More

    ಲವ್ ಜಿಹಾದ್ ವಿರುದ್ಧ ಕ್ರಮ ಜರುಗಿಸಲು ಮನವಿ

    ಸವಣೂರ: ಶಾಲಾ, ಕಾಲೇಜ್​ಗೆ ತೆರಳುವ ವಿದ್ಯಾರ್ಥಿನಿಯರಿಗೆ ಚುಡಾಯಿಸುವ ಪುಂಡರಿಗೆ ಹಾಗೂ ಲವ್ ಜಿಹಾದ್ ಕೃತ್ಯ ಮೇಲೆ ನಿಗಾವಹಿಸಿ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಸಿಪಿಐ ಶಶಿಧರ ಅವರಿಗೆ ವಿದ್ಯಾರ್ಥಿಗಳ ಪಾಲಕರು ಹಾಗೂ ಸಾರ್ವಜನಿಕರು ಸೋಮವಾರ ಮನವಿ ಸಲ್ಲಿಸಿದರು.

    ಪಟ್ಟಣದ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಪದವಿ ಕಾಲೇಜ್ ಸೇರಿದಂತೆ ಪಟ್ಟಣದ ವಿವಿಧ ಶಾಲಾ, ಕಾಲೇಜ್​ಗಳಿಗೆ ತೆರಳುವ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾರ್ಥಿನಿಯರಿಗೆ ನಿತ್ಯ ಕಿರಿಕಿರಿ ನೀಡಿ, ಲವ್ ಜಿಹಾದ್​ಗೆ ಪ್ರಚೋದನೆ ನೀಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.

    ಇಂತಹ ಪ್ರಕರಣ ಹೆಚ್ಚಿದ ಹಿನ್ನೆಲೆಯಲ್ಲಿ ಶಾಲಾ, ಕಾಲೇಜ್​ಗಳಿಗೆ ವಿದ್ಯಾರ್ಥಿನಿಯರು ತೆರಳುವುದು ಕಷ್ಟಕರವಾಗುತ್ತಿದೆ. ಕೆಲ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿರುವುದು ಖೇದಕರ ಸಂಗತಿ. ಇಂತಹ ಹೀನ ಕೃತ್ಯಕ್ಕೆ ಕೈಹಾಕುವ ಪುಂಡ ಪುಡಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ವಿದ್ಯಾರ್ಥಿನಿಯರ ವಿದ್ಯಾರ್ಜನೆಗೆ ಅನೂಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಸಿಪಿಐ ಶಶಿಧರ ಮನವಿ ಸ್ವೀಕರಿಸಿ, ಈ ಕುರಿತು ಹೆಚ್ಚಿನ ಮಾಹಿತಿ ಪಡೆದು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

    ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಪದವಿ ಕಾಲೇಜ್ ಪ್ರಾಚಾರ್ಯ ಗಂಗಾ ನಾಯ್ಕ, ಪ್ರಮುಖರಾದ ಪ್ರವೀಣ ಚರಂತಿಮಠ, ಪ್ರವೀಣ ಬಾಲೇಹೊಸೂರ, ಸಮೀತ್ ಕೆಮ್ಮಣಕೆರಿ, ಸಂತೋಷಗೌಡ ಕೆಂಚನಗೌಡ್ರ, ವೀರೇಶ ಕಳಕಪ್ಪನವರ, ವಿನಾಯಕ ಕುಲಕರ್ಣಿ, ಪ್ರವೀಣ ರಾಗಿ, ರಾಘವೇಂದ್ರ ಜೋಗಿ, ದರ್ಶನ ಅರಳಿಕಟ್ಟಿ, ಸುನೀಲ ಹೊಸೂರ, ಮಹೇಶ ಜಡಿ, ಹರೀಶ ಅಚಲಕರ, ಕುಮಾರ ಉಪ್ಪಿನ, ಸಚಿನ ಕಲಾಲ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts