More

    ಇಯರ್​ ಎಂಡ್​ ಪ್ರವಾಸಕ್ಕೆ ವಿಮಾನ ಟಿಕೆಟ್​ ಖರೀದಿ; ಎಚ್ಚರಿಕೆ ವಹಿಸದಿದ್ದರೆ ವಂಚನೆ ಗ್ಯಾರಂಟಿ

    ಇಯರ್ ಎಂಡ್​ಗೆ (ವರ್ಷಾಂತ್ಯಕ್ಕೆ) ಪ್ರವಾಸ ಕೈಗೊಳ್ಳಲು ಯೋಚಿಸಿದ್ದೀರಾ. ವಿಮಾನದಲ್ಲೇನಾದರೂ ಪ್ರಯಾಣಿಸಲು ಮುಂದಾಗಿದ್ದರೆ ಹುಷಾರಾಗಿರಲೇಬೇಕು. ಫ್ಲೈಟ್ ಟಿಕೆಟ್​ ಬುಕ್​ ಮಾಡುವಾಗ ಮುನ್ನೆಚ್ಚರಿಕೆ ಅತ್ಯಗತ್ಯ. ಇಲ್ಲದಿದ್ದರೆ ಮೋಸ ಹೋಗೋದು ಗ್ಯಾರಂಟಿ.

    ವಿಮಾನ ಯಾನ ಟಿಕೆಟ್ ಬುಕ್ಕಿಂಗ್​ ಹಗರಣದ ಬಗೆಗೆ ಜಾಗತಿಕ ಪೊಲೀಸ್​ ಸಂಸ್ಥೆಯಾದ “ಇಂಟರ್​ಪೋಲ್​” ಇಂತಹ ಎಚ್ಚರಿಕೆ ನೀಡಿದೆ. ಟಿಕೆಟ್​ ಖರೀದಿಸುವ ಮೊದಲು ಜಾಗರೂಕರಾಗಿರಿ, ಎಚ್ಚರಿಕೆ ವಹಿಸದಿದ್ದರೆ ಟಿಕೆಟ್​ ಇಲ್ಲದೆಯೇ ಹಣ ಕಳೆದುಕೊಳ್ಳಬಹುದು ಎಂದು ಇಂಟರ್‌ಪೋಲ್ ಹೇಳಿದೆ.

    ವಂಚನೆ ಹೇಗೆ:
    ವಿಮಾನಯಾನ ಟಿಕೆಟ್‌ಗಳನ್ನು ಖರೀದಿಸಲು ಅಪರಾಧಿಗಳು ಕದ್ದ ಅಥವಾ ಹ್ಯಾಕ್ ಮಾಡಿದ ಕ್ರೆಡಿಟ್ ಕಾರ್ಡ್ ವಿವರಗಳನ್ನು ಬಳಸುತ್ತಾರೆ.
    ವಂಚಕರು ಈ ಟಿಕೆಟ್‌ಗಳನ್ನು ವೃತ್ತಿಪರವಾಗಿ ಕಾಣುವ ವೆಬ್‌ಸೈಟ್‌ಗಳು ಅಥವಾ ಕಾನೂನುಬದ್ಧ ಟ್ರಾವೆಲ್ ಏಜೆನ್ಸಿಗಳು ಅಥವಾ ಏಜೆಂಟರಿಗಾಗಿ ಇರುವ ಸಾಮಾಜಿಕ ನೆಟ್‌ವರ್ಕಿಂಗ್ ಖಾತೆಗಳಂತೆ ಕಾಣುವ ರೀತಿಯಲ್ಲಿಯೇ ಆನ್​ಲೈನ್​ನಲ್ಲಿ ಚೌಕಾಶಿ ಬೆಲೆಯಲ್ಲಿ ಮಾರಾಟಕ್ಕೆ ಒದಗಿಸುತ್ತಾರೆ. ಸಾಕಷ್ಟು ಡಿಸ್ಕೌಂಟ್​ ನೀಡುತ್ತಾರೆ. ಏಕೆಂದರೆ, ಅವರಿಗೆ ಎಷ್ಟೇ ಹಣ ಬಂದರೂ ಅವರಿಗೆ 100% ಪ್ರಾಫಿಟ್​.
    ಅಗ್ಗದ ಬೆಲೆಯಲ್ಲಿ ಟಿಕೆಟ್​ ನೀಡುತ್ತೇವೆ ಎನ್ನುವ ಈ ವಂಚಕರು ತಕ್ಷಣ ಹಣ ಪಾವತಿ ಮಾಡಲು ಕೇಳುತ್ತಾರೆ, ಸಾಮಾನ್ಯವಾಗಿ ನಗದು, ಬ್ಯಾಂಕ್ ವರ್ಗಾವಣೆ ಅಥವಾ ವರ್ಚುವಲ್ ಕರೆನ್ಸಿಗಳ ಮೂಲಕ ಹಣ ಪಾವತಿ ಮಾಡಿಕೊಳ್ಳುತ್ತಾರೆ. ನೀವು ಹಣ ಪಾವತಿ ಮಾಡಿದ ನಂತರ ವಂಚಕರು ನಿಮಗೆ ಫ್ಲೈಟ್ ಬುಕಿಂಗ್ ದೃಢೀಕರಣ ಕಳುಹಿಸುತ್ತಾರೆ.

    ನೀವು ಪ್ರಯಾಣಿಸುವ ಒಂದೆರಡು ದಿನ ಮೊದಲು ಅಥವಾ ಪ್ರಯಾಣಿಸುವ ದಿನದಂದೇ ಟಿಕೆಟ್​ ಕಳುಹಿಸಿಕೊಡುತ್ತಾರೆ. ಏಕೆಂದರೆ, ನಿಮಗೆ ವಂಚನೆಯಾಗಿರುವುದು ಮುಂಚಿತವಾಗಿಯೇ ತಿಳಿಯಬಾದರು ಎಂಬ ಉದ್ದೇಶದಿಂದ ಕೊನೆ ಗಳಿಗೆಯಲ್ಲಿ ಟಿಕೆಟ್​ ಕಳುಹಿಸಿಕೊಡುತ್ತಾರೆ. ಇಷ್ಟರಲ್ಲಿಯೇ ಅವರು ತಾವು ಕದ್ದಿರುವ ಅಥವಾ ಹ್ಯಾಕ್ ಮಾಡಿದ ಕ್ರೆಡಿಟ್​ ಕಾರ್ಡ್​ ವಿವರಗಳ ಮೂಲಕ ಟಿಕೆಟ್​ ರದ್ದು ಮಾಡಿ ಹಣವನ್ನು ವಾಪಸು ಪಡೆದುಕೊಂಡಿರುತ್ತಾರೆ. ಹೀಗಾಗಿ, ನಿಮ್ಮ ಟಿಕೆಟ್​ ರದ್ದಾಗಿರುವ ಜತೆಗೆ ವಂಚಕರ ಕೈಗೆ ನಿಮ್ಮ ಹಣ ಸೇರಿರುತ್ತದೆ.

    ಸುರಕ್ಷಿತ ಟಿಕೆಟ್​ ಖರೀದಿಗೆ ಕೆಲವು ಟಿಪ್ಸ್:

    • ವಿಮಾನಯಾನ ಸಂಸ್ಥೆಯಿಂದ ನೇರವಾಗಿ ಏರ್‌ಲೈನ್ ಟಿಕೆಟ್‌ಗಳನ್ನು ಬುಕ್ ಮಾಡಿ ಅಥವಾ ನಿಮ್ಮ ದೇಶದ ಸಂಬಂಧಿತ ಅಧಿಕಾರಿಗಳಿಂದ ಪ್ರಮಾಣೀಕರಿಸಲ್ಪಟ್ಟ ಪ್ರತಿಷ್ಠಿತ ಟ್ರಾವೆಲ್​ ಏಜೆನ್ಸಿಗಳಿಂದ ಖರೀದಿಸಿ.
    • ಸುರಕ್ಷಿತ ಪಾವತಿ ವ್ಯವಸ್ಥೆಗಳಿರುವ ವೆಬ್‌ಸೈಟ್‌ಗಳಿಂದ ಮಾತ್ರ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸಿ (ಉದಾ. ವೆಬ್ ವಿಳಾಸದ ಆರಂಭದಲ್ಲಿ https ಇರುವುದು).
    • ನೀವು ಟಿಕೆಟ್ ಖರೀದಿಸುತ್ತಿರುವ ಟ್ರಾವೆಲ್ಸ್​ ಏಜೆನ್ಸಿ ಕುರಿತು ತಿಳಿದುಕೊಳ್ಳಿ. ಅವರು ಕಾನೂನುಬದ್ಧ ವೆಬ್‌ಸೈಟ್ ಹೊಂದಿದ್ದಾರೆಯೇ ಎಂಬುದನ್ನು ಪರಿಶೀಲಿಸಿ.
    • ಕಂಪನಿಯ ವೆಬ್‌ಸೈಟ್‌ನಲ್ಲಿ ಇಂಟರ್​ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (IATA) ಲೋಗೋವನ್ನು ಹೊಂದಿರುವರೆ ಎಂಬುದನ್ನು ನೋಡಿ.

    ಕೆಟಿಆರ್ ಮಾಮಾ… ಹೈದರಾಬಾದ್‌ಗೆ ಡಿಸ್ನಿಲ್ಯಾಂಡ್ ತರಬಹುದೇ? ತೆಲಂಗಾಣ ಸಚಿವರಿಗೆ ಬಾಲಕಿಯ ಮುದ್ದಾದ ಬೇಡಿಕೆ

    5 ಕೆಜಿ ಉಚಿತ ರೇಶನ್​ ಯೋಜನೆ 5 ವರ್ಷ ವಿಸ್ತರಣೆ; ಮಹಿಳಾ ಗುಂಪುಗಳಿಗೆ ಡ್ರೋನ್​ ನೀಡಲು ಕೇಂದ್ರ ಸಂಪುಟ ಅನುಮೋದನೆ

    ಸಿಎಎ ಜಾರಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ; ಲೋಕಸಭೆ ಚುನಾವಣೆ ಪ್ರಚಾರ ಆರಂಭಿಸಿದ ಶಾ ಘೋಷಣೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts