More

    ಶ್ರೀಲಂಕಾದಲ್ಲಿ ಉದ್ದಿನ ವಡೆ ತಿಂದ ಪ್ರವಾಸಿಗನಿಗೆ ಕಾದಿತ್ತು ಬಿಗ್​ ಶಾಕ್​: ಇಂಥವರೂ ಇರ್ತಾರೆ ಎಚ್ಚರ!

    ಕೊಲಂಬೋ: ಭಾರತದ ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರವಾಸೋದ್ಯಮವೇ ಲಂಕಾದ ಪ್ರಮುಖ ಆದಾಯ ಮೂಲಗಳಲ್ಲಿ ಒಂದು. ಅದರಲ್ಲೂ ಲಂಕಾದ ಅನೇಕ ಸ್ಥಳೀಯರು ಪ್ರವಾಸಿಗರನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಅತಿಥಿ ದೇವೋ ಭವ ಅಂತಾರೆ ಆದರೆ, ಇಂತಹ ಅತಿಥಿಗಳಿಗೆ ವಂಚನೆ ಮಾಡಿರುವ ಪ್ರಕರಣ ಲಂಕಾದಲ್ಲಿ ನಡೆದಿದೆ.

    ಶ್ರೀಲಂಕಾದ ಪ್ರವಾಸಕ್ಕೆ ತೆರಳಿದ್ದ ಬೆಲ್ಜಿಯಂನ ಖ್ಯಾತ ಪ್ರವಾಸಿ ಯೂಟ್ಯೂಬರ್ ಟಿಮ್ ಟೆನ್ಸ್ ಲಂಕಾದಲ್ಲಿ ಮೋಸ ಹೋಗಿರುವುದಾಗಿ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಲಂಕಾದ ಕಲುತರ ನಗರ ಪ್ರವಾಸದ ಸಮಯದಲ್ಲಿ ರೆಸ್ಟೋರೆಂಟ್‌ನಲ್ಲಿ ಮೋಸ ಹೋಗಿರುವುದಾಗಿ ಟಿಮ್​ ಟೆನ್ಸ್​ ವರದಿ ಮಾಡಿದ್ದಾರೆ.

    ಟಿಮ್​ ಟೆನ್ಸ್​, ಕಲುತಾರಾಗೆ ಭೇಟಿ ನೀಡಿದ ನಂತರ ಅವರನ್ನು ನೋಡಿದ ವ್ಯಕ್ತಿಯೊಬ್ಬ ತನ್ನ ವಾಹನವನ್ನು ನಿಲ್ಲಿಸಿ, ಪ್ರವಾಸಿಗನ ಬಳಿ ಬರುತ್ತಾರೆ. ನಂತರ ಶ್ರೀಲಂಕಾದ ಉತ್ತಮ ಆಹಾರದ ಅನುಭವಕ್ಕಾಗಿ ನಿಮ್ಮನ್ನು ವಟಾನಿ ವಿಲ್ಲಾಸ್ ಎಂಬ ಸಸ್ಯಾಹಾರಿ ರೆಸ್ಟೋರೆಂಟ್‌ಗೆ ಕರೆದೊಯ್ಯುತ್ತೇನೆ ಎಂದು ಹೇಳಿ ಪ್ರವಾಸಿಗನನ್ನು ಹೋಟೆಲ್​ ಕರೆದೊಯ್ಯುತ್ತಾನೆ.

    ಟಿಮ್​ ಟೆನ್ಸ್​ ಊಟ ಮಾಡದೇ ಒಂದು ಉದ್ದಿನ ವಡೆ ಮತ್ತು ಸಾದಾ ಚಹಾವನ್ನು ಸವಿಯುತ್ತಾರೆ. ಆದರೆ, ರೆಸ್ಟೊರೆಂಟ್​ನವರು ಚಹಾಗೆ 200 ರೂ. ಮತ್ತು ಉದ್ದಿನ ವಡೆಗೆ 800 ರೂ. ಸೇರಿ ಒಟ್ಟು 1000 ರೂ. ಬಿಲ್​ ಮಾಡುತ್ತಾರೆ. ಇದರಲ್ಲಿ ಏನೋ ತಪ್ಪಾಗಿದೆ ಎಂದು ಪ್ರವಾಸಿಗನಿಗೆ ಅನಿಸುತ್ತದೆ. ಬಳಿಕ ಮತ್ತೆ ಒಂದು ಉದ್ದಿನ ವಡೆಯ ಬೆಲೆ ಎಷ್ಟು ಎಂದು ಕೇಳುತ್ತಾರೆ. ಆದರೆ, ಆತನನ್ನು ಕರೆದುಕೊಂಡು ವ್ಯಕ್ತಿ 800 ರೂ. ಎಂದು ಹೇಳುತ್ತಾನೆ.

    ಇದಾದ ಬಳಿಕ ಟಿಮ್​ ಟೆನ್ಸ್​ ಅಲ್ಲಿಯೇ ಬರುತ್ತಿದ್ದ ಮಹಿಳೆಯ ಬಳಿ ಉದ್ದಿನ ವಡೆ ದರದ ಬಗ್ಗೆ ವಿಚಾರಿಸುತ್ತಾರೆ. ಈ ವೇಳೆ ಮಹಿಳೆ 80 ರೂಪಾಯಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ಟೆನ್ಸ್​ಗೆ ತಾನೂ ಮೋಸ ಹೋಗಿರುವುದು ತಿಳಿಯುತ್ತದೆ. 80 ರೂಪಾಯಿಗೆ ಮಾರುವ ವಡೆಗೆ 800 ರೂಪಾಯಿ ಕೊಟ್ಟು ಪ್ರವಾಸಿಗರು ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ತಿಳಿದು ವಂಚಿಸುವ ಬಗ್ಗೆ ಎಚ್ಚರದಿಂದಿರಬೇಕು ಎಂದು ಟೆನ್ಸ್​ ವಿನಂತಿಸಿದ್ದಾರೆ.

    ಪ್ರವಾಸಿಗರು ಶ್ರೀಲಂಕಾದ ಕಲುತಾರಾದಲ್ಲಿ ಈ ಮನುಷ್ಯನನ್ನು ತಪ್ಪಿಸಿ ಎಂಬ ಶೀರ್ಷಿಕೆಯೊಂದಿಗೆ ಟಿಮ್​ ಟೆನ್ಸ್​, ಯೂಟ್ಯೂಬ್ ವಿಡಿಯೋದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹಣ ಸುಲಿಗೆ ಮಾಡಿದ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. (ಏಜೆನ್ಸೀಸ್​)

    ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ 2ನೇ ಮದ್ವೆಗೆ ರೆಡಿಯಾದ್ರೂ ರಜಿನಿ ಪುತ್ರಿ ಐಶ್ವರ್ಯಾ! ವರನ್ಯಾರು ಗೊತ್ತೇ?

    ಬಿಜೆಪಿ ಪ್ರಣಾಳಿಕೆ ಬಗ್ಗೆ ಪ್ರಧಾನಿ ಮೋದಿ ಏನಂದ್ರು? ಇಲ್ಲಿದೆ ನಮೋ ಭಾಷಣದ ಪ್ರಮುಖಾಂಶಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts