More

    ರೂ. 45,000 ಕೋಟಿ ಬೆಲೆಯ ಖನಿಜಗಳ ಗಣಿ ಹರಾಜು; ಜಗತ್ತಿನ ಉದ್ದಿಮೆದಾರರನ್ನು ಆಹ್ವಾನಿಸಿದ ಪ್ರಲ್ಹಾದ ಜೋಶಿ

    ನವದೆಹಲಿ: ಖನಿಜಗಳ ಗಣಿ ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಜಗತ್ತಿನಾದ್ಯಂತ ಇರುವ ಉದ್ದಿಮೆದಾರರನ್ನು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಆಹ್ವಾನಿಸಿದ್ದಾರೆ.

    ಈ ನಿರ್ಣಾಯಕ ಖನಿಜಗಳ ಹರಾಜಿನ ಮೊದಲ ಕಂತಿನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಜೋಶಿ, ದೇಶದಲ್ಲಿ ಇದೇ ಮೊದಲ ಬಾರಿಗೆ ಬಹುದೊಡ್ಡ ಪ್ರಮಾಣದಲ್ಲಿ ಖನಿಜ ಬ್ಲಾಕ್‌ಗಳ ಹರಾಜು ನಡೆಯುತ್ತಿದೆ ಎಂದರು.

    “ಭಾರತದ ಮೊದಲ ಬಾರಿಗೆ ನಿರ್ಣಾಯಕ ಖನಿಜ ಬ್ಲಾಕ್‌ಗಳ ಹರಾಜಿನಲ್ಲಿ ಭಾಗವಹಿಸಲು ಜಗತ್ತಿನಾದ್ಯಂತದ ನಿರೀಕ್ಷಿತ ಬಿಡ್‌ದಾರರನ್ನು ಆಹ್ವಾನಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ” ಎಂದು ಅವರು ಹೇಳಿದರು.

    ಬಿಹಾರ, ಛತ್ತೀಸ್‌ಗಢ, ಗುಜರಾತ್, ಜಾರ್ಖಂಡ್, ತಮಿಳುನಾಡು, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ 20 ಬ್ಲಾಕ್‌ಗಳ ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳನ್ನು ಹರಾಜು ಮಾಡಲಾಗುವುದು ಎಂದು ಅವರು ಹೇಳಿದರು.
    ಈ 20 ಬ್ಲಾಕ್‌ಗಳು ಮೌಲ್ಯವು 45,000 ಕೋಟಿ ರೂಪಾಯಿ ಆಗಿದೆ ಎಂದು ಅಂದಾಜಿಸಲಾಗಿದೆ ಎಂದು ಸಚಿವರು ತಿಳಿಸಿದರು.

    “ನಂತರದ ಹರಾಜಿನಲ್ಲಿ ನಿರ್ಣಾಯಕ ಖನಿಜಗಳ ಇನ್ನಷ್ಟು ಬ್ಲಾಕ್​ಗಳನ್ನು ಸೇರಿಸುತ್ತೇವೆ. ಇದಕ್ಕೆ ಸಂಬಂಧಿತ ಷರತ್ತುಗಳನ್ನು ತಿದ್ದುಪಡಿ ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದರು.

    ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇಂತಹ ಖನಿಜಗಳ ಬೇಡಿಕೆಯನ್ನು ಸಾಮಾನ್ಯವಾಗಿ ಆಮದುಗಳಿಂದ ಪೂರೈಸಲಾಗುತ್ತದೆ. ನಿರ್ಣಾಯಕ ಖನಿಜಗಳು ನವೀಕರಿಸಬಹುದಾದ ಶಕ್ತಿ, ರಕ್ಷಣೆ ಮತ್ತು ಕೃಷಿಯಂತಹ ಕ್ಷೇತ್ರಗಳ ಅಗತ್ಯಗಳನ್ನು ಪೂರೈಸುತ್ತವೆ. ಆನ್‌ಲೈನ್‌ನಲ್ಲಿ ಹರಾಜು ನಡೆಯಲಿದೆ ಎಂದು ಗಣಿ ಸಚಿವಾಲಯ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

    “ಇದು ನಮ್ಮ ಆರ್ಥಿಕತೆಯನ್ನು ಹೆಚ್ಚಿಸುವ, ರಾಷ್ಟ್ರೀಯ ಭದ್ರತೆಯನ್ನು ವರ್ಧಿಸುವ ಮತ್ತು ಶುದ್ಧ ಇಂಧನ ಭವಿಷ್ಯಕ್ಕೆ ನಮ್ಮ ಪರಿವರ್ತನೆಯನ್ನು ಬೆಂಬಲಿಸುವ ಹೆಗ್ಗುರುತು ಉಪಕ್ರಮವಾಗಿದೆ” ಎಂದೂ ಸಚಿವಾಲಯ ಹೇಳಿದೆ.

    “ಈ ಖನಿಜಗಳ ಲಭ್ಯತೆಯ ಕೊರತೆ ಅಥವಾ ಕೆಲವು ದೇಶಗಳಲ್ಲಿ ಅವುಗಳ ಹೊರತೆಗೆಯುವಿಕೆ ಅಥವಾ ಸಂಸ್ಕರಣೆಯ ಸಾಂದ್ರತೆಯು ಪೂರೈಕೆ ಸರಪಳಿ ದುರ್ಬಲತೆಗೆ ಕಾರಣವಾಗಬಹುದು. ಭವಿಷ್ಯದ ಜಾಗತಿಕ ಆರ್ಥಿಕತೆಯು ಲಿಥಿಯಂ, ಗ್ರ್ಯಾಫೈಟ್, ಕೋಬಾಲ್ಟ್, ಟೈಟಾನಿಯಂ ಮತ್ತು ಅಪರೂಪದ ಖನಿಜಗಳ ಮೇಲೆ ಅವಲಂಬಿತವಾಗಿರುವ ತಂತ್ರಜ್ಞಾನಗಳಿಂದ ಆಧಾರವಾಗಿದೆ,” ಎಂದು ಅದು ತಿಳಿಸಿದೆ.

    ಕೇಂದ್ರ ಸರ್ಕಾರದ ಜತೆ ಐತಿಹಾಸಿಕ ಶಾಂತಿ ಒಪ್ಪಂದ; ಶಸ್ತ್ರ ತೊರೆದ ಯುಎನ್​ಎಲ್​ಎಫ್​ ಬಂಡುಕೋರರು

    ಇಯರ್​ ಎಂಡ್​ ಪ್ರವಾಸಕ್ಕೆ ವಿಮಾನ ಟಿಕೆಟ್​ ಖರೀದಿ; ಎಚ್ಚರಿಕೆ ವಹಿಸದಿದ್ದರೆ ವಂಚನೆ ಗ್ಯಾರಂಟಿ

    5 ಕೆಜಿ ಉಚಿತ ರೇಶನ್​ ಯೋಜನೆ 5 ವರ್ಷ ವಿಸ್ತರಣೆ; ಮಹಿಳಾ ಗುಂಪುಗಳಿಗೆ ಡ್ರೋನ್​ ನೀಡಲು ಕೇಂದ್ರ ಸಂಪುಟ ಅನುಮೋದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts