

ಮಂಡ್ಯ: ಸಕ್ಕರೆ ನಾಡು ಮಂಡ್ಯ ಭೀಕರ ಕೃತ್ಯವೊಂದಕ್ಕೆ ಸಾಕ್ಷಿಯಾಗಿದೆ. ಇಲ್ಲೊಬ್ಬ ವ್ಯಕ್ತಿ ಅಣ್ಣನ ಹೆಂಡತಿ ಹಾಗೂ ಮಗನನ್ನು ಹೊಡೆದು ಕಡಿದು ಕೊಲೆ ಮಾಡಿದ್ದಾನೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಇಂಥದ್ದೊಂದು ಭಯಂಕರ ಪ್ರಕರಣ ನಡೆದಿದೆ.
ಶಾಂತಮ್ಮ (40) ಮತ್ತು ಆಕೆಯ ಪುತ್ರ ಯಶ್ವಂತ್ (17) ಕೊಲೆಯಾದ ದುರ್ದೈವಿಗಳು. ಈಕೆಯ ಪತಿಯ ತಮ್ಮ ಸತೀಶ್ ಎಂಬಾತನೇ ಕೊಲೆ ಆರೋಪಿ. ಮಂಡ್ಯ ಜಿಲ್ಲೆಯ ಪಾಂಡವಪುರದ ಹೆಗ್ಗಡಹಳ್ಳಿಯಲ್ಲಿ ಈ ಪ್ರಕರಣ ನಡೆದಿದೆ.
ಇಂದು ಜಮೀನು ಬಳಿ ಜಗಳವಾದ ಬಳಿಕ ಈ ಕೊಲೆ ಪ್ರಕರಣ ನಡೆದಿದೆ. ಜಮೀನಿಗೆ ನೀರು ಹಾಯಿಸುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು, ಬಳಿಕ ಸತೀಶ್ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ್ದಲ್ಲದೆ ಕುಡುಗೋಲಿನಿಂದ ಕಡಿದು ಕೊಲೆ ಮಾಡಿದ್ದಾನೆ. ಆ ನಂತರ ಆತ ಪೊಲೀಸರಿಗೆ ಶರಣಾಗಿದ್ದು, ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.