

ಬಾಗಲಕೋಟೆ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಣ ಹಂಚಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಮತ್ತೊಂದು ಕಡೆ ದಾಖಲೆರಹಿತ ಕೋಟಿಗಟ್ಟಲೆ ಮೊತ್ತ ಸಿಕ್ಕಿದೆ. ಅದರಲ್ಲೂ ವಾಹನವೊಂದರಲ್ಲೇ ಕಂತೆ ಕಂತೆ ನೋಟುಗಳು ಸಿಕ್ಕಿದ್ದು, 5 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ.
ಮುಧೋಳ ಚುನಾವಣಾಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಲೋಕಾಪುರ ಪೊಲೀಸರು ಜತೆಯಾಗಿ ಲೋಕಾಪುರ ಪಟ್ಟಣ ಬಳಿ ಕಾರ್ಯಾಚರಣೆ ನಡೆಸಿದ್ದಾರೆ. ಲೋಕಾಪುರ ಬಳಿ ಲಕ್ಷಾನಟ್ಟಿ ಚೆಕ್ಪೋಸ್ಟ್ನಲ್ಲಿ ನಿನ್ನೆ ರಾತ್ರಿ ವಾಹನ ತಪಾಸಣೆ ವೇಳೆ ಈ ಅಪಾರ ಪ್ರಮಾಣದ ಹಣ ಸಿಕ್ಕಿದೆ.