More

    ಟ್ರೇಡಿಂಗ್ ಶಿಕ್ಷಣ ನೆಪದಲ್ಲಿ ಟೆಕ್ಕಿಗೆ 21 ಲಕ್ಷ ರೂ. ಮೋಸ

    ಬೆಂಗಳೂರು: ಷೇರು ಮಾರ್ಕೆಟ್ ಬಗ್ಗೆ ಆನ್‌ಲೈನ್‌ನಲ್ಲಿ ತರಬೇತಿ ನೀಡುವುದಾಗಿ ನಿಧಾನವಾಗಿ ಸ್‌ಟಾವೇರ್ ಇಂಜಿನಿಯರ್‌ನ್ನು ಸೆಳೆದು ಸೈಬರ್ ಕಳ್ಳರು 21 ಲಕ್ಷ ರೂ. ವಂಚನೆ ಮಾಡಿದ್ದಾರೆ.
    ಜೆ.ಪಿ.ನಗರ 4ನೇ ಹಂತದ 39 ವರ್ಷದ ಟೆಕ್ಕಿ ವಂಚನೆಗೆ ಒಳಗಾದವರು. ಈತ ಕೊಟ್ಟ ದೂರಿನ ಮೇರೆಗೆ ದಕ್ಷಿಣ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

    ಜನವರಿ 28ರಂದು ಟೆಕ್ಕಿ ೇಸ್‌ಬುಕ್ ಖಾತೆಯಲ್ಲಿ ಟ್ರೇಡಿಂಗ್ ಬಗ್ಗೆ ಆನ್‌ಲೈನ್‌ನಲ್ಲಿ ತರಬೇತಿ ಕೊಡುವುದಾಗಿ ಜಾಹೀರಾತು ಬಂದಿದ್ದು, ಅದನ್ನು ನೋಡಿ ಆಸಕ್ತಿ ತೋರಿ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ತಕ್ಷಣ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಟೆಕ್ಕಿ ಸೇರ್ಪಡೆಯಾಗಿದ್ದು, ರಾಹುಲ್ ಸಾವಿಲ್ ಎಂಬ ವ್ಯಕ್ತಿ ಪರಿಚಯನಾಗಿದ್ದಾನೆ. ಆತ ಆನ್‌ಲೈನ್‌ನಲ್ಲಿ ಟ್ರೇಡಿಂಗ್ ಬಗ್ಗೆ ಮಾಹಿತಿ ಮತ್ತು ಶಿಕ್ಷಣ ನೀಡುತ್ತೆನೆ. ಇದೊಂದು 45 ದಿನಗಳ ಆನ್‌ಲೈನ್ ಶಿಕ್ಷಣೆ ಆಗಿರುತ್ತದೆ. ಆನಂತರ ಷೇರು ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಬಹುದು ಎಂದು ಬಿಟ್ಟಿ ಸಲಹೆ ಕೊಟ್ಟಿದ್ದಾನೆ.

    ಗ್ರೂಪ್‌ನ ಮತ್ತೊಬ್ಬ ಸದಸ್ಯ ನಿತಿನ್ ಗುಪ್ತಾ, ವಾಟ್ಸ್‌ಆ್ಯಪ್‌ನಲ್ಲಿ ಷೇರು ಖರೀದಿ ಮಾಡಬೇಕೆಂದು ಟೆಕ್ಕಿಗೆ ಸೂಚಿಸಿದ್ದಾನೆ. ಇದೊಂದು ಟ್ರೇಡಿಂಗ್ ಕುರಿತು ಶಿಕ್ಷಣ ಮತ್ತು ಮಾಹಿತಿ ನೀಡಲು ಅಗತ್ಯ. ಪ್ರತಿಯೊಬ್ಬರು ಟ್ರೇಡಿಂಗ್ ಖಾತೆ ತೆರೆದು 10 ಸಾವಿರ ರೂ.ಹೂಡಿಕೆ ಮಾಡಬೇಕೆಂದು ಹೇಳಿದ್ದ.
    ಇದನ್ನು ನಂಬಿದ ಟೆಕ್ಕಿ, ಸೈಬರ್ ಕಳ್ಳರು ಕೊಟ್ಟ ಬ್ಯಾಂಕ್ ಖಾತೆಗೆ 10 ಸಾವಿರ ರೂ. ವರ್ಗಾವಣೆ ಮಾಡಿ ಅಕೌಂಟ್ ಕ್ರಿಯೆಟ್ ಮಾಡಿಸಿಕೊಂಡಿದ್ದರು.
    ಮಾರ್ಚ್ 5ರಂದು ಮತ್ತೊಂದು ಲಿಂಕ್ ಕಳುಹಿಸಿ ಆಸಕ್ತಿ ಇದ್ದರೇ ಇದರ ಮೇಲೆ ಕ್ಲಿಕ್ ಮಾಡಿ ಹಣ ಹೂಡಿಕೆ ಮಾಡಬಹುದು ಎಂದು ಸಲಹೆ ಕೊಟ್ಟಿದ್ದರು.

    ಅಸಲಿ ಟ್ರೇಡಿಂಗ್ ಇರಬೇಕೆಂದು ಟೆಕ್ಕಿ, ಲಿಂಕ್ ಮೇಲೆ ಕ್ಲಿಕ್ ಮಾಡಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 21 ಲಕ್ಷ ರೂ. ಹೂಡಿಕೆ ಮಾಡಿದ್ದರು. ಕೊನೆಗೊಂದು ದಿನ ಟೆಕ್ಕಿ, ಹಣ ಹಿಂಪಡೆಯಲು ಪ್ರಯತ್ನಿಸಿದ್ದರು. ಆದರೆ, ಸಾಧ್ಯವಾಗುವುದಿಲ್ಲ. ಟ್ರೇಡಿಂಗ್ ತರಬೇತಿ ಕೊಟ್ಟವರಿಗೆ ಕರೆ ಮಾಡಲು ಪ್ರಯತ್ನಿಸಿದಾಗ ಸಂಪರ್ಕ ಲಭ್ಯವಾಗಿಲ್ಲ. ಇದೊಂದು ವಂಚನೆ ಜಾಲ ಎಂಬುದು ಗೊತ್ತಾಗಿ ಸ್‌ಟಾವೇರ್ ಇಂಜಿನಿಯರ್, ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts