More

    ಮೊದಲ ಬ್ಯಾಚ್​ನ 5 ರಫೆಲ್​ ಜೆಟ್​ಗಳು ಜುಲೈ ಅಂತ್ಯಕ್ಕೆ ಸೇನೆ ಸೇರ್ಪಡೆ

    ನವದೆಹಲಿ: ಐದು ರಫೆಲ್ ಯುದ್ಧ ವಿಮಾನಗಳ ಮೊದಲ ಬ್ಯಾಚ್​ ಜುಲೈ ಅಂತ್ಯಕ್ಕೆ ಭಾರತಕ್ಕೆ ತಲುಪುವ ನಿರೀಕ್ಷೆ ಇದ್ದು ಜುಲೈ 29ಕ್ಕೆ ಸೇನೆ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಸೇನೆ ಸೇರ್ಪಡೆ ಕಾರ್ಯಕ್ರಮ ಅಂಬಾಲದ ವಾಯುನೆಲೆಯಲ್ಲಿ ನಡೆಯಲಿದ್ದು, ಅಂದಿನ ವಾತಾವರಣದ ಅನುಕೂಲತೆಗಳನ್ನು ಕೂಡ ಗಮನದಲ್ಲಿರಿಸಿಕೊಂಡು ಕಾರ್ಯಕ್ರಮದ ಸಮಯ ಬದಲಾಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

    ಎಲ್ಲ ರಫೆಲ್​ ಜೆಟ್​ಗಳ ಸೇನೆ ಸೇರ್ಪಡೆ ಕಾರ್ಯಕ್ರಮ ಆಗಸ್ಟ್​ ತಿಂಗಳ ಎರಡನೇ ಅವಧಿಯಲ್ಲಿ ನಡೆಯುವ ನಿರೀಕ್ಷೆ ಇದೆ. ರಫೆಲ್ ಜೆಟ್ ಹಾರಾಟ ನಡೆಸುವುದಕ್ಕೆ ಸಂಬಂಧಿಸಿದ ತರಬೇತಿಯನ್ನು ವಾಯುಪಡೆಯ ಏರ್​ ಕ್ರೂ ಮತ್ತು ಗ್ರೌಂಡ್ ಕ್ರೂಗಳು ಪಡೆದುಕೊಂಡು ರಫೆಲ್ ಜೆಟ್​ಗಳನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಶೀಘ್ರವಾಗಿ ರಫೆಲ್​ ಜೆಟ್​ಗಳನ್ನು ತರಿಸಿಕೊಳ್ಳುವ ಪ್ರಯತ್ನವೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಈ ವರ್ಷ ಎರಡು ಬಿಡುಗಡೆ; ಮೂರು ಶೂಟಿಂಗ್​ … ಇನ್ನು ಸುಮ್ಮನೆ ಕೂರಲ್ಲ ಅಕ್ಷಯ್​

    ಇದೇ ವೇಳೆ, ಏರ್​ಫೋರ್ಸ್​ನ ಕಮಾಂಡರ್ಸ್​ ಕಾನ್ಫರೆನ್ಸ್ ನಾಳೆಯಿಂದ 24ನೇ ತಾರೀಕುವರೆಗೆ ನವದೆಹಲಿಯ ವಾಯುಭವನದಲ್ಲಿ ನಡೆಯಲಿದೆ. ಮುಂದಿನ ದಶಕದಲ್ಲಿ ವಾಯುಪಡೆ ಎಂಬುದು ಈ ಸಲದ ಸಮಾವೇಶದ ಥೀಮ್​. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ರಕ್ಷಣಾ ಕಾರ್ಯದರ್ಶಿ ಮತ್ತು ರಕ್ಷಣಾ ಉತ್ಪಾದನಾ ಕಾರ್ಯದರ್ಶಿಗಳು ಈ ಸಮಾವೇಶದ ಉದ್ಘಾಟನೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

    ಸಮಾವೇಶದ ಅಧ್ಯಕ್ಷತೆಯನ್ನು ಚೀಫ್​ ಆಫ್ ದ ಏರ್ ಸ್ಟಾಫ್​ ಆಗಿರುವ ಏರ್​ ಚೀಫ್ ಮಾರ್ಷಲ್ ಆರ್​ಕೆಎಸ್​ ಭದೌರಿಯಾ ಅವರು ವಹಿಸಲಿದ್ದು, ಮೂರು ದಿನಗಳ ಸಮಾವೇಶದ ಕಲಾಪಗಳಲ್ಲಿ ಪ್ರಸ್ತುತ ಸನ್ನಿವೇಶ ಸೇರಿ ಹಲವು ವಿಚಾರ ಕುರಿತು ಚಿಂತನ-ಮಂಥನ ನಡೆಯಲಿದೆ. (ಏಜೆನ್ಸೀಸ್)

    ವಾರ್ಡ್​ಬಾಯ್​ಗೆ ಕೊಡಲು 30 ರೂ. ಇಲ್ಲದ್ದಕ್ಕೆ ಸ್ಟ್ರೆಚರ್​ ದೂಡಿದ 6ರ ಬಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts