ಕೋವಿಡ್​-19 ವ್ಯಾಕ್ಸಿನ್ ಷೇರುಪೇಟೆ ಚೇತರಿಕೆಗೂ ಕಾರಣವಾಯಿತೇ?

NSE BSE 20 DEC 19
Published on

ಮುಂಬೈ: ಕರೊನಾ ಸಂಕಷ್ಟದ ನಡುವೆ ಭಾರತೀಯ ಷೇರುಪೇಟೆ ಏರಿಳಿತಗಳನ್ನು ದಾಖಲಿಸುತ್ತ ಸಾಗಿದ್ದು, ಮಂಗಳವಾರದ ವಹಿವಾಟಿನ ಆರಂಭದಲ್ಲೇ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ 500ಕ್ಕೂ ಹೆಚ್ಚು ಅಂಶ ಏರಿದರೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 11,100ರ ಗಡಿದಾಟಿದೆ. ಕೋವಿಡ್​-19 ಲಸಿಕೆ ಕುರಿತಾದ ನಿರೀಕ್ಷೆ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಆಶಾವಾದವನ್ನು ಸೃಷ್ಟಿಸಿರುವುದೇ ಈ ಏರಿಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಇಂದು ಬೆಳಗ್ಗೆ ವಹಿವಾಟು ಆರಂಭವಾಗುತ್ತಲೇ ಸೆನ್ಸೆಕ್ಸ್ 37,881.76ರಿಂದ 37,923.38 ಅಂಶಕ್ಕೆ ಏರಿದ್ದು, ಶೇಕಡ 1.24 ಏರಿಕೆ ದಾಖಲಿಸಿತ್ತು. ಇದೇ ವೇಳೆ ನಿಫ್ಟಿ ಕೂಡ 136.35 ಅಂಶ ಏರಿ 11,158.55 ಅಂಶದಲ್ಲಿ ವಹಿವಾಟು ಆರಂಭಿಸಿತ್ತು.

ಸೆನ್ಸೆಕ್ಸ್ ಪಟ್ಟಿಯಲ್ಲಿ ಐಸಿಐಸಿಐ ಬ್ಯಾಂಕ್​ ಟಾಪ್ ಗೇನರ್​ ಆಗಿ ಕಾಣಿಸಿಕೊಂಡಿದ್ದು, ಷೇರುಗಳು ಶೇಕಡ 3 ಲಾಭಾಂಶ ದಾಖಲಿಸಿವೆ. ಇದರ ಬೆನ್ನಿಗೆ ಮಾರುತಿ, ಕೊಟಾಕ್ ಬ್ಯಾಂಕ್​, ಏಕ್ಸಿಸ್ ಬ್ಯಾಂಕ್, ಪವರ್ ಗ್ರಿಡ್​, ಎಚ್​ಡಿಎಫ್​ಸಿ ಬ್ಯಾಂಕ್ ಷೇರುಗಳು ಲಾಭಾಂಶ ದಾಖಲಿಸಿವೆ. ಇನ್ನೊಂದೆಡೆ, ಬಜಾಜ್ ಫಿನ್​ಸರ್ವ್​ ಮತ್ತು ಐಟಿಸಿ ಷೇರುಗಳು ನಷ್ಟ ಅನುಭವಿಸಿವೆ.

ನಿನ್ನೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 398.85 ಅಂಶ ಏರಿಕೆ ದಾಖಲಿಸಿ 37,418.99 ಅಂಶದಲ್ಲಿ ದಿನದ ವಹಿವಾಟು ಮುಗಿಸಿತ್ತು. ಇದೇ ರೀತಿ ನಿಫ್ಟಿ 120.50 ಅಂಶ ಏರಿ 11,022.20 ಅಂಶದಲ್ಲಿ ವಹಿವಾಟು ಕೊನೆಗೊಳಿಸಿತ್ತು. ಸೋಮವಾರದ ಕ್ಯಾಪಿಟಲ್ ಮಾರ್ಕೆಟ್​ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1,709.97 ಕೋಟಿ ರೂಪಾಯಿಗಳನ್ನು ಈಕ್ವಿಟಿ ಖರೀದಿಗೆ ಹೂಡಿಕೆ ಹೂಡಿಕೆ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net