

ಮುಂಬೈ: ಭಾರತೀಯ ಮಾರುಕಟ್ಟೆಯ ಪ್ರಮುಖ ಷೇರು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿನ ಖರೀದಿ ಹಾಗೂ ವಿದೇಶಿ ನಿಧಿಯ ಒಳಹರಿವಿನಿಂದಾಗಿ ಬುಧವಾರ ಬಿಎಸ್‌ಇ ಸೂಚ್ಯಂಕವು 727 ಅಂಕಗಳ ಏರಿಕೆ ಕಂಡರೆ, ನಿಫ್ಟಿ ಸೂಚ್ಯಂಕವು 20 ಸಾವಿರ ಅಂಕಗಳ ಗಡಿಯನ್ನು ಮತ್ತೆ ದಾಟಿತು.
ಭಾರತೀಯ ಷೇರು ಮಾರುಕಟ್ಟೆಗೆ ಬುಧವಾರ ಮಹತ್ವದ ದಿನವಾಯಿತು. ಬಿಎಸ್ಇಯಲ್ಲಿ ಎಲ್ಲಾ ಪಟ್ಟಿ ಮಾಡಿದ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯಮಾಪನವು ಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್ ಮೈಲಿಗಲ್ಲನ್ನು ತಲುಪಿ ದಾಖಲೆ ಬರೆಯಿತು.
30-ಷೇರುಗಳ ಬಿಎಸ್‌ಇ ಸೂಚ್ಯಂಕವು 727.71 ಅಂಕಗಳು ಅಥವಾ ಶೇಕಡಾ 1.10 ರಷ್ಟು ಜಿಗಿದು 66,901.91 ಕ್ಕೆ ಸ್ಥಿರವಾಗಿಯಿತು. ನಿಫ್ಟಿ ಸೂಚ್ಯಂಕವು ಎರಡು ತಿಂಗಳ ಅಂತರದ ನಂತರ 20,000 ಅಂಕಗಳನ್ನು ಮರಳಿ ಪಡೆಯಿತು. ಇದು 206.90 ಅಂಕ ಅಥವಾ ಶೇಕಡಾ 1.04 ಏರಿಕೆ ದಾಖಲಿಸಿ 20,096.60ಕ್ಕೆ ತಲುಪಿತು.
ಆಕ್ಸಿಸ್ ಬ್ಯಾಂಕ್, ಮಹೀಂದ್ರಾ ಮತ್ತು ಮಹೀಂದ್ರಾ, ವಿಪ್ರೋ, ಟಾಟಾ ಮೋಟಾರ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಟೆಕ್ ಮಹೀಂದ್ರ, ಐಸಿಐಸಿಐ ಬ್ಯಾಂಕ್, ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೋಸಿಸ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಭಾರ್ತಿ ಏರ್‌ಟೆಲ್ ಪ್ರಮುಖ ಲಾಭ ಗಳಿಸಿದವು. ನೆಸ್ಲೆ, ಟೈಟಾನ್, ಬಜಾಜ್ ಫಿನ್‌ಸರ್ವ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಕುಸಿತ ಕಂಡವು.
ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೋ, ಶಾಂಘೈ ಮತ್ತು ಹಾಂಗ್ ಕಾಂಗ್ ಹಿನ್ನಡೆ ಅನುಭವಿಸಿದವು. ಐರೋಪ್ಯ ಮಾರುಕಟ್ಟೆಗಳು ಲಾಭದೊಂದಿಗೆ ವಹಿವಾಟು ನಡೆಸಿದವು. ಮಂಗಳವಾರ ಅಮೆರಿಕದ ಮಾರುಕಟ್ಟೆಯಲ್ಲಿ ಒಂದಿಷ್ಟು ಚೇತರಿಕೆ ಕಂಡುಬಂದಿತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 783.82 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ಮಾಹಿತಿಯ ನೀಡಲಾಗಿದೆ.
ಮಂಗಳವಾರದಂದು ಬಿಎಸ್‌ಇ ಸೂಚ್ಯಂಕ 204.16 ಅಂಕ ಏರಿಕೆಯಾಗಿ 66,174.20 ಕ್ಕೆ ಸ್ಥಿರವಾಗಿತ್ತು. ನಿಫ್ಟಿ 95 ಅಂಕ ಏರಿಕೆ ಕಂಡು 19,889.70 ಕ್ಕೆ ತಲುಪಿತ್ತು.