ಒಂದಿಷ್ಟು ಶುಲ್ಕ ಪಾವತಿಸಿದ್ರೆ 2 ಕೋಟಿ ನಿಮ್ದಾಗುತ್ತೆ, ಯಾಕೆ ಕಳ್ಕೋತೀರಿ? ಎಂದು ಹೇಳ್ತಾನೇ ವಂಚಿಸಿದ್ರು ನೋಡಿ..!

Cyber
Published on

ಬೆಂಗಳೂರು: ಎರಡು ಕೋಟಿ ರೂ. ಬಹುಮಾನದ ಆಸೆ ತೋರಿಸಿದ ಸೈಬರ್ ಕಳ್ಳರು ವ್ಯಕ್ತಿಗೆ 20 ಸಾವಿರ ರೂ. ವಂಚಿಸಿದ್ದಾರೆ. ಗೊಲ್ಲರಹಟ್ಟಿ ಸಮೀಪ ಅಂಜನಾನಗರದ ಎಂ. ಕುಮಾರ್ ವಂಚನೆಗೊಳಗಾದವರು.

ಕೆಲ ದಿನಗಳ ಹಿಂದೆ ವಂಚಕರು ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಕುಮಾರ್​ಗೆ ಕರೆ ಮಾಡಿ ನಿಮಗೆ ಲಾಟರಿಯಲ್ಲಿ 2 ಕೋಟಿ ರೂ. ಬಹುಮಾನ ಬಂದಿದೆ. ನೀವು ಹಣ ಪಡೆಯಲು ಕೆಲ ಶುಲ್ಕಗಳನ್ನು ಪಾವತಿಸಬೇಕಿದೆ ಎಂದಿದ್ದಾರೆ.

ಅಂತೆಯೇ ಅವರು ಸೂಚಿಸಿದ ಅತುಲ್ ಕುಮಾರ್ ಎಂಬಾತನ ಬ್ಯಾಂಕ್ ಖಾತೆಗೆ ಹಂತಹಂತವಾಗಿ 20,500 ರೂ.ಗಳನ್ನು ಕುಮಾರ್ ಜಮೆ ಮಾಡಿದ್ದಾರೆ. ಆದರೆ ಈ ಹಣ ಸಂದಾಯವಾದ ಬಳಿಕ ವಂಚಕರು ಮೊಬೈಲ್ ಆಫ್ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕುಮಾರ್ ದೂರು ನೀಡಿದ್ದು ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net