ಸ್ವಿಟ್ಜರ್ಲೆಂಡ್: ಬಾಲಿವುಡ್ನ ಕಿಂಗ್ಖಾನ್ ಶಾರೂಖ್ ಖಾನ್ ತಮ್ಮ ನಟನಾಶೈಲಿಯಿಂದಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ತಮ್ಮದೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಲೊಕಾರ್ನೊ ಫಿಲ್ಮ್ ಫೆಸ್ಟಿವಲ್ 2024ರಲ್ಲಿ ಶಾರೂಖ್ ಅವರಿಗೆ ಪಾರ್ಡೊ ಅಲ್ಲಾ ಕ್ಯಾರಿಯರಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸದ್ಯ ಈ ಎಲ್ಲಾ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನು ಓದಿ: ಟಾಮ್ ಆ್ಯಂಡ್ ಜೆರ್ರಿ ಹಾಸ್ಯಾಸ್ಪದವಲ್ಲ.. ಹಿಂಸಾತ್ಮಕ; ಹೀಗೆಳಿದ್ದೇಕೆ ಅಕ್ಷಯ್ ಕುಮಾರ್
ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಶಾರೂಖ್ ಖಾನ್ ಅವರಿಗೆ ಪಾರ್ಡೊ ಅಲ್ಲಾ ಕ್ಯಾರಿಯರಾ ಎಂದು ಕರೆಯಲ್ಪಡುವ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾರೂಖ್ ಅವರು ಈ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯರಾಗಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಶಾರೂಖ್, ಇದು ತುಂಬಾ ಭಾರವಾಗಿದೆ ಎಂದು ಹೇಳಿ ಅವಾರ್ಡ್ ಅನ್ನು ಪಕ್ಕದಲ್ಲಿ ಇಟ್ಟರು. ನಂತರ ತಮ್ಮ ಸಿಗ್ನೆಚರ್ ಫೋಸ್ನಲ್ಲಿ ನಿಂತು ನನ್ನನ್ನು ಸ್ವಾಗತಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು. ಯಾವುದೇ ವೇದಿಕೆಯಲ್ಲಿದ್ದರು ಅಭಿಮಾನಿಗಳನ್ನು ಸಂತೋಷ ಪಡಿಸುವುದರಲ್ಲಿ ಶಾರೂಖ್ ಮುಂದಿರುತ್ತಾರೆ. ಅದೇ ರೀತಿ ಈ ವೇದಿಕೆಯಲ್ಲೂ, ಇದು ತುಂಬಾ ಕಷ್ಟ ಎಂಬ ಕಾರಣಕ್ಕೆ ಈ ಪ್ರಶಸ್ತಿ ಶೀರ್ಷಿಕೆಯನ್ನು ಹೆಸರಿಸಲು ಸಾಧ್ಯವಿಲ್ಲ ಎಂದು ತಮಾಷೆಯಾಗಿ ಹೇಳಿ ಅಲ್ಲಿ ನೆರದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು.
ಲೊಕಾರ್ನೊದ ಅತ್ಯಂತ ಬೆಚ್ಚಗಿನ ನಗರವಾಗಿದೆ. ಈ ಅತ್ಯಂತ ಸುಂದರವಾದ, ಸಾಂಸ್ಕೃತಿಕ, ಸೃಜನಶೀಲ ಮತ್ತು ಅತ್ಯಂತ ಬಿಸಿಯಾದ ನಗರಕ್ಕೆ ನನ್ನನ್ನು ಸ್ವಾಗತಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದರು. ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿ, ಸಿನಿಮಾ ನಮ್ಮ ಯುಗದ ಅತ್ಯಂತ ಆಳವಾದ ಮತ್ತು ಪ್ರಭಾವಶಾಲಿ ಕಲಾತ್ಮಕ ಮಾಧ್ಯಮವಾಗಿದೆ ಎಂದು ನಂಬುತ್ತೇನೆ. ಹಲವು ವರ್ಷಗಳಿಂದ ಅದರ ಭಾಗವಾಗಿರುವ ಭಾಗ್ಯ ನನಗೆ ಸಿಕ್ಕಿದೆ. ಈ ಪ್ರಯಾಣವು ನನಗೆ ಕೆಲವು ಪಾಠಗಳನ್ನೂ ಕಲಿಸಿದೆ ಎಂದು ಹೇಳಿದರು.
ಕಲೆ ಎಂದರೆ ಬದುಕನ್ನು ಎಲ್ಲಕ್ಕಿಂತ ಹೆಚ್ಚಾಗಿ ಇರಿಸುವ ಕ್ರಿಯೆ. ಇದು ಪ್ರತಿ ಮಾನವ ನಿರ್ಮಿತ ಮಿತಿಯನ್ನು ಮೀರಿ ವಿಮೋಚನೆಯ ಸ್ಥಳಕ್ಕೆ ಹೋಗುತ್ತದೆ. ಕಲೆಯನ್ನು ರಾಜಕೀಯ ಮಾಡುವ ಅಗತ್ಯವಿಲ್ಲ, ವಿವಾದ ಮಾಡುವ ಅಗತ್ಯವಿಲ್ಲ, ಇದನ್ನು ಉಪದೇಶಿಸುವ ಅಗತ್ಯವಿಲ್ಲ ಎಂದಿದ್ದಾರೆ. ಶಾರೂಖ್ ಗೌರವಾರ್ಥವಾಗಿ ಸಂಜಯ್ ಲೀಲಾ ಬನ್ಸಾಲಿಯವರ ದೇವದಾಸ್ ಚಲನಚಿತ್ರವನ್ನು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.(ಏಜೆನ್ಸೀಸ್)
ವಯನಾಡು ಭೂಕುಸಿತ ಸಂತ್ರಸ್ತರ ನೆರವಿಗೆ ಮುಂದಾದ ನಟ ಧನುಷ್