; ಕಂಗನಾ ರಣಾವತ್​​ ಹೀಗೆನ್ನಲು ಕಾರಣವೇನು?

ದೇವದಾಸ್​​ ಪಾತ್ರದಲ್ಲಿ ನಟಿಸಲು ಮೊದಲು ನಿರಾಕರಿಸಿದ್ದಾಗಿ ಸ್ವತಃ ಶಾರೂಖ್​ ಅವರೆ ತಿಳಿಸಿದ್ದಾರೆ. ಇತ್ತೀಚೆಗೆ ಲೊಕಾರ್ನೊ ಫಿಲ್ಮ್ ಫೆಸ್ಟಿವಲ್ 2024ರಲ್ಲಿ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಶಾರೂಖ್​ ಅವರಿಗೆ ಪಾರ್ಡೊ ಅಲ್ಲಾ ಕ್ಯಾರಿಯರಾ ಎಂದು ಕರೆಯಲ್ಪಡುವ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾರೂಖ್​ ಗೌರವಾರ್ಥವಾಗಿ ದೇವದಾಸ್ ಚಲನಚಿತ್ರವನ್ನು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಆ ಸಂದರ್ಭದಲ್ಲಿ ದೇವದಾಸ್ ಕುರಿತು ಮಾತನಾಡಿದ ಶಾರೂಖ್​​, ನನಗೆ ಮೊದಲು ದೇವದಾಸ್​​​ ಆಗಿ ನಟಿಸುವ ಇಚ್ಛಿಸಿರಲಿಲ್ಲ. ಏಕೆಂದರೆ ಇದಕ್ಕೆ ಮುಖ್ಯು ಕಾರಣ ಆ ಪಾತ್ರ. ರೊಮ್ಯಾಂಟಿಕ್​ ಚಿತ್ರಗಳನ್ನು ಮಾಡಿರುವ ನಾನು, ಹುಡುಗಿಗೆ ಕಮಿಟ್​ಮೆಂಟ್​ ಕೊಡದ ಕುಡುಕನ ಪಾತ್ರದಲ್ಲಿ ನಟಿಸಬೇಕಿತ್ತು. ಅಲ್ಲದೆ ಇದು ದೇಶದಲ್ಲಿ ಹಲವು ಬಾರಿ ರೀಮೇಕ್​ ಆಗಿತ್ತು ಎಂದು ಹೇಳಿದರು.

ನಿರಾಕರಿಸಿದ ಬಳಿಕ ಪಾತ್ರದಲ್ಲಿ ನಟಿಸಲು ಕಾರಣ ಏನೆಂಬುದನ್ನು ಅವರು ತಿಳಿಸಿದರು. ನಾನು ಆ ಪಾತ್ರ ಮಾಡುವುದಿಲ್ಲ ಎಂದು ಶಾರೂಖ್​ ಹೇಳಿದ ಬಳಿಕ ಸಂಜಯ್​ ಲೀಲಾ ಬನ್ಸಾಲಿ ಅವರು, ನಾನು ಈ ಸಿನಿಮಾವನ್ನು ಯಾರೊಂದಿಗೂ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಈ ಸಿನಿಮಾ ಮಾಡಿದರೆ ನಿಮ್ಮೊಂದಿಗೆ ಮಾತ್ರ ಎಂದು ತಿಳಿಸಿದರು. ಏಕೆಂದರೆ ನಿಮ್ಮ ಕಣ್ಣುಗಳು ದೇವದಾಸ್​​ನಂತಿವೆ. ಆದ್ದರಿಂದ ದೇವದಾಸ್​​ ಸಿನಿಮಾ ಮಾಡಿದರೆ ನಿಮ್ಮೊಂದಿಗೆ ಮಾತ್ರ ಎಂದು ಹೇಳಿದರು. ಬಳಿಕ ನಾವು ಮತ್ತೆ ಭೇಟಿಯಾಗಿ ದೇವದಾಸ್​​ ಮಾಡಲು ಸಿದ್ಧರಿಲ್ಲದಿದ್ದರೂ ಈ ಸಿನಿಮಾ ಮಾಡಲು ಒಪ್ಪಿಕೊಂಡೆ ಎಂದು ಹೇಲಿದ್ದಾರೆ.

ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ ಕಾದಂಬರಿ ಆಧಾರಿತ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ದೇವದಾಸ್ ಸಿನಿಮಾದಲ್ಲಿ ಶಾರೂಖ್​ ಖಾನ್​ ಜತೆಗೆ ಐಶ್ವರ್ಯ ರೈ ಬಚ್ಚನ್ ಮತ್ತು ಮಾಧುರಿ ದೀಕ್ಷಿತ್ ನಟಿಸಿದ್ದಾರೆ. ಜಾಕಿ ಶ್ರಾಫ್ ಮತ್ತು ಕಿರಣ್ ಖೇರ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.(ಏಜೆನ್ಸೀಸ್​​)

ಲೊಕಾರ್ನೊ ಫಿಲ್ಮ್ ಫೆಸ್ಟಿವಲ್; ಪಾರ್ಡೊ ಅಲ್ಲಾ ಕ್ಯಾರಿಯರಾ ಪ್ರಶಸ್ತಿ ಪಡೆದ ಮೊದಲ ಭಾರತೀಯ ಶಾರೂಖ್​​​

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…